Monday, March 17, 2025
Homeರಾಷ್ಟ್ರೀಯ | Nationalಯುಪಿಯಲ್ಲಿ ಬಿಹಾರ ಮೂಲದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಯುಪಿಯಲ್ಲಿ ಬಿಹಾರ ಮೂಲದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

Bihar girl kidnapped and gang-raped in UP

ಬಲ್ಲಿಯಾ (ಯುಪಿ), ಮಾ.16-ತನ್ನ ಅತ್ತಿಗೆಯ ಮನೆಗೆ ಬಂದಿದ್ದ ಬಿಹಾರ ಮೂಲದ ಬಾಲಕಿಯನ್ನು ಬಂದೂಕುತೋರಿಸಿ ಬಯಪಡಿಸಿ ಅಪಹರಿಸಿದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆನ ಇಲ್ಲಿನ ದೋಕಾಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ಮಾರ್ಚ್ 14 ರಂದು ರಾತ್ರಿ 10 ಗಂಟೆ ಸಮಯದಲ್ಲಿ ಬಾಲಕ ಸೂರಜ್ ಸೋನಿ ಮತ್ತು ಇತರ ಇಬ್ಬರು ಯುವಕರು ಬಂದೂಕು ತೋರಿಸಿ 14 ವರ್ಷದ ಬಾಲಕಿಯನ್ನು ಅಪಹರಿಸಿ, ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮೂವರ ವಿರುದ್ದ ಪೋಕ್ಸ್ ಅಡಿ ಪ್ರಕರಣ ದಾಖಲಾಗಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಬೈರಿಯಾದ ಸರ್ಕಲ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಫಹೀಮ್ ಖುರೇಷಿ ತಿಳಿಸಿದ್ದಾರೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುಷ್ಕರ್ಮಿಗಳಿಗೆ ಬಂದೂಕು ಹೇಗೆ ಸಿಕ್ಕಿದೆ ಮತ್ತು ಅಪಹರಣ ಬಳಸಿದ ವಾಹನ ಪತ್ತೆಯಾಗಿದೆ.ಈ ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

RELATED ARTICLES

Latest News