Thursday, May 1, 2025
Homeಬೆಂಗಳೂರುಹೆಲ್ಮೆಟ್ ಹಾಕದೆ ಪ್ರಾಣ ತೆತ್ತ ಬೈಕ್‌ ಸವಾರ

ಹೆಲ್ಮೆಟ್ ಹಾಕದೆ ಪ್ರಾಣ ತೆತ್ತ ಬೈಕ್‌ ಸವಾರ

Biker dies without wearing helmet

ಬೆಂಗಳೂರು,ಮೇ 1- ಊರಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟು ನಗರದಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ತಲೆಗೆ ಹೆಲ್ಮೆಟ್ ಹಾಕದ ಪರಿಣಾಮ ಬೈಕ್‌ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಮಿಳುನಾಡಿನ ದಿಂಡಿಗಲ್‌ ನಿವಾಸಿ ಡೇವಿಡ್‌ ಸೆಂಗೋಲ್‌ (32) ಎಂದು ಗುರುತಿಸಲಾಗಿದೆ. ಸೆಂಗೋಲ್‌ ಪತ್ನಿ, ಮಕ್ಕಳು ತಮಿಳುನಾಡಿನ ದಿಂಡಿಗಲ್‌ನಲ್ಲಿ ವಾಸವಾಗಿದ್ದರೆ, ನಗರದ ಲಾಂಡ್ರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಮತ್ತಿಕೆರೆಯ ಪಿಜಿಯೊಂದರಲ್ಲಿ ವಾಸವಾಗಿದ್ದರು.

ನಿನ್ನೆ ರಾತ್ರಿ 10.15 ರ ಸುಮಾರಿಗೆ ಕೆಲಸ ಮುಗಿಸಿ ಮತ್ತಿಕೆರೆಯಲ್ಲಿರುವ ತನ್ನ ಪಿಜಿಗೆ ಸಂಗೋಲ್‌ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಎಂ.ಎಸ್‌‍.ರಾಮಯ್ಯ ಆಸ್ಪತ್ರೆ ಹಿಂಭಾಗದ ಗೇಟ್‌ ನಂಬರ್‌ 11 ರ ಬಳಿ ಎದುರಿನಿಂದ ಬಂದ ಬೈಕ್‌ ಇವರ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತು.

ಡಿಕ್ಕಿ ಹೊಡೆದ ರಭಸಕ್ಕೆ ಎರಡು ವಾಹನಗಳ ಸವಾರರು ಕೆಳಗೆ ಬಿದ್ದರೂ ಸೆಂಗೋಲ್‌ ತಲೆಗೆ ಹೆಲೆಟ್‌ ಹಾಕದ ಪರಿಣಾಮ ಅವರ ತಲೆ ಮತ್ತು ಮೈ ಕೈಗಳಿಗೆ ಗಾಯಗಳಾಗಿದ್ದವು. ತಕ್ಷಣ ಅವರನ್ನು ಪಕ್ಕದಲ್ಲೇ ಇದ್ದ ಎಂ.ಎಸ್‌‍.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮತ್ತೊಂದು ಬೈಕ್‌ ಸವಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಶವವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

RELATED ARTICLES

Latest News