Monday, April 29, 2024
Homeರಾಷ್ಟ್ರೀಯಯಾವುದೇ ಸಮಯದಲ್ಲಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ

ಯಾವುದೇ ಸಮಯದಲ್ಲಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು, ಅ.6- ಮುಂದಿನ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇದೇ 8 ಅಥವಾ 10 ರಂದು ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಡ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆ ಅವಧಿ ಬಹುತೇಕ ಮುಕ್ತಾಯವಾಗಿದ್ದು, ಚುನಾವಣಾ ಆಯೋಗ ಆಕ್ಟೋಬರ್ 8 ಅಥವಾ 10 ರಂದು ದಿನಾಂಕವನ್ನು ಘೋಷಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ನವೆಂಬರ್ 2 ನೇ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡು ಅಥವಾ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಿಗೆ ಚುನಾವಣಾ ಆಯೋಗ ಒಂದೇ ಹಂತದಲ್ಲಿ ಮತದಾನ ನಡೆಸಲು ಉದ್ದೇಶಿಸಿದೆ. ಈ ಹಿಂದೆ 2018 ರಲ್ಲಿ ಈ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದ ಮತದಾನವನ್ನು ನಡೆಸಿತ್ತು.

ಭಾರತಕ್ಕೆ ಹಸ್ತಾಂತರದ ವಿರುದ್ಧ ಮನವಿ ಸಲ್ಲಿಸಲು ರಾಣಾಗೆ ಕಾಲಾವಕಾಶ

ನಕ್ಸಲ್ ಪೀಡಿತ ಛತ್ತೀಸ್‍ಗಡದಲ್ಲಿ ಈ ಬಾರಿ ಎರಡು ಅಥವಾ ಮೂರು ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಈ ಐದು ರಾಜ್ಯಗಳಿಗೆ ಭೇಟಿ ನೀಡಿದ್ದು, ತೆಲಂಗಾಣ ರಾಜ್ಯದ ಪ್ರವಾಸವೂ ಪೂರ್ಣಗೊಂಡಿದೆ. ವೀಕ್ಷಕರೊಂದಿಗಿನ ಈ ಸಭೆಯ ನಂತರ, ಚುನಾವಣಾ ಆಯೋಗವು ಈ ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಯಾವುದೇ ಸಮಯದಲ್ಲಿ ಘೋಷಿಸಬಹುದು. ಸಭೆಯಲ್ಲಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.

ಚುನಾವಣಾ ಆಯೋಗದ ಪೊಲೀಸ್, ಸಾಮಾನ್ಯ ಮತ್ತು ವೆಚ್ಚ ವೀಕ್ಷಕರ ಸಭೆಯ ಉದ್ದೇಶವು ಮಾದರಿ ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರವನ್ನು ಸುಗಮಗೊಳಿಸುವುದಾಗಿದೆ ಮತ್ತು ಹಣದ ಶಕ್ತಿಯನ್ನು ನಿಯಂತ್ರಿಸುವುದು.

ಆಯೋಗವು ಇದುವರೆಗೆ ರಾಜಸ್ಥಾನ, ಮಿಜೋರಾಂ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದೆ. ಆಯೋಗದ ತಂಡ ತೆಲಂಗಾಣಕ್ಕೂ ಭೇಟಿ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಐದು ರಾಜ್ಯಗಳ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸಬಹುದು.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ನವೆಂಬರ್-ಡಿಸೆಂಬನರ್‍ನಲ್ಲಿ ಛತ್ತೀಸ್ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮಿಜೋರಾಂ ವಿಧಾನಸಭೆಯ ಅಕಾರಾವ ಈ ವರ್ಷ ಡಿಸೆಂಬರ್ 17 ರಂದು ಕೊನೆಗೊಳ್ಳಲಿದೆ. ಈಶಾನ್ಯ ರಾಜ್ಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ.

RELATED ARTICLES

Latest News