ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು 80 ದಾಟಲ್ಲ : HDK

ಬೆಂಗಳೂರು, ಮಾ.28- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು 80 ದಾಟಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಲಘುವಾಗಿ ಮಾತಾಡಹುದು. ಆದರೆ, ಎರಡು ರಾಷ್ಟ್ರೀಯ ಪಕ್ಷದವರಿಗೂ ನಮ್ಮ ಬಗ್ಗೆ ತಳಮಳ ಉಂಟಾಗಿದೆ. ಹೊರಗಡೆ ನಡೆಯುತ್ತಿರುವುದು ಬೇರೆ, ಒಳಗಡೆ ನಡೆಯೊದೇ ಬೇರೆ ಎಂದರು. ಎರಡೂ ಪಕ್ಷದವರು ದುಡ್ಡು ಕೊಟ್ಟು ಜನರನ್ನು ಕರೆದು ತರುವುದನ್ನು ಮಾಧ್ಯಮಗಳೇ ತೋರಿಸುತ್ತಿಲ್ಲವೆ? 500 ರೂಪಾಯಿಯ ವಿಡಿಯೋ ವೈರಲ್ ಆಯ್ತು. ಏ.10 ವರೆಗೆ ನಾನು ಜನರ […]

ಕಾಂಗ್ರೆಸ್ ಉಚಿತ ಉಡುಗೊರೆ ಅಸ್ತ್ರಕ್ಕೆ ಬಿಜೆಪಿ ಮೀಸಲಾತಿ ಬ್ರಹ್ಮಾಸ್ತ್ರ

ಬೆಂಗಳೂರು,ಮಾ.25- ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಚುನಾವಣೆ ಪ್ರಣಾಳಿಕೆಯ ಗ್ಯಾರಂಟಿ ಉಚಿತ ಯೋಜನೆಗಳ ಅಸ್ತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಗಿಫ್ಟ್ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿ ಮತದಾರರನ್ನು ಕಮಲದತ್ತ ಸೆಳೆಯುವ ಕಸರತ್ತು ನಡೆಸಿದೆ. ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ಘೋಷಣೆ ಆಗುವ ಮುನ್ನವೇ ಚುನಾವಣೆ ಪೂರ್ವ ಪ್ರಚಾರಗಳು ಮತ್ತು ಸಮಾವೇಶಗಳಲ್ಲಿ ಹಲವಾರು ಉಚಿತ ಕೊಡುಗೆಗಳ ಚುನಾವಣೆ ಆಶ್ವಾಸನೆಗಳನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಪಕ್ಷದ ನೇತಾರರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೂಲಕ ಚುನಾವಣೆ ಪ್ರಣಾಳಿಕೆಯ ಘೋಷಣೆಗಳನ್ನು […]

ವಿಧಾನಸಭೆ ಚುನಾವಣೆ : ಬಿಜೆಪಿ ಸಂಸದರ ಸ್ಪರ್ಧೆಗೆ ಹೈಕಮಾಂಡ್ ಬ್ರೇಕ್

ಬೆಂಗಳೂರು,ಮಾ.20- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಒಂದು ಡಜನ್ ಅಧಿಕ ಸಂಸದರು ಮತ್ತು ವಿಧಾನಪರಿಷತ್ ಸದಸ್ಯರು ಸ್ರ್ಪಧಿಸಲು ತುದಿಗಾಲಲ್ಲಿ ನಿಂತಿದ್ದರೂ ವರಿಷ್ಠರು ಮಾತ್ರ ಕೃಪೆ ತೋರುತ್ತಿಲ್ಲ. ಸಾಮಾನ್ಯವಾಗಿ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಪರಿಷತ್‍ನ ಸದಸ್ಯರು ರಾಜೀನಾಮೆ ನೀಡಿ ಇಲ್ಲವೇ ರಾಜೀನಾಮೆ ನೀಡದೆಯೂ ಸ್ಪರ್ಧೆಗಿಳಿದಿದ್ದರು. ಒಂದು ವೇಳೆ ಗೆದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದರು. ಆದರೆ ಈ ಬಾರಿ ಚುನಾವಣೆಗೆ ಸ್ರ್ಪಧಿಸಲು ಕೆಲವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇಂಗಿತ ವ್ಯಕ್ತಪಡಿಸಿದ್ದರೂ ದೆಹಲಿ ವರಿಷ್ಠರು […]

