Home ಇದೀಗ ಬಂದ ಸುದ್ದಿ ಬಿಜೆಪಿಯದ್ದು ರಾಮನ ಸಿದ್ದಾಂತವಾದರೆ ಎಸ್‌‍ಪಿಯದ್ದು ಬಾಬರ್‌ ತತ್ವ ; ಯೋಗಿ

ಬಿಜೆಪಿಯದ್ದು ರಾಮನ ಸಿದ್ದಾಂತವಾದರೆ ಎಸ್‌‍ಪಿಯದ್ದು ಬಾಬರ್‌ ತತ್ವ ; ಯೋಗಿ

0
ಬಿಜೆಪಿಯದ್ದು ರಾಮನ ಸಿದ್ದಾಂತವಾದರೆ ಎಸ್‌‍ಪಿಯದ್ದು ಬಾಬರ್‌ ತತ್ವ ; ಯೋಗಿ

ಲಕ್ನೋ, ಜ.5- ಬಿಜೆಪಿ ರಾಮನ ಸಿದ್ಧಾಂತವನ್ನು ಎತ್ತಿ ಹಿಡಿದರೆ ಸಮಾಜವಾದಿ ಪಕ್ಷ ಮೊಘಲ್‌ ಚಕ್ರವರ್ತಿ ಬಾಬರ್‌ ತತ್ವಗಳನ್ನು ಅಳವಡಿಸಿಕೊಂಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಅಯೋಧ್ಯೆ ಜಿಲ್ಲೆಯ ಮಿಲ್ಕಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಆದಿತ್ಯನಾಥ್‌, ನಾವು ಸನಾತನ ಮೌಲ್ಯಗಳ ಪ್ರತಿರೂಪವಾದ ಭಗವಾನ್‌ ರಾಮನನ್ನು ನಂಬುತ್ತೇವೆ, ಆದರೆ ಸಮಾಜವಾದಿ ಪಕ್ಷವು ವಿನಾಶದ ಸಂಕೇತವಾದ ಬಾಬರ್‌ನೊಂದಿಗೆ ತನ್ನನ್ನು ಹೊಂದಿಕೊಂಡಿದೆ ಎಂದು ಹೇಳಿದರು.

ಅಭಿವದ್ಧಿಗೆ ಬಿಜೆಪಿಯ ಬದ್ಧತೆಯನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಪಕ್ಷವು ಅಯೋಧ್ಯೆಯನ್ನು ಪ್ರಗತಿಯ ಸಂಕೇತ ವಾಗಿ ಪರಿವರ್ತಿಸಿದೆ ಎಂದು ಪ್ರತಿಪಾದಿಸಿದರು. ದೇಶ ಮತ್ತು ರಾಜ್ಯವನ್ನು ಅಭಿವದ್ಧಿಯತ್ತ ಕೊಂಡೊಯ್ಯಲು ಬಿಜೆಪಿ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಸಮಾಜವಾದಿ ಪಕ್ಷವು ಭಯೋತ್ಪಾದಕರು ಮತ್ತು ಕ್ರಿಮಿನಲ್‌ಗಳೊಂದಿಗೆ ತನ್ನನ್ನು ತಾನು ಹೊಂದಿಕೊಂಡಿದೆ ಎಂದು ಅವರು ಹೇಳಿದರು.

ಮುಂಬರುವ ಮಿಲ್ಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಗರಿಷ್ಠ ಮತಗಳನ್ನು ಗಳಿಸುವಂತೆ ಬಿಜೆಪಿ ಕಾರ್ಯಕರ್ತರನ್ನು ಒತ್ತಾಯಿಸಿದ ಆದಿತ್ಯನಾಥ್‌ ಅವರು ಮತದಾರರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಕಲ್ಯಾಣ ಯೋಜನೆಗಳನ್ನು ಎತ್ತಿ ತೋರಿಸಲು ಪ್ರೋತ್ಸಾಹಿಸಿದರು. ಅಭಿವದ್ಧಿಯ ಆಧಾರದ ಮೇಲೆ ಮತ ಕೇಳಿ ಎಂದು ಅವರು ಹೇಳಿದರು.

ಆದಿತ್ಯನಾಥ್‌ ಅವರು ಕುಂದರ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಇತ್ತೀಚಿನ ಯಶಸ್ಸಿನ ಬಗ್ಗೆ ಗಮನ ಸೆಳೆದರು, ಅಲ್ಲಿ ರಾಮ್‌ವೀರ್‌ ಸಿಂಗ್‌ ಅವರು ಅಭಿವದ್ಧಿ ಕೇಂದ್ರಿತ ಅಜೆಂಡಾದಲ್ಲಿ ಪ್ರಚಾರ ಮಾಡುವ ಮೂಲಕ 65 ಪ್ರತಿಶತ ಮುಸ್ಲಿಂ ಜನಸಂಖ್ಯೆ ಹೊಂದಿರುವ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿದ್ದಾರೆ.