Wednesday, January 15, 2025
Homeಕ್ರೀಡಾ ಸುದ್ದಿ | Sportsಟೀಮ್‌ ಇಂಡಿಯಾ ಆಟಗಾರರ ಪತ್ನಿಯರು, ಪ್ರೇಯಸಿಯರಿಗೆ ಬಿಗ್‌ಶಾಕ್‌..!

ಟೀಮ್‌ ಇಂಡಿಯಾ ಆಟಗಾರರ ಪತ್ನಿಯರು, ಪ್ರೇಯಸಿಯರಿಗೆ ಬಿಗ್‌ಶಾಕ್‌..!

Big shock for the wives and girlfriends of Team India players

ಬೆಂಗಳೂರು, ಜ.14- ಎತ್ತಿಗೆ ಜ್ವರ ಬಂದರೆ ಎಮೆಗೆ ಬರೆ ಎಳೆದಂತೆ ಎಂಬ ಮಾತಿನಂತೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿ ಸೋಲಿನ ನಂತರ ಬಿಸಿಸಿಐ ಟೀಮ್‌ ಇಂಡಿಯಾ ಆಟಗಾರರ ಪತ್ನಿಯರು ಹಾಗೂ ಪ್ರೇಯಸಿಯರ ವಿಷಯದಲ್ಲಿ ಕಟ್ಟುನಿಟ್ಟಿನ ನಿಲುವು ತಾಳಿದೆ.

ವಿದೇಶಿ ನೆಲಗಳಲ್ಲಿ ಒಂದೂವರೆ ತಿಂಗಳಿಗಿಂತ ಹೆಚ್ಚಿನ ಕಾಲದ ಸರಣಿ ನಡೆದರೆ, ಆಟಗಾರರ ಪ್ರೇಯಸಿಯರು ಹಾಗೂ ಕುಟುಂಬದವರು ಎರಡು ವಾರಕ್ಕಿಂತ ಹೆಚ್ಚಿನ ದಿನ ಆಟಗಾರರೊಂದಿಗೆ ಕಾಲ ಕಳೆಯಬಾರದು ಎಂಬ ಕಠಿಣ ನಿಲುವನ್ನು ಬಿಸಿಸಿಐ ಪ್ರಕಟಿಸಿದೆ. ಅಲ್ಲದೆ ಆಟಗಾರರು ತಮಗೆ ಮೀಸಲಿಟ್ಟ ತಂಡದ ಬಸ್ಸಿನಲ್ಲೇ ಪ್ರಯಾಣಿಸಬೇಕು, ತಮೊಂದಿಗೆ ತೆಗೆದುಕೊಂಡು ಹೆಚ್ಚುವರಿ ಲಗೇಜ್‌ ಗಳಿಗೆ ಹೆಚ್ಚಿನ ಶುಲ್ಕವನ್ನು ಆಟಗಾರನೇ ಭರಿಸಬೇಕೆಂದು ತಿಳಿಸಿದೆ.

ಟೀಮ್‌ ಇಂಡಿಯಾದಲ್ಲಿ ಒಡಕು:
ಗೌತಮ್‌ ಗಂಭೀರ್‌ ಅವರು ಭಾರತ ತಂಡದ ಹೆಡ್‌ ಕೋಚ್‌ ಆದ ದಿನದಿಂದತಂಡದ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಪರಿಸ್ಥಿತಿಗಳು ವಿಭಿನ್ನವಾಗಿರುವುದು ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 1-3 ರಿಂದ ಸರಣಿ ಸೋಲಲು ಕಾರಣವಾಗಿದೆ ಎಂದು ಬಿಸಿಸಿಐ ಅಂದಾಜಿಸಿದ್ದು , ಈ ಕ್ರಮ ಕೈಗೊಳ್ಳಲು ಪ್ರಮುಖ ಕಾರಣವಾಗಿದೆ.