ಕಾವೇರಿದ ಚುನಾವಣೆ : ವಲಸೆ ತಡೆಯಲು ನಾಯಕರ ಹೆಣಗಾಟ

ಬೆಂಗಳೂರು,ಮಾ.19- ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಟಿಕೆಟ್‍ಗಾಗಿ ಪಕ್ಷದ ಅಭ್ಯರ್ಥಿಗಳ ಮಧ್ಯೆ ಈಗಾಗಲೇ ಹಗ್ಗಜಗ್ಗಾಟ ಜೋರಾಗಿದ್ದು, ಕೆಲವರು ಟಿಕೆಟ್ ಸಿಗಲ್ಲ ಎಂದು ಕಾತರಿಯಾಗುತ್ತಿದ್ದಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತ ವಲಸೆ ಹೋಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಆಡಳಿರೂಢ ಬಿಜೆಪಿ ಪಕ್ಷದ ಮಾಜಿ ಶಾಸಕರು, ನಾಯಕರುಗಳು ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಆಡಳಿತ ವಿರೋಧಿ ಅಂಶ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಆಡಳಿತಾರೂಢ ಬಿಜೆಪಿ ತನ್ನ ನಾಯಕರು ಕಾಂಗ್ರೆಸ್‍ಗೆ ಸೇರದಂತೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ಕಂಡುಬರುತ್ತಿದೆ. […]

ಸಾವರ್ಕರ್, ಟಿಪ್ಪು ಸಿದ್ದಾಂತದ ಮೇಲೆ ಚುನಾವಣೆ ನಡೆಯುವುದಿಲ್ಲ : ಬಿಎಸ್‌ವೈ

ಬೆಂಗಳೂರು,ಫೆ.27- ಬರಲಿರುವ ವಿಧಾನಸಭೆ ಚುನಾವಣೆ ಅಭಿವೃದ್ಧಿ ಆಧಾರದ ಮೇಲೆ ನಡೆಯುತ್ತಯೇ ಹೊರೆತು ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಸಿದ್ದಾಂತದ ಮೇಲೆ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲುರವರು ಈ ಬಾರಿಯ ಚುನಾವಣೆ ವೀರ ಸಾವರ್ಕರ್ ಹಾಗೂ ಟಿಪ್ಪು ಸಿದ್ದಾಂತದ ಮೇಲೆ ನಡೆಯಲಿದೆ ಎಂದು ಹೇಳಿದ್ದರು. ಆದರೆ, ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿರುವ ಯಡಿಯೂರಪ್ಪ, ಟಿಪ್ಪು ವರ್ಸಸ್ ಸಾವರ್ಕರ್ ಎಂಬುದನ್ನು ನಾನು ಒಪ್ಪುವುದಿಲ್ಲ, ಇದು […]

ಕಾಂಗ್ರೆಸ್‍ನಲ್ಲಿ ಪಕ್ಷ ನಿಷ್ಠರ ಅಸಮಾಧಾನ

ಬೆಂಗಳೂರು,ಫೆ.20- ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ನಾಯಕರ ವಲಸೆಯ ಪ್ರಮಾಣ ಹೆಚ್ಚಾಗಲಾರಂಭಿಸಿದೆ. ಜೆಡಿಎಸ್‍ನ ನಾಲ್ಕು ಶಾಸಕರು, ಉತ್ತರಕರ್ನಾಟಕ ಭಾಗದ ಬಿಜೆಪಿಯ ಮೂವರು ಶಾಸಕರು, ಸುಮಾರು 20ಕ್ಕೂ ಹೆಚ್ಚು ಮಂದಿ ಮಾಜಿ ಶಾಸಕರು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಬಿಜೆಪಿ ಆಡಳಿತದಲ್ಲಿದ್ದಾಗ ಅವಡಗಚ್ಚಿಕೊಂಡಿದ್ದ ನಾಯಕರು ಅಧಿಕಾರ ಅವಧಿ ಕೊನೆಗೊಳ್ಳುತ್ತಿದ್ದಂತೆ ಪಕ್ಷ ತೊರೆಯಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್‍ಗೆ ಸಿಹಿ-ಕಹಿ ಮಿಶ್ರ ಅನುಭೂತಿಯನ್ನು ಸೃಷ್ಟಿಸಿದೆ. ಒಂದೆಡೆ ಕಾಂಗ್ರೆಸ್‍ಗೆ ಅನ್ಯ ಪಕ್ಷಗಳಿಂದ ವಲಸೆ ಹೆಚ್ಚುತ್ತಿರುವುದು ಸಕಾರಾತ್ಮಕವಾದ ಬೆಳವಣಿಗೆಯಾಗಿದ್ದರೆ, ಮತ್ತೊಂದೆಡೆ ವಲಸಿಗರಿಂದಾಗಿ ಮೂಲ ಕಾಂಗ್ರೆಸ್ಸಿಗರು […]

