Tuesday, November 25, 2025
Homeಮನರಂಜನೆಬಿಗ್​ ಬಾಸ್ ಪ್ರಥಮ್​ಗೆ ಜೀವ ಬೆದರಿಕೆ

ಬಿಗ್​ ಬಾಸ್ ಪ್ರಥಮ್​ಗೆ ಜೀವ ಬೆದರಿಕೆ

ಬೆಂಗಳೂರು,ಜೂ.19– ಬಿಗ್ ಬಾಸ್ನ 4ನೇ ಆವೃತ್ತಿಯ ವಿನ್ನರ್ ಪ್ರಥಮ್ಗೆ ಕೆಲ ಕಿಡಿಗೇಡಿಗಳು ಬೆದರಿಕೆ ಕರೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಪ್ರಥಮ್ ಕಚೇರಿಯ ದೂರವಾಣಿಗೆ ಕೆಲ ಕಿಡಿಗೇಡಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದಲ್ಲದೆ

ಹಾಗೂ ಸೋಶಿಯಲ್ ಮೀಡಿಯಾದಲ್ಲೂ ಪ್ರಥಮ್ ವಿರುದ್ಧ ಸಂದೇಶಗಳು ಬರುತ್ತಿವೆ.ಇತ್ತೀಚೆಗೆ ರೇಣುಕಾಸ್ವಾಮಿ ಹತ್ಯೆ ಬಗ್ಗೆ ಪ್ರಥಮ್ ಪ್ರತಿಕ್ರಿಯಿಸಿ, ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ಅದನ್ನು ನೀವು ಹಾಳು ಮಾಡಿಕೊಳ್ಳಬೇಡಿ ಎಂದಿದ್ದರು.

ಇದೀಗ ಇವರಿಗೆ ಬರುತ್ತಿರುವ ಬೆದರಿಕೆ ಕರೆ ಹಾಗೂ ಮೆಸೇಜ್ಗಳನ್ನು ಪೊಲೀಸರೇ ನೋಡಿಕೊಳ್ಳುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಟ್ವೀಟ್ ಮಾಡಿದ್ದಾರೆ.

RELATED ARTICLES
- Advertisment -

Latest News