ಬೆಂಗಳೂರು,ಜು.23-ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಶಾಸಕ ಭೈರತಿಬಸವರಾಜು ಅವರು ಇಂದು ಭಾರತಿನಗರ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ತನಿಖಾಧಿಕಾರಿಯಾಗಿರುವ ಎಸಿಪಿ ಅವರು ಇಂದು ಬೆಳಗ್ಗೆ ಬೈರತಿಬಸವರಾಜು ಅವರನ್ನು ವಿಚಾರಣೆಗೆ ಒಳಪಡಿಸಿ ಈ ಪ್ರಕರಣದ ಬಗ್ಗೆ ಕೆಲವು ಮಾಹಿತಿ ಗಳನ್ನು ಪಡೆದುಕೊಂಡರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶನಿವಾರ ಬೈರತಿಬಸವರಾಜು ಅವರು ಠಾಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಸತತ 3 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು.
ಇಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರಿಂದ ಎರಡನೇ ಬಾರಿಗೆ ಹಾಜರಾದರು. ಈ ಪ್ರಕರಣದಲ್ಲಿ ಈಗಾಗಲೇ 11 ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರುಗಳ ಪಾತ್ರದ ಬಗ್ಗೆ ಒಬ್ಬಬ್ಬರಿಂದಲೂ ನಿಖರವಾದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
- ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 71 ವೃದ್ಧೆ ಆತ್ಮಹತ್ಯೆ
- ಗಂಡನ ಕಿರುಕುಳದಿಂದ ನೊಂದು ಕಟ್ಟಡದಿಂದ ಹಾರಿ ಪತ್ನಿ ಆತ್ಮಹತ್ಯೆ ಯತ್ನ
- ಬೆಂಗಳೂರು : ಕುಸಿದುಬಿದ್ದು ಆಟೋ ಚಾಲಕ ಸಾವು
- ಬೆಂಗಳೂರಲ್ಲಿ ಮಂಡ್ಯ ಮೂಲದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
- ಬೆಂಗಳೂರು : ಡ್ರಗ್ ಪೆಡ್ಲರ್ ಬಳಿ ಇತ್ತು ಪಿಸ್ತೂಲ್ ಹಾಗೂ ನಾಲ್ಕು ಗುಂಡುಗಳು