ಸದನಕ್ಕೆ ಬಾರದ ಸದಸ್ಯರ ವಿರುದ್ಧ ಸ್ಪೀಕರ್ ಕಿಡಿ

ಬೆಂಗಳೂರು, ಫೆ.20- ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ಸೋಲು- ಗೆಲುವಿನ ವಿಚಾರದ ಆಲೋಚನೆಯಲ್ಲಿ ಸದನಕ್ಕೆ ಬಾರದೇ ಇರುವುದು ತಪ್ಪು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿಂದು ತಿಳಿಸಿದರು. ನಿಗದಿತ ಅವಧಿಗಿಂತ ವಿಳಂಬವಾಗಿ ಸದನ ಸಮಾವೇಶಗೊಂಡಾಗ ಮಾತನಾಡಿದ ಅವರು, ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದ ಮೇಲೆ 15 ಸದಸ್ಯರು ಮಾತನಾಡಿದ್ದಾರೆ. ಒಟ್ಟು ಹದಿಮೂರುವರೆ ಗಂಟೆ ಚರ್ಚೆಯಾಗಿದೆ. ಜೆಡಿಎಸ್‍ನ 7 ಸದಸ್ಯರು, ಆಡಳಿತ ಪಕ್ಷದ ಮೂವರು ಹಾಗೂ ಪ್ರತಿಪಕ್ಷ ಕಾಂಗ್ರೆಸ್‍ನ ಐವರು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ ಎಂದರು. […]

ಜೆಡಿಯು ಪಕ್ಷಕ್ಕೆ ಸೇರಿದ ಉದ್ಯಮಿ ಶಿವಕುಮಾರ್ ಬದ್ರಯ್ಯ

ಬೆಂಗಳೂರು,ಫೆ.11- ಬೆಂಗಳೂರಿನ ಬಾಳೆ ಎಲೆ ಹಾಗೂ ಗ್ರಂದಿಗೆ ಮಳಿಗೆಯ ಮಾಲೀಕರಾದ ಆರ್ ವಿ ಬದ್ರಯ್ಯ ಪುತ್ರ ಶಿವಕುಮಾರ್ ರಾಜಾಜಿನಗರ ಕ್ಷೇತ್ರದಿಂದ ಜನತಾದಳ (ಸಂಯುಕ್ತ) ಪಕ್ಷದಿಂದ ಸ್ಪರ್ಧಿಸುವುದಾಗಿ ಇಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಜನತಾದಳ (ಸಂಯುಕ್ತ) ಈ ಪಕ್ಷವು ಭ್ರಷ್ಟಾಚಾರ ಮುಕ್ತವಾಗಿದ್ದು ದೇಶದಲ್ಲಿ ಉತ್ತಮ ದೇಯೋದ್ದೇಶಗಳನ್ನು ಇಟ್ಟುಕೊಂಡಿರುವ ಪಕ್ಷ. ಇದರ ಸಿದ್ದಾಂತಗಳನ್ನು ಒಪ್ಪಿ ನಾನು ಈ ಪಕ್ಷಕ್ಕೆ ಬಂದಿದ್ದೇನೆ. ನಮ್ಮ ತಂದೆಯವರೊಂದಿಗೆ ಸೇರಿ ಅನೇಕ ವರ್ಷಗಳಿಂದ ಸುಮಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇವೆ. 25 ವರ್ಷಗಳಿಂದ ಅನಾಥ […]

ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನಿರೀಕ್ಷೆ

ಬೆಂಗಳೂರು,ಜ.31- ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಹುನಿರೀಕ್ಷಿತ ಪ್ರಸಕ್ತ ಸಾಲಿನ ಬಜೆಟ್ ನಾಳೆ ಮಂಡನೆಯಾಗಲಿದ್ದು, ವಿಧಾನಸಭೆ ಚುನಾವಣೆ ಹೊಸ್ತಿನಲ್ಲಿರುವ ಕರ್ನಾಟಕಕ್ಕೆ ಬಂಪರ್ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದರಿಂದ ಸಹಜವಾಗಿ ತಮ್ಮ ತವರು ರಾಜ್ಯಕ್ಕೆ ಬಜೆಟ್‍ನಲ್ಲಿ ಉಡುಗೊರೆಗಳ ಭಾಗ್ಯವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಮತದಾರರನ್ನು ಆಕರ್ಷಿಸಲು ಒಂದಿಷ್ಟು ಜನಪ್ರಿಯ ಯೋಜನೆಗಳ ಘೋಷಣೆ ಹಾಗೂ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕೆಹಸಿರು ನಿಶಾನೆ ತೋರುವ ಸಾಧ್ಯತೆಯನ್ನು ತಳ್ಳಿ […]

ಶಿವರಾತ್ರಿ ನಂತರ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ..?

ಬೆಂಗಳೂರು, ಜ.25-ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಮಹಾಶಿವರಾತ್ರಿ ಹಬ್ಬದದೊಳಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 93 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಜೆಡಿಎಸ್ ಈಗ ಎರಡನೇ ಹಂತದಲ್ಲಿ ಸುಮಾರು 60 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇನ್ನೆರಡು ವಾರದಲ್ಲಿ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ತೀವ್ರ ಕುತೂಹಲ ಕೆರಳಿಸಿರುವ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹಾಸನ, ಅರಕಲಗೂಡು ಹಾಗೂ ಅರಸೀಕೆರೆ ವಿಧಾನಸಭಾ […]