Thursday, December 19, 2024
Homeರಾಷ್ಟ್ರೀಯ | Nationalಬೇನಾಮಿ ಆಸ್ತಿ ಪ್ರಕರಣದಲ್ಲಿ ಅಜಿತ್‌ ಪವಾರ್‌ಗೆ ಕ್ಲೀನ್‌ಚಿಟ್‌

ಬೇನಾಮಿ ಆಸ್ತಿ ಪ್ರಕರಣದಲ್ಲಿ ಅಜಿತ್‌ ಪವಾರ್‌ಗೆ ಕ್ಲೀನ್‌ಚಿಟ್‌

ಮುಂಬೈ,ಡಿ.7- ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಆದಾಯ ತೆರಿಗೆ ಇಲಾಖೆಯು 2021 ರಲ್ಲಿ ವಶಪಡಿಸಿಕೊಂಡ 1,000 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಬಿಡುಗಡೆ ಮಾಡಲಾಗಿದೆ. ಬೇನಾಮಿ ಆಸ್ತಿ ವಹಿವಾಟು ತಡೆ ಮೇಲನವಿ ನ್ಯಾಯಮಂಡಳಿ ಪವಾರ್‌ ಕುಟುಂಬ ಬೇನಾಮಿ ಆಸ್ತಿ ಹೊಂದಿದ್ದಾರೆ. ಎಂಬ ಆರೋಪಗಳನ್ನು ವಜಾಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದೇವೇಂದ್ರ ಫಡ್ನವಿಸ್‌‍ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಪವಾರ್‌ ಅವರು ಶಿವಸೇನೆಯ ಏಕನಾಥ್‌ ಶಿಂಧೆ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಈ ತೀರ್ಪು ಬಂದಿದೆ.

ಅವರು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ 2021 ರ ಅಕ್ಟೋಬರ್‌ 7 ರಂದು ಎನ್‌ಸಿಪಿ ನಾಯಕ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಈ ಪ್ರಕರಣದಲ್ಲಿ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್‌, ಗೋವಾದ ರೆಸಾರ್ಟ್‌ ಸೇರಿದಂತೆ ಹಲವು ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಆದಾಗ್ಯೂ, ತನಿಖೆಗಳು, ಯಾವುದೇ ಆಸ್ತಿಯನ್ನು ಅಜಿತ್‌ ಪವಾರ್‌ ಹೆಸರಿನಲ್ಲಿ ನೋಂದಾಯಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ನ್ಯಾಯಪೀಠವು ಆರೋಪಗಳನ್ನು ತಿರಸ್ಕರಿಸಿತು. ಕಾನೂನುಬದ್ಧ ಹಣಕಾಸು ಮಾರ್ಗಗಳನ್ನು ಬಳಸುವುದಕ್ಕಾಗಿ ಆಸ್ತಿಗಳನ್ನು ಪಾವತಿಸಲಾಗಿದೆ ಎಂದು ಹೇಳಿರುವ ಐಟಿ ಇಲಾಖೆಯು ಬೇನಾಮಿ ಆಸ್ತಿ ಮತ್ತು ಪವಾರ್‌ ಕುಟುಂಬದ ನಡುವೆ ಯಾವುದೇ ಸಂಪರ್ಕವನ್ನು ಸ್ಥಾಪಿಸಲು ವಿಫಲವಾಗಿದೆ ಎಂದು ಹೇಳಿದೆ.

RELATED ARTICLES

Latest News