ಬೆಂಗಳೂರು,ಜ.29- ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಬಿಜೆಪಿ ಜನರನ್ನು ಪ್ರಚೋದನೆಗೊಳಿಸುತ್ತಿರುವುದು ಯಾವ ಕಾರಣಕ್ಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‍ಎಸ್‍ಎಸ್ ತಮ್ಮ ಅಜೆಂಡಾವನ್ನು ಜಾರಿಗೆ ತರಲು ಅನಗತ್ಯವಾಗಿ ಜನರನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ಜನರನ್ನು ಪ್ರಚೋದಿಸುತ್ತಿವೆ. ಕೆರಗೋಡಿನಲ್ಲಿ ರಾಷ್ಟ್ರ ಅಥವಾ ರಾಜ್ಯಧ್ವಜ ಹಾಕುತ್ತೇವೆಂದು ಅನುಮತಿ ಪಡೆದಿದ್ದರು. ಅದರ ನಿಯಮ ಉಲ್ಲಂಘನೆ ಮಾಡಿದ್ದರಿಂದಾಗಿ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕಾಯಿತು. ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧ್ವಜಾರೋಹಣ ಮಾಡುತ್ತೇವೆ ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು.
ಯಾವ ಬಾವುಟ ಹಾರಿಸುತ್ತೇವೆ ಎಂದು ಅನುಮತಿ ಪಡೆದಿದ್ದಾರೆಯೋ ಅದನ್ನು ಹಾರಿಸಲು ತಮ್ಮ ಆಕ್ಷೇಪ ಇಲ್ಲ. ಯಾವುದೇ ಧರ್ಮ, ಜಾತಿಯ ಬಾವುಟಗಳಿಗೂ ತಮ್ಮ ವಿರೋಧವಿಲ್ಲ ಎಂದು ತಿಳಿಸಿದರು. ಚುನಾವಣೆ ಹೊರತುಪಡಿಸಿದರೆ ಇದರ ಹಿಂದೆ ಬೇರೆ ಯಾವ ಕಾರಣಗಳಿಲ್ಲ. ನನ್ನ ವಿರುದ್ಧ ಆರೋಪ ಮಾಡಲು ವಿರೋಧಪಕ್ಷದವರಿಗೆ ಬೇರೆ ಕಾರಣಗಳು ಸಿಕ್ಕಿಲ್ಲ. ಹಾಗಾಗಿ ಹಿಂದೂ ವಿರೋ ಎಂದು ಟೀಕೆ ಮಾಡುತ್ತಾರೆ.
ಎಲೋನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾದ ಅರ್ನಾಲ್ಟ್
ನಾನೊಬ್ಬ ಹಿಂದು. ನಾನು ಎಲ್ಲಾ ಜನರನ್ನೂ ಮತ್ತು ಎಲ್ಲಾ ಧರ್ಮವನ್ನೂ ಪ್ರೀತಿಸುತ್ತೇನೆ ಎಂದರು.
ಸಂವಿಧಾನದಲ್ಲಿ ಜಾತ್ಯತೀತ ಸಿದ್ಧಾಂತಗಳನ್ನು ಪ್ರತಿಪಾದಿಸಲಾಗಿದೆ. ಜಾತ್ಯತೀತತೆ ಎಂದರೆ ಸಹಬಾಳ್ವೆ, ಸಹಿಷ್ಣುತೆ. ಅದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ ಎಂದು ಹೇಳಿದರು.