ಬೆಳಗಾವಿ, ಡಿ.6- ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸಿರುವ ರಾಜ್ಯಸರ್ಕಾರ ಅಕ್ರಮದಲ್ಲಿ ಭಾಗಿ ಯಾದ ಅಭ್ಯರ್ಥಿಗೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸುವುದು ಮತ್ತು ಒಳಸಂಚು ನಡೆಸುವವರಿಗೆ 8 ರಿಂದ 12 ವರ್ಷಗಳ ಕಠಿಣ ಶಿಕ್ಷೆ ಮತ್ತು 15 ಲಕ್ಷ ರೂ.ಗಳಿಂದ 10 ಕೋಟಿ ರೂ.ಗಳ ದಂಡ ವಿಧಿಸಲು ಅವಕಾಶವಿರುವ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸ ಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ಖರ್ಗೆ, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಪರವಾಗಿ ವಿಧೇಯಕವನ್ನು ಮಂಡಿಸಿದರು.ಪ್ರಸ್ತಾವಿತ ವಿಧೇಯಕದಲ್ಲಿ ಸಾರ್ವ ಜನಿಕ ಪರೀಕ್ಷೆಗಳ ಅಕ್ರಮಗಳು, ಭ್ರಷ್ಟಾ ಚಾರ, ಅನುಚಿತ ವಿಧಾನಗಳ ಬಳಕೆಗೆ ಕಡಿವಾಣ ಹಾಕಲು ಕಾಯಿದೆ ಯನ್ನು ರೂಪಿಸಿರುವುದಾಗಿ ತಿಳಿಸಲಾಗಿದೆ.
ಪರೀಕ್ಷಾ ಅಕ್ರಮಗಳು ನೀಚ ವ್ಯಕ್ತಿಗಳಿಗೆ ಹಾಗೂ ಅನಿಹಿತವಾದ ಹಿತಾಸಕ್ತಿಗಳಿಗೆ ಅಗಾಧ ಪ್ರಮಾಣದ ಹಣಕಾಸಿನ ಅನುಕೂಲಗಳನ್ನು ಮಾಡಿ ಕೊಡುವುದಲ್ಲದೆ ಯುವಜನರ ಪ್ರಗತಿಯ ಅವಕಾಶವನ್ನು ಕುಂಠಿತಗೊಳಿಸುತ್ತದೆ. ನ್ಯಾಯಸಮ್ಮತವಾದ ರೀತಿಯಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ವಿಫಲಗೊಳಿಸಲು ಹೊಸ ಹೊಸ ಭ್ರಷ್ಟ ಹಾಗೂ ಅನುಚಿತ ವಿಧಾನಗಳನ್ನು ಬಳಸಲಾಗುತ್ತಿದೆ. ಲಕ್ಷಾಂತರ ಪ್ರತಿಭಾನ್ವಿತರ ಕಠಿಣ ಪರಿಶ್ರಮವನ್ನು ನಿರರ್ಥಕ ಗೊಳಿಸಿ ಯುವಜನರ ಅವಕಾಶ ಗಳನ್ನು ವಂಚಿಸುತ್ತಿದೆ. ಜನಸಾಮಾನ್ಯರ ನಂಬಿಕೆಗೆ ದ್ರೋಹವೆಸಗಲಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.
