ಬೆಂಗಳೂರು, ಮೇ 28- ನಗರದ ಜನತಗೆ ಹೊರೆಯಾಗಿ ಪರಿಣಮಿಸಿರುವ ತ್ಯಾಜ್ಯ ಸೆಸ್ ದರ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯುವುದು, ಬೆಂಗಳೂರು ವಿಭಜನೆ ಕೈ ಬಿಡುವುದು, ಶೀಘ್ರವೇ ಚುನಾವಣೆ ನಡೆಸುವಂತೆ ಒತ್ತಾಯಿಸಿ ಮೂರು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಪಕ್ಷ ಬಿಜೆಪಿ ಬಿಜೆಪಿ ನಿಯೋಗ ಬಿಬಿಎಂಪಿ ಆಡಳಿತಧಿಕಾರಿಗೆ ಮನವಿ ಮಾಡಿದೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ನೇತೃತ್ವದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ. ಸಿ.ಎನ್.ಅಶ್ವಥ್ ನಾರಾಯಣ, ರಾಮಮೂರ್ತಿ, ಕೆ.ಗೋಪಾಲಯ್ಯ, ರಘು, ಮುನಿರಾಜು, ರವಿ ಸುಬ್ರಮಣ್ಯ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ಸೆಂಟ್ರಲ್ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಸೇರಿದಂತೆ ಮತ್ತಿತರ ಬಿಜೆಪಿ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಹಾಗೂ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ಹೆಚ್ಚಳ ಮಾಡಿರುವ ಸೆಸ್ ದರ ಹಿಂಪಡೆಯುವಂತೆ ಒತ್ತಾಯ ಮಾಡಿದರು.
ಬೆಂಗಳೂರು ನಗರವನ್ನು ದುಬೈ ಮೀರಿದ ದುಬಾರಿ ನಗರವನ್ನು ಮಾಡಿರುವ ಅಪಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರ ಉಸ್ತುವಾರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಬ್ರಾಂಡ್ ಬೆಂಗಳೂರು ಹೆಸರಲ್ಲಿ ಸಾವಿರಾರು ಕೋಟಿ ವೆಚ್ಚದ ಅವಾಸ್ತವಿಕ ಯೋಜನೆಯನ್ನು ಪೂರ್ವಾಪರ ಆಲೋಚನೆ ಮಾಡದೆ ಜಾರಿಗೆ ತರಲು ಮುಂದಾಗಿರುವುದು ಇವರಿಬ್ಬರ ದುರಾಡಳಿತಕ್ಕೆ ಬೆಂಗಳೂರು ನಗರದ ನಾಗರಿಕರು ಜರ್ಜರಿತರಾಗಿ ಹೋಗಿದ್ದಾರೆ ಎಂದು ಕಿಡಿಕಾರಲಾಗಿದೆ.
ವೈಟ್ ಟ್ಯಾಪಿಂಗ್ ಎಂಬ ಮತ್ತೊಂದು ದುಬಾರಿ ಯೋಜನೆಯು ಸಾವಿರಾರು ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ.ನಿಗದಿತ ದುಪ್ಪಟ್ಟು ಅವಧಿಯಲ್ಲಿಯೂ ಪೂರ್ಣಗೊಳ್ಳದ ಕಾಮಗಾರಿ. ವ್ಯಾಪರಸರ ವಹಿವಾಟಿಗೆ ಕಲ್ಲು ಹಾಕಿದೆ ಮತ್ತು ಅಂತರ್ಜಲ ಶತೃವಾದ ಈ ಯೋಜನೆಯು ನಾಗರಿಕರಿಗೆ ಶಾಪವಾಗಿದೆ ಸರ್ಕಾರದ ವಿರುದ್ದ ಟೀಕಾ ಪ್ರಹಾರವನ್ನು ಬಿಜೆಪಿ ನಡೆಸಿದೆ.
ಮನವಿ ಪತ್ರ ಸಲ್ಲಿಸಿದ ಬಳಿಕ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಜನರ ಮೇಲೆ ಈಗಾಗಲೇ ಮಣ್ಣಗಟ್ಟಲೆ ಟ್ಯಾಕ್ಸ್ ಹಾಕಿದ್ದಾರೆ.ಹಾಲಿಂದ ಹಾಲ್ಕೋಹಾಲ್ ವರೆಗೆ ತೆರಿಗೆ ಹಾಕಿದ್ದಾರೆ. ಕಸದಿಂದ ರಸ ಮಾಡಿಕೊಳ್ಳಲು ಸೆಸ್ ಹೆಚ್ಚಳ ಮಾಡಿದ್ದಾರೆ.ಇವರು ಮನೆ ಕಟ್ಟುವವರಲ್ಲ. , ಮನೆ ಹಾಳು ಮಾಡುವವರು ಎಂದು ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದರು.
