Monday, May 6, 2024
Homeರಾಜಕೀಯಬಿಜೆಪಿಯವರು ನಕಲಿ ಹಿಂದೂಗಳು : ಸಚಿವ ರಾಮಲಿಂಗಾರೆಡ್ಡಿ

ಬಿಜೆಪಿಯವರು ನಕಲಿ ಹಿಂದೂಗಳು : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಅ.6- ಬಿಜೆಪಿಯವರು ನಕಲಿ ಹಿಂದುಗಳು, ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದುತ್ವದ ಜಪ ಮಾಡುತ್ತಾರೆ. ಕಾಂಗ್ರೆಸಿಗರು ನಿಜವಾದ ಹಿಂದುಗಳು, ಸಾವಿರಾರು ವರ್ಷಗಳಿಂದಲೂ ನಾವು ಧರ್ಮಪಾಲನೆ ಮಾಡುತ್ತಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹುಟ್ಟಿದ ದಿನದಿಂದಲೂ ಹಿಂದುತ್ವವನ್ನೇ ಆಚರಣೆ ಮಾಡುತ್ತಿದೆ. ನಾವು ಕಟ್ಟಿರುವ ದೇವಸ್ಥಾನಗಳನ್ನು, ಧರ್ಮಕ್ಕೆ ನೀಡಿದಷ್ಟು ದೇಣಿಗೆಗಳನ್ನು ಬಿಜೆಪಿಯವರು ನೀಡಿಲ್ಲ. 20-30 ವರ್ಷಗಳ ಹಿಂದಿನಂದಷ್ಟೇ ಬಿಜೆಪಿಯವರು ಹಿಂದುತ್ವದ ಚರ್ಚೆ ಮಾಡುತ್ತಾರೆ. ನಾವು ಸಾವಿರಾರು ವರ್ಷಗಳಿಂದಲೂ ನಿಜವಾದ ಹಿಂದುಗಳು. ಅವರಂತೆ ರಾಜಕಾರಣದ ನಕಲಿ ಹಿಂದೂಗಳಲ್ಲ ಎಂದರು.

ಕಾಂಗ್ರೆಸಿಗರು ಯಾವತ್ತು ಒಂದು ಧರ್ಮಕ್ಕೆ ಆದ್ಯತೆ ನೀಡುವುದಿಲ್ಲ. ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುತ್ತದೆ. ಆದರೆ ಬಿಜೆಪಿಯವರು ಆ ರೀತಿಯಲ್ಲ. ಒಂದು ಧರ್ಮಕ್ಕೆ ಸೀಮಿತವಾಗಿ ರಾಜಕಾರಣ ಮಾಡುತ್ತಾರೆ. ಧರ್ಮ ಒಡೆಯುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.

ಯಾವುದೇ ಸಮಯದಲ್ಲಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ

ಬಿಜೆಪಿಯವರು ಸರ್ಕಾರ ರಚಿಸಿದ ವೇಳೆ 279 ಕೋಮುಗಲಭೆಯ ಪ್ರಕರಣಗಳನ್ನು ಹಿಂಪಡೆದರು. 7000 ಕ್ಕೂ ಹೆಚ್ಚು ಮಂದಿ ರೌಡಿ ಶೀಟರ್‍ಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಕಾಂಗ್ರೆಸ್ ಆ ರೀತಿ ಧರ್ಮಾಧಾರಿತವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ರೈತರು, ಕನ್ನಡಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕ ಉದ್ದೇಶದ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ಗಂಭೀರ ಸ್ವರೂಪದ ಅಪರಾಧಗಳಲ್ಲಿ ತೊಡಗಿರುವವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು.