ರಾಜ್ಯದ ಮದರಸಾಗಳಲ್ಲಿ ಕನ್ನಡ, ಗಣಿತ, ವಿಜ್ಞಾನ ಬೋಧನೆ ಕಡ್ಡಾಯ
ಪರೀಕ್ಷಾ ಪಾವಿತ್ರ್ಯತೆಗೆ ಚ್ಯುತಿ ತರುವ ವ್ಯಕ್ತಿಗಳು, ಸಂಚುಕೋರರು, ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಸಮ್ಮತ ನೇಮಕ ಪ್ರಕ್ರಿಯೆಗಾಗಿ ಈ ಕಾಯ್ದೆ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ.ಪರೀಕ್ಷಾರ್ಥಿಗಳು ಮತ್ತು ಅಪರಾಕ ಸೂತ್ರಧಾರರನ್ನು ಪ್ರತಿಸ್ಪಂಸಲು ಹೊಸ ಕಾನೂನಿನಲ್ಲಿ 10 ವರ್ಷಗಳವರೆಗೆ ಶಿಕ್ಷೆ ಮತ್ತು 10 ಕೋಟಿ ರೂ.ಗಳವರೆಗೆ ದಂಡನೆ ಹಾಗೂ ಸ್ವತ್ತುಗಳ ಜಪ್ತಿ, ಆಸ್ತಿಗಳ ಮುಟ್ಟುಗೋಲಿನಂತಹ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.
ಪ್ರಶ್ನೆಪತ್ರಿಕೆ ಬಹಿರಂಗ, ಸ್ವಾಧೀನ , ಸೋರಿಕೆ, ಒಎಂಆರ್ ಸೀಟುಗಳ ಸ್ವಾೀನ ಅಥವಾ ಅನಕೃತವಾಗಿ ಬಹಿರಂಗಪಡಿಸುವುದು ಪರೀಕ್ಷಾ ಕೇಂದ್ರಕ್ಕೆ ಅಕ್ರಮ ಪ್ರವೇಶ , ಪರೀಕ್ಷಾ ಸಾಮಗ್ರಿಗಳ ದುರ್ಬಳಕೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗಿದೆ. ಆಡಳಿತ ಮಂಡಳಿ ಮತ್ತು ಸಂಸ್ಥೆಗಳು ಅಪರಾಧದಲ್ಲಿ ಭಾಗಿಯಾಗಿರುವುದರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದೆ.
ಅಪರಾಧದಲ್ಲಿ ದೋಷಿ ಎಂದು ಕಂಡುಬರುವ ವ್ಯಕ್ತಿಗಳನ್ನು ಮುಂದೆ ಯಾವುದೇ ಪರೀಕ್ಷೆ ತೆಗೆದುಕೊಳ್ಳದಂತೆ ಅನರ್ಹಗೊಳಿಸಲು ಅವಕಾಶವಿದೆ. ಯಾವುದೇ ಸಂದರ್ಶನಗಳಿಗೂ ಭಾಗವಹಿಸಲು ಅವಕಾಶ ಇರುವುದಿಲ್ಲ. ನಿಯಮಿತ ಅಪರಾಧಗಳಲ್ಲಿ ಎರಡು ವರ್ಷಗಳವರೆಗೂ ಪರೀಕ್ಷೆಯಿಂದ ನಿಷೇಧಗೊಳಿಸಲಾಗುತ್ತದೆ.
ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಆರೋಪಿಗಳ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲು ತನಿಖಾಕಾರಿಗೆ ಅವಕಾಶ ಮಾಡಿಕೊಡಲಾಗಿದೆ ಮತ್ತು ಪರೀಕ್ಷೆಗೆ ಸಂಬಂಧಪಟ್ಟ ವೆಚ್ಚವನ್ನು ಅಪರಾಗಳು ಮತ್ತು ಅಪರಾಕ ಸಂಸ್ಥೆಗಳಿಂದ ವಸೂಲಿ ಮಾಡುವ ಪ್ರಸ್ತಾಪವಿದೆ.
ಅಪರ ಪೊಲೀಸ್ ಅೀಕ್ಷಕರ ದರ್ಜೆಗಿಂತ ಕಡಿಮೆ ಇರದ ಯಾರೇ ಪೊಲಿಸ್ಅಧಿಕಾರಿಯು ಪರೀಕ್ಷಾ ಅಕ್ರಮಗಳ ತನಿಖೆ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ.ಈ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಅಥವಾ ದುರ್ಬಲ ಗೊಳಿಸದಂತೆಯೂ ಎಚ್ಚರಿಕೆ ವಹಿಸಲಾಗಿದೆ.