Tuesday, October 21, 2025
Homeರಾಷ್ಟ್ರೀಯ | Nationalಬಿಹಾರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ RJD ಅಭ್ಯರ್ಥಿ ಅರೆಸ್ಟ್

ಬಿಹಾರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ RJD ಅಭ್ಯರ್ಥಿ ಅರೆಸ್ಟ್

Bihar polls: RJD's Sasaram candidate arrested after filing nomination

ಸಸಾರಂ,ಅ.21- ಬಿಹಾರದ ಸಸಾರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಕೂಡಲೇ ಆರ್ಜೆಡಿ ಅಭ್ಯರ್ಥಿ ಸತೇಂದ್ರ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತೇಂದ್ರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾಗಿರುವ ಹಿನ್ನೆಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಅವರೊಂದಿಗೆ ಆಗಮಿಸಿದ್ದ ಬೆಂಬಲಿಗರಿಗೆ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ನಿನ್ನೆ ಸತೇಂದ್ರ ಬೆಂಬಲಿಗರೊಂದಿಗೆ ಸಸಾರಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಗೆ ಆಗಮಿಸಿದರು. ಇದೇ ವೇಳೆ ಪೊಲೀಸರು ಜಾಮೀನು ರಹಿತ ವಾರಂಟ್‌ನೊಂದಿಗೆ ಪೊಲೀಸರು ಕೂಡ ಆಗಮಿಸಿದರು. ಬಳಿಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ ಪೊಲೀಸರು, ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸತೇಂದ್ರ ಅವರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ.

2004 ರಲ್ಲಿ ಗಹ್ರ್ವಾ ಜಿಲ್ಲೆಯ ಚಿರೌಂಜಿಯಾ ಮೋರ್ನಲ್ಲಿ ನಡೆದ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಸತೇಂದ್ರ ಆರೋಪಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆಳವಣಿಗೆ ಕುರಿತು ಮಾಹಿತಿ ನೀಡಿದ ಜಾರ್ಖಂಡ್‌ನ ಗಹ್ರ್ವಾದ ಸದರ್‌ ಪೊಲೀಸ್‌‍ ಠಾಣೆಯ ಉಸ್ತುವಾರಿ ಅಧಿಕಾರಿ ಸುನಿಲ್‌ ತಿವಾರಿ, 2018ರಲ್ಲಿ ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಸತೇಂದ್ರ ವಿರುದ್ಧ ಶಾಶ್ವತ ವಾರಂಟ್‌ ಜಾರಿಯಾಗಿದೆ.

RELATED ARTICLES

Latest News