Saturday, August 30, 2025
Homeರಾಜ್ಯಬಾನು ಮುಷ್ತಾಕ್‌ ಆಯ್ಕೆಯಿಂದ ನಮ್ಮಆಚರಣೆಗೆ ಧಕ್ಕೆ ಇಲ್ಲ : ರಾಜಮಾತೆ ಪ್ರಮೋದಾ ದೇವಿ

ಬಾನು ಮುಷ್ತಾಕ್‌ ಆಯ್ಕೆಯಿಂದ ನಮ್ಮಆಚರಣೆಗೆ ಧಕ್ಕೆ ಇಲ್ಲ : ರಾಜಮಾತೆ ಪ್ರಮೋದಾ ದೇವಿ

Bhanu Mushtaq's selection does not affect our celebrations: Rajmata Pramoda Devi

ಮೈಸೂರು, ಆ.30- ದಸರಾ ಉದ್ಘಾಟನೆಗೆ ಸಾಹಿತಿ ಭಾನುಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವುದಕ್ಕೆ ತಮ ಕಡೆಯಿಂದ ಯಾವುದೇ ಅಭಿಪ್ರಾಯಗಳಿಲ್ಲ ಎಂದು ಮೈಸೂರು ರಾಜಮನೆತನದ ಪ್ರಮೋದಾ ದೇವಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರ ತನ್ನ ಇಚ್ಚಾನುಸಾರ ಆಹ್ವಾನ ನೀಡಿದೆ. ಆಹ್ವಾನ ಪಡೆದುಕೊಂಡವರು ದಸರಾ ಉದ್ಘಾಟನೆಗೆ ಬರುತ್ತೇನೆ ಅಥವಾ ಇಲ್ಲ ಎಂದು ಹೇಳುವುದು ಅವರ ಸ್ವಇಚ್ಚೆ. ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದರು.

ಅನ್ಯ ಧರ್ಮದವರು ಪೂಜೆ ಮಾಡುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಯಾರೂ ಹೇಳುತ್ತಿದ್ದಾರೋ ಅವರೇ ಸ್ಪಷ್ಟನೆಗಳನ್ನು ನೀಡಬೇಕು. ಪೂಜಾ ವಿಧಾನಗಳಿಗೆ ಧಕ್ಕೆಯಾಗುವ ಬಗ್ಗೆ ಸರ್ಕಾರ ಉತ್ತರಿಸಬೇಕು. ಸರ್ಕಾರದಿಂದ ಅಚರಿಸುವ ದಸರಾ ನಮ ಪರಂಪರೆಯ ಭಾಗ ಅಲ್ಲ. ಅದರಲ್ಲಿ ರಾಜಮನೆತನದ ಸಹಭಾಗಿತ್ವ ಅಗಲೀ, ಮಧ್ಯಸ್ಥಿಕೆಯಾಗಲೀ ಇಲ್ಲ. ನಾವು ಹಿಂದಿನಿಂದ ನಡೆದುಕೊಂಡು ಬಂದ ಸಾಂಪ್ರದಾಯಗಳಂತೆ ಖಾಸಗಿ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.

ಪ್ರತಿ ಬಾರಿ 5 ವರ್ಷಕ್ಕೊಮೆ ಸರ್ಕಾರ ಬದಲಾದಾಗ ಅವರಿಗೆ ಬೇಕಾದಂತೆ ಆಚರಣೆಗಳನ್ನು ಮಾಡಿಕೊಳ್ಳುತ್ತಾರೆ. ರಾಜಮನೆತನದ ಖಾಸಗಿ ಆಚರಣೆಗಳು ನಿರಂತರವಾಗಿ ಶಾಶ್ವತವಾಗಿರುತ್ತವೆ ಎಂದರು.

ಪ್ರಜಾಪ್ರಭುತ್ವದಲ್ಲಿ 5 ವರ್ಷಕ್ಕೊಮೆ ಸರ್ಕಾರಗಳು ಬದಲಾಗಬಹುದು ಅಥವಾ ಇರುವ ಸರ್ಕಾರವೇ ಉಳಿದುಕೊಳ್ಳಬಹುದು. ಹೀಗಾಗಿ ನಮ ಪಾತ್ರ ಸರ್ಕಾರದ ದಸರಾ ಆಚರಣೆಯಲ್ಲಿ ಇರುವುದಿಲ್ಲ. ದಸರಾ ಮೆರವಣಿಗೆಗೆ ರಾಜಮನೆತನದಿಂದ ಯಾರಾದರೂ ಬಂದರೆ ಚೆನ್ನಾಗಿರುತ್ತದೆ ಎಂದು ಸರ್ಕಾರ ಆಹ್ವಾನ ನೀಡುತ್ತದೆ. ನಾನು ಅಂಬಾರಿಯ ಕಡೆ ಗಮನ ನೀಡುವುದರಿಂದ ಹೋಗುವುದಿಲ್ಲ. ನಮ ಮನೆಯಿಂದ ಯಾರಾದರೂ ಒಬ್ಬರು ಹೋಗುತ್ತಾರೆ ಎಂದರು.