ತಪ್ಪಿತಸ್ಥರು ಯಾವುದೇ ಪಕ್ಷ ಅಥವಾ ಧರ್ಮದವರಾದರೂ ನಾವು ಕ್ರಮ ಕೈಗೊಳ್ಳುತ್ತೇವೆ. ಆದರೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‍ಗಿರಿ ಮಾಡುತ್ತಾರೆ, ಪಬ್ ಗಲಾಟೆಯಾಯಿತು, ಇದರಲ್ಲೆಲ್ಲಾ ಭಾಗವಹಿಸಿದ್ದವರು ಯಾರು, ಬಿಜೆಪಿ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು, ರಾಜಕಾರಣಕ್ಕಾಗಿ ಇಂತಹ ನಕಲಿ ಹಿಂದುತ್ವವನ್ನು ಬಿಜೆಪಿ ಮೊದಲಿನಿಂದಲೂ ಬಳಕೆ ಮಾಡುತ್ತಿದೆ ಎಂದರು.

ಶಿವಮೊಗ್ಗ ಗಲಾಟೆ ಸಂದರ್ಭದಲ್ಲಿ ಇನ್ನಷ್ಟು ಬಿಗಿ ಬಂದೋಬಸ್ತ್ ಅನ್ನು ಆಯೋಜನೆ ಮಾಡಬೇಕಿತ್ತು. ಅಲ್ಲಿ ಮೊದಲಿನಿಂದಲೂ ಕೋಮು ಸಂಘರ್ಷಗಳಾಗುತ್ತಿದ್ದವು, ಮುನ್ನೆಚ್ಚರಿಕೆ ವಹಿಸಬೇಕಿತ್ತು. ಗಲಾಟೆ ನಂತರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ತಪ್ಪಿತಸ್ಥರಿಗೆ ಧರ್ಮ ಸಂಘಟನೆಗಳ ಹೆಸರಿನಲ್ಲಿ ರಿಯಾಯಿತಿ ನೀಡಬಾರದು ಎಂದು ಹೇಳಿದರು.

ಬಿಜೆಪಿಯವರು ವೇಷ ಮರೆಸಿಕೊಂಡು ಗಲಭೆ ಮಾಡುತ್ತಾರೆ ಎಂದು ತಾವು ಶಿವಮೊಗ್ಗ ಘಟನೆ ಕುರಿತಾಗಿ ಹೇಳಿದ್ದಲ್ಲ. 20-30 ವರ್ಷಗಳಿಂದಲೂ ಬಿಜೆಪಿಯವರು ನಡೆದುಕೊಳ್ಳುವ ರೀತಿಯ ಬಗ್ಗೆ ಹೇಳಿದ್ದೇನೆ ಎಂದರು.
ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ ನಿನ್ನೆ ಮುಖ್ಯಮಂತ್ರಿಯವರು ಕರೆದ ಔತಣಕೂಟದಲ್ಲಿ ಲಿಂಗಾಯತ ಸಮುದಾಯದ ಈಶ್ವರ್‍ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರರಾಗಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.

ಭಾರತಕ್ಕೆ ಹಸ್ತಾಂತರದ ವಿರುದ್ಧ ಮನವಿ ಸಲ್ಲಿಸಲು ರಾಣಾಗೆ ಕಾಲಾವಕಾಶ

ಆಡಳಿತ ವ್ಯವಸ್ಥೆಯಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಜಿಲ್ಲಾಧಿಕಾರಿಗಳ ಹಾಗೂ ಇತರ ಉನ್ನತ ಹಂತದಲ್ಲಿ ಯಾವ ಮಟ್ಟದ ಆದ್ಯತೆ ನೀಡಲಾಗಿದೆ ಎಂಬ ಮಾಹಿತಿಯನ್ನು ಚರ್ಚಿಸಲಾಗಿದೆ. ಆ ರೀತಿ ವ್ಯತ್ಯಾಸಗಳಿದ್ದರೆ ಶ್ಯಾಮನೂರು ಶಿವಶಂಕರಪ್ಪ ಮತ್ತು ಸಿದ್ದರಾಮಯ್ಯನವರು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು ಎಂಬ ಚರ್ಚೆಗಳು ಕೇಳಿಬಂದಿವೆ.

RELATED ARTICLES

Latest News