ಹಿಂದೆ ಕೆಂಪೇಗೌಡರಿಗೆ ನಾಡು ಕಟ್ಟಿದವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್ ನವರು ಮನೆ ಹಾಳು ಮಾಡುವವರು.ಹಿಂದೆ ಸೆಸ್ ಎಂಬುದು ಇತ್ತು. ಈಗ ಯೂರ್ಸ ಫೀಸ್ ಮಾಡಿದ್ದಾರೆ.ಕಸದ ಟೆಂರ್ಡ ಕರೆದಿರುವುದು 150 ಕೋಟಿಗೆ. ಈಗ ಸಂಗ್ರಹ ಮಾಡುತ್ತಿರುವುದು 500-600 ಕೋಟಿ.ಯಾರ ಮನೆ ಹಾಳು ಮಾಡಲು ಇಷ್ಟು ತೆರಿಗೆ ಸಂಗ್ರಹ ಮಾಡ್ತಿದ್ದೀರಿ? ಇದರಿಂದ ಮನೆ ಮಾಲೀಕರು ಬಾಡಿಗೆ ಹೆಚ್ಚಳ ಮಾಡುತ್ತಾರೆ. ಮನೆ ಮಾಲೀಕರು, ಬಾಡಿಗೆದಾರರ ನಡುವೆ ಗಲಾಟೆ ಶುರುವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲ್ಯಾಣ ಮಂಟಪ ದರ ಹೆಚ್ಚಳ ಮಾಡುತ್ತಿದ್ದಾರೆ. ಹೊಟೆಲ್ ನವರು ತಿಂಡಿ ದರ ಹೆಚ್ಚಳ ಮಾಡುತ್ತಾರೆ. ಇದಕ್ಕೆ ಕಾರಣ ನೀವೇ.! ಬೆಂಗಳೂರು ಜನರ ಲೂಟಿ ಮಾಡಲು ಹೊರಟಿದ್ದೀರಿ.ಹಿಂದೆ ನಮ ಸರ್ಕಾರ ಇದ್ದಾಗ ಕೆ.ಜಿ ಲೆಕ್ಕದಲ್ಲಿ ಹಾಕ್ತ್ದೆಿವು.ಇವರು ಸ್ವ್ಕೇರ್ಕ ಫೀಟ್ ಲೆಕ್ಕದಲ್ಲಿ ದರ ಹಾಕುತ್ತಿದ್ದಾರೆ. ನಾವು ಜನರ ಮೇಲೆ ಹೊರೆ ಎಂದು ಢ ಬೆಂಗಳೂರು ಎಂಎಲ್‌ಎ ಸೇರಿ ತಡೆ ನೀಡಿದೆವು ಎಂದು ಹೇಳಿದರು.
ಇವರಿಗೆ ಗ್ಯಾರಂಟಿ ಹಣ ಬೇಕು.ಅದನ್ನ ಒದಗಿಸೋಕೆ ತೆರಿಗೆ ಹಾಕಿದ್ದಾರೆ. ಮುಂದಿನ ತಿಂಗಳಲ್ಲಿ ವಾಪಸ್ ತೆಗೆದುಕೊಳ್ಳಬೇಕು.ಸ್ಕ್ವರ್ಯ ಫೀಟ್ ಲೆಕ್ಕ ಬಿಟ್ಟು, ಕೆ.ಜಿ ಲೆಕ್ಕದಲ್ಲಿ ತೆರಿಗೆ ಸಂಗ್ರಹ ಮಾಡಿ.ಇಲ್ಲದಿದ್ದರೆ ನಿಮಗೆ ಜನರ ಶಾಪ ತಟ್ಟಲಿದೆ.ಬೆಂಗಳೂರು ಹೊರತುಪಡಿಸಿದ್ರೆ, ಬೇರೆ ಯಾವುದೇ ನಗರದಲ್ಲಿ ಕಸಕ್ಕೆ ಇಷ್ಟು ಸೆಸ್ ಇಲ್ಲ.ಇದು ಬೆಂಗಳೂರಿಗರಿಗೆ ಶಾಪ, ದುಬಾರಿ ಬೆಂಗಳೂರು ಆಗಿದೆ ಎಂದು ಕಿಡಿಕಾರಿದರು.