Wednesday, October 16, 2024
Homeರಾಷ್ಟ್ರೀಯ | Nationalಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಪ್ರಮಾಣ ವಚನ

ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಪ್ರಮಾಣ ವಚನ

ನವದೆಹಲಿ,ಜೂ.24- ಏಳು ಬಾರಿ ಸಂಸದರಾಗಿರುವ ಭರ್ತಹರಿ ಮಹತಾಬ್ ಅವರು ಇಂದು 18ನೇ ಲೋಕಸಭೆಗೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಂಗಾಮಿ ಸ್ಪೀಕರ್ ಭರ್ತೃಹರಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಆದಾಗ್ಯೂ, ಹಂಗಾಮಿ ಸ್ಪೀಕರ್ ಆಗಿ ಇವರನ್ನು ನೇಮಿಸಿದ್ದಕ್ಕಾಗಿ ಪ್ರತಿಪಕ್ಷಗಳು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿವೆ.

ಎಂಟು ಅವಧಿಯ ಲೋಕಸಭಾ ಸದಸ್ಯರಾಗಿರುವ ಅತ್ಯಂತ ಹಿರಿಯ ಸದಸ್ಯ ಕೋಡಿಕುನ್ನಿಲ್ ಸುರೇಶ್ ಅವರನ್ನು ಕಡೆಗಣಿಸಿ ಭರ್ತೃಹರಿ ಅವರನ್ನು ಹಂಗಾಮಿ ಸ್ಪೀಕರ್ ಮಾಡಿರುವುದು ತರವಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಸುರೇಶ್ ಅವರನ್ನು ದೂರವಿಡಲಾಗಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

1957 ರಲ್ಲಿ ಜನಿಸಿದ ಮಹತಾಬ್ ಒಡಿಶಾದ ಮೊದಲ ಮುಖ್ಯಮಂತ್ರಿ ದಿವಂಗತ ಹರೇಕಷ್ಣ ಮಹತಾಬ್ ಅವರ ಮಗ. ಭದ್ರಕ್ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ತಮ ಚುನಾವಣಾ ಅಫಿಡವಿಟ್ನ ಪ್ರಕಾರ 1978 ರಲ್ಲಿ ಉತ್ಕಲ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ನಂತರ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.

ಕೆಲವು ದಶಕಗಳ ಕಾಲ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತತ್ವದ ಬಿಜು ಜನತಾ ದಳ (ಬಿಜೆಡಿ) ನ ಭಾಗವಾಗಿದ್ದ ನಂತರ ಮಹತಾಬ್ 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡರು. ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತರುವಾಯ, ಅವರು ಬಿಜೆಪಿಗೆ ಸೇರಿದರು, ಅದು ನಂತರ ಅವರನ್ನು ಕಟಕ್ ಸ್ಥಾನಕ್ಕೆ ತನ್ನ ಅಭ್ಯರ್ಥಿ ಎಂದು ಘೋಷಿಸಿತು. 2024 ರ ಚುನಾವಣೆಯಲ್ಲಿ, ಮಹತಾಬ್ ಅವರು ತಮ ಹಿಂದಿನ ಪಕ್ಷದ ಸಹೋದ್ಯೋಗಿ ಸಂತಪ್‌್ಟ ಮಿಶ್ರಾ ಅವರನ್ನು 57,077 ಮತಗಳಿಂದ ಸೋಲಿಸುವ ಮೂಲಕ ಸತತ ಏಳನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ಧಾರೆ.

RELATED ARTICLES

Latest News