ಭೋಪಾಲ್, ಜು.1– ಪಾಪಿಯೊಬ್ಬ ಲಿವ್ ಇನ್ ಸಂಗಾತಿಯನ್ನು ಕೊಂದು ಶವವನ್ನು ಕಂಬಳಿಯಲ್ಲಿ ಸುತ್ತಿಟ್ಟು ಶವದೊಂದಿಗೆ ಎರಡು ದಿನ ಮಲಗಿದ್ದ ಭೀಕರ ಘಟನೆ ಭೋಪಾಲ್‌ನ ಗಾಯತ್ರಿ ನಗರದಲ್ಲಿ ನಡೆದಿದೆ.
32 ವರ್ಷದ ಸಚಿನ್ ರಜಪೂತ್ ಎಂಬಾತ 28 ವರ್ಷದ ರಿತಿಕಾ ಸೇನ್‌ಳನ್ನು ಕೊಂದಿದ್ದಲ್ಲದೆ, ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಎರಡು ರಾತ್ರಿಗಳು ಅದರ ಪಕ್ಕದಲ್ಲಿ ಏನೂ ಆಗಿಲ್ಲ ಎನ್ನುವಂತೆ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ಜೂನ್ 27 ರ ರಾತ್ರಿ ತೀವ್ರ ವಾಗ್ವಾದದ ನಂತರ ಕೊಲೆ ನಡೆದಿದೆ. ನಿರುದ್ಯೋಗಿ ಮತ್ತು ಅಸೂಯೆಯಿಂದ ಬಳಲುತ್ತಿದ್ದ ಸಚಿನ್, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರಿತಿಕಾಳ ಮೇಲೆ ತನ್ನ ಬಾಸ್ ಜೊತೆ ಸಂಬಂಧವಿದೆ ಎಂದು ಶಂಕಿಸಿದ್ದ ಎನ್ನಲಾಗಿದೆ.
ವಾಗ್ವಾದ ಹಿಂಸಾತ್ಮಕವಾಗಿ ತಿರುಗಿತು ಮತ್ತು ಕೋಪದಿಂದ ಆಕೆಯನ್ನು ಕತ್ತು ಹಿಸುಕಿ ಕೊಂದನು. ಆದರೆ ನಂತರ ಸಚಿನ್ ದೇಹವನ್ನು ಎಚ್ಚರಿಕೆಯಿಂದ ಹಾಳೆಯಲ್ಲಿ ಸುತ್ತಿ, ಹಾಸಿಗೆಯ ಮೇಲೆ ಬಿಟ್ಟು – ಅದೇ ಕೋಣೆಯಲ್ಲಿಯೇ ಇದ್ದ. ಪೊಲೀಸರ ಪ್ರಕಾರ, ಅವನು ಎರಡು ದಿನಗಳ ಕಾಲ ದೇಹದ ಪಕ್ಕದಲ್ಲಿ ಮಲಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆತಭಾರೀ ಪ್ರಮಾಣದಲ್ಲಿ ಮದ್ಯಪಾನ ಮಾಡಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಕುಡಿದು ಚಡಪಡಿಸುತ್ತಿದ್ದ ಆತ ಎರಡು ದಿನಗಳ ನಂತರ ಮಿಸ್ರೋಡ್‌ನಲ್ಲಿರುವ ತನ್ನ ಸ್ನೇಹಿತ ಅನುಜ್‌ಗೆ ಕೊಲೆಯ ವಿಚಾರ ತಿಳಿಸಿದ್ದಾನೆ.ಆದರೆ ಮರುದಿನ ಬೆಳಿಗ್ಗೆ ಸಚಿನ್ ಅದೇ ತಪ್ಪೆಪ್ಪಿಗೆಯನ್ನು ಪುನರಾವರ್ತಿಸಿದಾಗ, ಅನುಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬಜಾರಿಯಾ ಪೊಲೀಸರು ಬಾಡಿಗೆ ಮನೆಗೆ ತಲುಪಿದಾಗ, ಸಚಿನ್ ವಿವರಿಸಿದಂತೆ, ರಿತಿಕಾಳ ಕೊಳೆತ ದೇಹವು ಅದೇ ಕಂಬಳಿಯಲ್ಲಿ ಸುತ್ತಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಅವರು ಕಂಡುಕೊಂಡರು. ಅವರು ಮೂರುವರೆ ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-08-2025)
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