ಭಾನುಮುಷ್ತಾಕ್‌ ಅವರ ಹೇಳಿಕೆಗಳ ಬಗ್ಗೆಯೂ ತಾವು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಈಗ ಆಗಿರುವ ರಾಜಕೀಯವೇ ಸಾಕು ಎಂದರು.

ವಿವಾದ ಹೊಸದಲ್ಲ:
ಚಾಮುಂಡೇಶ್ವರಿ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಈಗಿರುವ ಸಂವಿಧಾನದಲ್ಲಿ ಅವಕಾಶ ಇಲ್ಲ. ದೇವಸ್ಥಾನದ ವಹಿವಾಟು ನಿರ್ವಹಣೆಯಲ್ಲಿ ತೊಂದರೆಯಿದ್ದರೆ ಅದನ್ನು ತಾತ್ಕಾಲಿಕವಾಗಿ ಪರಿಶೀಲಿಸಿ, ಸರಿಪಡಿಸಿ ಮತ್ತೆ ವಾಪಸ್‌‍ ನೀಡಬೇಕಾಗುತ್ತದೆ. ಆ ಕೆಲಸ ಇಲ್ಲಿವರೆಗೂ ಏಕೆ ಆಗಿಲ್ಲ ಎಂದು ಸರ್ಕಾರವೇ ಹೇಳಬೇಕು ಎಂದರು.

ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವುದರಿಂದ ತಾವು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ ಪ್ರಾಧಿಕಾರ ಬೇಕಿಲ್ಲ ಎಂಬುವುದು ನಮ ಅಭಿಪ್ರಾಯ ಎಂದರು.

ಸರ್ಕಾರ ರಚಿಸಿರುವ ಪ್ರಾಧಿಕಾರ ಕುರಿತಂತೆ ನ್ಯಾಯಾಲಯದಲ್ಲಿ ತಗಾದೆಯಿದೆ. ಅಲ್ಲಿನ ತೀರ್ಪನ್ನು ಕಾಯುತ್ತಿದ್ದೇವೆ. ಪ್ರಾಧಿಕಾರ ರಚನೆಯಲ್ಲಿ ರಾಜಕೀಯ ಬೆರೆಸಲು ಇಚ್ಚಿಸುವುದಿಲ್ಲ. ಈ ಸರ್ಕಾರ, ಆ ಸರ್ಕಾರ ಎಂಬುದಕ್ಕಿಂತಲೂ 1976ರಿಂದ ಸುಮಾರು 40 ವರ್ಷಗಳಿಂದಲೂ ವಿವಾದ ಇದೆ. ಶ್ರೀಕಂಠದತ್ತ ಒಡೆಯರ್‌ ಅವರು ಬದುಕಿದ್ದಾಗಲೂ ತಗಾದೆ ಇತ್ತು. ಇದು ಹೊಸದಲ್ಲ, ಈಗ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಸಿಕ್ಕಿದೆಯಷ್ಟೆ ಎಂದರು.

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯಿಂದ ನಾನು ಮನಸ್ಸಿಗೆ ನೋವು ಮಾಡಿಕೊಂಡಿಲ್ಲ. ಯಾರೂ ಏನೋ ಹೇಳಿದರು ಎಂದಾಕ್ಷಣ ನಾವು ನೋವು ಮಾಡಿಕೊಂಡರೆ ಬದುಕಲು ಕಷ್ಟ. ಅವರ ಅಭಿಪ್ರಾಯಗಳನ್ನು ಅವರು ಹೇಳಿಕೊಳ್ಳುತ್ತಾರೆ. ಅದಕ್ಕೆ ಹೆಚ್ಚಿನ ಗಮನ ಕೊಡುವ ಅಗತ್ಯವಿಲ್ಲ. ನಮ ಮನಸ್ಸಿನಲ್ಲಿರುವ ಭಾವನೆಯಂತೂ ದೃಢವಾಗಿರುತ್ತದೆ ಎಂದರು.

ಕಳೆದೆರಡು ದಿನಗಳ ಹಿಂದೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯಕ್ಕೆ ದೇವಸ್ಥಾನವನ್ನು ಬಿಡಲಿಲ್ಲವಲ್ಲಾ, ಟೀಕೆ ಮಾಡಿದರಲ್ಲ ಎಂದು ಬೇಸರವಾಗಿ ನಾನು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

RELATED ARTICLES

Latest News