ಅಲ್ಲದೆ ಅನುಭವಿ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಟೆಸ್ಟ್‌ ಸರಣಿಯ ನಡುವೆಯೇ ತಮಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದು , ನಾಯಕ ರೋಹಿತ್‌ ಶರ್ಮಾ ಅವರು ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಕ್ಯಾಪ್ಟನ್ಸಿ ಜವಾಬ್ದಾರಿಗಳಿಂದ ತಪ್ಪಿಸಿಕೊಂಡಿರುವುದು ಕೂಡ ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಆಟಗಾರರ ನಡುವೆ ಸಂಬಂಧ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ಬಿಂಬಿಸುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಟಾರ್‌ ಆಟಗಾರರ ಸುತ್ತಾಟ:
ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರರಾದ ಜಸ್‌‍ ಪ್ರೀತ್‌ ಬೂಮ್ರಾ ಹಾಗೂ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಸರಣಿ ನಡೆಯುವ ಸಮಯದಲ್ಲಿ ಆಟಗಾರರೊಂದಿಗೆ ಹೆಚ್ಚು ಸಮಯ ಕಳೆಯದೇ ತಮ ಕುಟುಂಬದೊಂದಿಗೆ ಕಾಂಗರೂ ನಾಡಿನಲ್ಲಿ ಸುತ್ತಾಟ ನಡೆಸಿದ್ದರು. ಅಲ್ಲದೆ ಪರ್ತ್‌ ಟೆಸ್ಟ್‌ ಪಂದ್ಯ ಗೆದ್ದಾಗ ಆಟಗಾರರು ಆ ಜಯವನ್ನು ಸಂಭ್ರಮಿಸದಿರುವುದು ಬಿಸಿಸಿಐನ ಕಣ್ಣು ಕೆಂಪಾಗಿಸಿದೆ.

ಬಿಸಿಸಿಐ ಸೂಚಿಸಿದ ನಿಯಮಗಳು ಕೆಳಕಂಡಂತಿವೆ:
*ಪಂದ್ಯಾವಳಿಯು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಽಯದ್ದಾಗಿದ್ದರೆ, ಕುಟುಂಬಗಳು ಆಟಗಾರರೊಂದಿಗೆ 14 ದಿನಗಳವರೆಗೆ ಮಾತ್ರ ಇರಲು ಅವಕಾಶವಿರುತ್ತದೆ.
*ಪ್ರವಾಸ ಕಡಿಮೆ ಇದ್ದರೆ, ಅವಽಯನ್ನು 7 ದಿನಗಳವರೆಗೆ ಕಡಿಮೆ ಮಾಡಬಹುದು.
*ಪತ್ನಿಯರು ಇಡೀ ಪಂದ್ಯಾವಳಿಯಲ್ಲಿ ಆಟಗಾರರೊಂದಿಗೆ ಇರಲು ಸಾಧ್ಯವಿಲ್ಲ.
*ಎಲ್ಲಾ ಆಟಗಾರರು ತಂಡದ ಬಸ್‌‍ನಲ್ಲಿ ಪ್ರಯಾಣಿಸಬೇಕಾಗುತ್ತದೆ.
*ಗೌತಮ್‌ ಗಂಭೀರ್‌ ಅವರ ವೈಯಕ್ತಿಕ ವ್ಯವಸ್ಥಾಪಕರು ವಿಐಪಿ ಪೆಟ್ಟಿಗೆಯಲ್ಲಿ ಕುಳಿತುಕೊಳ್ಳಲು ಅಥವಾ ತಂಡದ ಬಸ್‌‍ನಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ. ಅವರು ಬೇರೆ ಹೋಟೆಲ್‌ನಲ್ಲಿ ಉಳಿಯಬೇಕಾಗುತ್ತದೆ.
*ಆಟಗಾರರ ಲಗೇಜ್‌ 150 ಕೆಜಿ ಮೀರಿದರೆ, ಬಿಸಿಸಿಐ ಹೆಚ್ಚುವರಿ ಶುಲ್ಕವನ್ನು ಭರಿಸುವುದಿಲ್ಲ ಮತ್ತು ಆಟಗಾರರು ಅವರಿಗೆ ಪಾವತಿಸಬೇಕಾಗುತ್ತದೆ.

RELATED ARTICLES

Latest News