Monday, April 7, 2025
Homeರಾಷ್ಟ್ರೀಯ | Nationalಬಿಜೆಪಿ 45ನೇ ಸಂಸ್ಥಾಪನಾ ದಿನಾಚರಣೆ, ಕಾರ್ಯಕರ್ತರನ್ನು ಕೊಂಡಾಡಿದ ಪ್ರಧಾನಿ ಮೋದಿ

ಬಿಜೆಪಿ 45ನೇ ಸಂಸ್ಥಾಪನಾ ದಿನಾಚರಣೆ, ಕಾರ್ಯಕರ್ತರನ್ನು ಕೊಂಡಾಡಿದ ಪ್ರಧಾನಿ ಮೋದಿ

BJP celebrates 45th foundation day, PM Modi congratulates workers

ನವದೆಹಲಿ,ಏ.6- ಭಾರತೀಯ ಜನತಾ ಪಕ್ಷ(ಬಿಜೆಪಿ)ತನ್ನ 45ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ನಡುವಲ್ಲೇ ಪಕ್ಷದ ಕಾರ್ಯಕರ್ತರನ್ನು ಕೊಂಡಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಕಾರ್ಯಕರ್ತರನ್ನು ಕೊಂಡಾಡಿದ್ದಾರೆ. ನಿಮ್ಮ ಶಕ್ತಿ, ಉತ್ಸಾಹ ನಿಜಕ್ಕೂ ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಸಂಸ್ಥಾಪನಾ ದಿನದ ಶುಭಾಶಯಗಳು. ಕಳೆದ ಹಲವು ದಶಕಗಳಲ್ಲಿ ನಮ್ಮ ಪಕ್ಷವನ್ನು ಬಲಪಡಿಸಲು ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಈ ಮಹತ್ವದ ದಿನವು ಭಾರತದ ಪ್ರಗತಿಯ ಕಡೆಗೆ ಕೆಲಸ ಮಾಡಲು ಮತ್ತು ವಿಕಸಿತ್ ಭಾರತದ ಕನಸನ್ನು ನನಸಾಗಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದ ಬೆನ್ನೆಲುಬಾಗಿರುವ ನಮ್ಮ ಎಲ್ಲಾ ಶ್ರಮಶೀಲ ಕಾರ್ಯಕರ್ತರಿಗೆ ನನ್ನ ಶುಭಾಶಯಗಳು, ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಪ್ರತಿಯೊಂದು ಭಾಗದಲ್ಲೂ ಹಗಲಿರುಳು ದುಡಿಯುತ್ತಿದ್ದಾರೆ. ಬಡವರು, ದೀನದಲಿತರು ಸೇವೆ ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಕಾರ್ಯಕರ್ತರ ಶಕ್ತಿ ಮತ್ತು ಉತ್ಸಾಹ ನಿಜವಾಗಿಯೂ ಪ್ರೇರೇಪಿಸುತ್ತದೆ.

ದೇಶದ ಜನತೆ ಇಂದು ಉತ್ತಮ ಆಡಳಿತವನ್ನು ನೋಡುತ್ತಿದ್ದಾರೆ. ಕಾರ್ಯಕರ್ತರ ಶ್ರಮ ಕಳೆದ ವರ್ಷದಲ್ಲಿ ಲೋಕಸಭೆ ಚುನಾವಣೆ, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮತ್ತು ರಾಷ್ಟ್ರದಾದ್ಯಂತ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಕ್ಕೆ ಸಿಕ್ಕ ಗೆಲುವುಗಳಿಂದ ತಿಳಿದುಬರುತ್ತದೆ. ನಮ್ಮ ಸರ್ಕಾರ ಸಮಾಜಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರೆಸಲಿದ್ದು, ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES

Latest News