ಪಾಟ್ನಾ, ಮಾ.10 (ಪಿಟಿಐ): ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರ್‍ಜೆಡಿ ಜೊತೆ ನಂಟು ಹೊಂದಿರುವ ವ್ಯಕ್ತಿ ಸುಭಾಷ್ ಯಾದವ್ ಎಂಬುವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಯಾದವ್ ಮತ್ತು ಇತರ ಕೆಲವರ ನಿವೇಶನಗಳನ್ನು ಶನಿವಾರದಿಂದ ಶೋಧಿಸಲಾಗುತ್ತಿದೆ.
ಶನಿವಾರ ತಡರಾತ್ರಿ ಯಾದವ್ ಅವರನ್ನು ಬಂಧಿಸಲಾಗಿದ್ದು, ವಿವಿಧೆಡೆ ಸುಮಾರು 2.3 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಟ್ನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಡಿ ಅಧಕಾರಿಗಳು ಅರ್ಧ ಡಜನ್‍ಗೂ ಹೆಚ್ಚು ಆವರಣಗಳನ್ನು ಶೋಧ ನಡೆಸಿದರು ಎಂದು ತಿಳಿದುಬಂದಿದೆ.
ಯಾದವ್ ಅವರು ಬಿಹಾರದಲ್ಲಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಈ ಹಿಂದೆ ಆರ್‍ಜೆಡಿ ಟಿಕೆಟ್‍ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮನಿ ಲಾಂಡರಿಂಗ್ ಪ್ರಕರಣವು ಬಿಹಾರ ಪೊಲೀಸರು ದಾಖಲಿಸಿದ ಕೆಲವು ಎ- ಐಆರ್‍ಗಳಿಂದ ಹುಟ್ಟಿಕೊಂಡಿದೆ.