ಪಾಟ್ನಾ, ಜು. 10: ಬಿಹಾರದ ಮಾಧೇಪುರದಲ್ಲಿ ಮಹಿಳೆಯೊಬ್ಬರ ಮತದಾರರ ಗುರುತಿನ ಚೀಟಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರ ಮುದ್ರಿಸಲಾಗಿದೆ.ನನ್ನ ವೋಟರ್ ಐಡಿಯಲ್ಲಿ ಸಿಎಂ ಅವರ ಭಾವಚಿತ್ರ ಬಂದಿರುವುದು ವ್ಯವಸ್ಥೆಯ ನಿರ್ಲಕ್ಷ್ಯ ಎಂದು ಮಹಿಳೆ ಹೇಳಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಶೀಲನೆ ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯ ಪತಿ ಈ ಮಾಹಿತಿ ನೀಡಿದ್ದಾರೆ.ಹೀಗಾಗಿದೆ ಎಂದು ಯಾರ ಬಳಿಯೂ ಹೇಳದಂತೆ ಬಿಎಲ್‌ಒ ಒತ್ತಾಯಿಸಿದ್ದರು ಎಂಬುದನ್ನು ಹೇಳಿದ್ದಾರೆ.
ಚಂದನ್ ಕುಮಾರ್ ಎಂಬುವವರು ತಮ್ಮ ಪತ್ನಿಯ ಮತದಾರರ ಗುರುತಿನ ಚೀಟಿ ಅಂಚೆ ಮೂಲಕ ಬಂದಿತ್ತು. ಲಕೋಟೆಯಲ್ಲಿ ಎಲ್ಲಾ ಮಾಹಿತಿ ಸರಿಯಾಗಿತ್ತು. ಆದರೆ ಕಾರ್ಡ್‌ನಲ್ಲಿರುವ ಫೋಟೊ ನಿತೀಶ್ ಕುಮಾರ್‌ದ್ದಾಗಿತ್ತು. ಈ ಬಗ್ಗೆ ಬಿಎಲ್‌ಒ ಬಳಿ ದೂರು ನೀಡಿದಾಗ ಅವರು ಯಾರಿಗೂ ಈ ವಿಚಾರ ಹೇಳಬೇಡಿ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ, ಉಪ ಚುನಾವಣಾ ಅಧಿಕಾರಿ ಜಿತೇಂದ್ರಕುಮಾರ್ ಮಾತನಾಡಿ,ಕರ್ನಾಟಕದಲ್ಲಿ ಮತದಾರರ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತದೆ. ಮತದಾರರ ಚೀಟಿಯಲ್ಲಿ ಯಾವುದೇ ತಪ್ಪುಗಳಿದ್ದರೆ ಅದನ್ನು ಸರಿಪಡಿಸಬಹುದು ಎಂದು ಸಬೂಬು ಹೇಳಿದ್ದಾರೆ.
ಮಹಿಳೆಯು ಉಪ ಚುನಾವಣಾಧಿಕಾರಿ ಕಚೇರಿ ಅಥವಾ ಆನ್‌ಲೈನ್‌ನಲ್ಲಿ ಫಾರ್ಮ್ -8 ಅನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ತಿದ್ದುಪಡಿ ಮಾಡಲಾಗುತ್ತದೆ ಮತ್ತು ಹೊಸ ಮತದಾರರ ಚೀಟಿಯನ್ನು ಮನೆಗೆ ಕಳುಹಿಸಲಾಗುತ್ತದೆ. ಯಾರಿಗಾದರೂ ಅಂತಹ ತಪ್ಪುಗಳಿದ್ದರೆ, ಅವರು ಅರ್ಜಿ ಸಲ್ಲಿಸಬಹುದು, ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಂದನ್ ಒತ್ತಾಯಿಸಿದ್ದಾರೆ. ಸುಮಾರು ಎರಡೂವರೆ ತಿಂಗಳ ಹಿಂದೆ ತಮ್ಮ ಪತ್ನಿಯ ಹೆಸರಿಗೆ ಮತದಾರರ ಗುರುತಿನ ಚೀಟಿ ಅಂಚೆ ಮೂಲಕ ಬಂದಿತ್ತು ಎಂದು ಚಂದನ್ ಕುಮಾರ್ ಹೇಳಿದ್ದಾರೆ.
ಲಕೋಟೆಯಲ್ಲಿರುವ ಹೆಸರು, ವಿಳಾಸ ಮತ್ತು ಇತರ ಎಲ್ಲಾ ಮಾಹಿತಿಗಳು ಅವರ ಪತ್ನಿಯದ್ದಾಗಿತ್ತು, ಆದರೆ ಅವರು ಕಾರ್ಡ್ ತೆರೆದಾಗ ಅದರ ಮೇಲಿದ್ದ ಫೋಟೋ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರದ್ದಾಗಿತ್ತು ಎಂದಿದ್ದಾರೆ.
ಈ ಘಟನೆಯು ಚುನಾವಣಾ ಆಯೋಗದ ಪ್ರಕ್ರಿಯೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಸಾರ್ವಜನಿಕ ಕಳವಳವನ್ನು ಹೆಚ್ಚಿಸಿದೆ, ವಿಶೇಷವಾಗಿ ಬಿಹಾರವು 2025 ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಸಮಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಚುನಾವಣೆ ಮೇಲೆ ಫಲಿತಾಂಶ ಬೀರುತ್ತಾ ಕಾದುನೋಡಬೇಕಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-08-2025)
- ಬೆಂಗಳೂರಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದ 12 ಸಾವಿರ ವಾಹನ ಸವಾರರ ವಿರುದ್ಧ ಎಫ್ಐಆರ್
- ಶೇ.50 ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಮುಗಿಬಿದ್ದು ದಂಡ ಕಟ್ಟಿದ ವಾಹನ ಸವಾರರು
- ಶಾಂತಿಯುತ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಗೆ ಸೂಕ್ತ ಭದ್ರತೆ : ಆಯುಕ್ತರು
- ಸೆ.1ರಿಂದ ಬಿಜೆಪಿ ‘ಧರ್ಮಸ್ಥಳ ಚಲೋ’