Friday, June 14, 2024
Homeರಾಷ್ಟ್ರೀಯಸಿಕ್ಕಿಂ ವಿಧಾನಸಭಾ ಚುನಾವಣಾ ಫಲಿತಾಂಶ : ಎಸ್‌‍ಕೆಎಂ ಭರ್ಜರಿ ಮುನ್ನಡೆ

ಸಿಕ್ಕಿಂ ವಿಧಾನಸಭಾ ಚುನಾವಣಾ ಫಲಿತಾಂಶ : ಎಸ್‌‍ಕೆಎಂ ಭರ್ಜರಿ ಮುನ್ನಡೆ

ಗ್ಯಾಂಗ್ಟಾಕ್‌, ಜೂ. 2 (ಪಿಟಿಐ) ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಭೂತಪೂರ್ವ ಗೆಲುವು ಸಾಧಿಸಿದೆ. ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಲ್ಲಿ ಆಡಳಿತಾರೂಢ ಎಸ್‌‍ಕೆಎಂ 30 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಎಸ್‌‍ಡಿಎಫ್‌ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮುಂದಿದೆ. ಇಂದು ಬೆಳಿಗ್ಗೆ ಆರಂಭವಾದ ಮತ ಎಣಿಕೆಯಲ್ಲಿ ಎಸ್‌‍ಕೆಎಂ ಭಾರಿ ಮುನ್ನಡೆ ಸಾಧಿಸಿದ್ದು, ಮುಖ್ಯಮಂತ್ರಿ ಮತ್ತು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌‍ಕೆಎಂ) ಅಭ್ಯರ್ಥಿ ಪ್ರೇಮ್‌ ಸಿಂಗ್‌ ತಮಾಂಗ್‌ ರೆನಾಕ್‌ ವಿಧಾನಸಭಾ ಕ್ಷೇತ್ರದಿಂದ ತಮ ಸಮೀಪದ ಎಸ್‌‍ಡಿಎಫ್‌ ಪ್ರತಿಸ್ಪರ್ಧಿ ಸೋಮ್‌ ನಾಥ್‌ ಪೌಡಿಯಾಲ್‌ ಅವರಿಗಿಂತ ಸುಮಾರು 6,443 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಸೊರೆಂಗ್‌ ಚಕುಂಗ್‌ ವಿಧಾನಸಭಾ ಕ್ಷೇತ್ರದಲ್ಲಿ ತಮಾಂಗ್‌ ಅವರು ತಮ ಸಮೀಪದ ಎಸ್‌‍ಡಿಎಫ್‌ ಅಭ್ಯರ್ಥಿ ಎ ಡಿ ಸುಬ್ಬ ಅವರಿಗಿಂತ 2,052 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.ಮಾಜಿ ಸಿಎಂ ಮತ್ತು ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ (ಎಸ್‌‍ಡಿಎಫ್‌‍) ಮುಖ್ಯಸ್ಥ ಪವನ್‌ ಕುಮಾರ್‌ ಚಾಮ್ಲಿಂಗ್‌ ಅವರು ನಾಮ್‌ಚೆಬಂಗ್‌ ಕ್ಷೇತ್ರದಲ್ಲಿ ಎಸ್‌‍ಕೆಎಂ ಅಭ್ಯರ್ಥಿ ರಾಜು ಬಾಸ್ನೆಟ್‌ಗಿಂತ 1,852 ಮತಗಳಿಂದ ಹಿಂದುಳಿದಿದ್ದಾರೆ.

ಪೋಕ್ಲೋಕ್‌ ಕವ್ರಾಂಗ್‌ ವಿಧಾನಸಭಾ ಕ್ಷೇತ್ರದಲ್ಲಿ ಚಾಮ್ಲಿಂಗ್‌ ಎಸ್‌‍ಕೆಎಂನ ಭೋಜ್‌ ರಾಜ್‌ ರೈಗಿಂತ 2,728 ಮತಗಳಿಂದ ಹಿನ್ನಡೆಯಲ್ಲಿದ್ದರು.ಭಾರತ ಫುಟ್‌ಬಾಲ್‌ನ ಮಾಜಿ ನಾಯಕ ಮತ್ತು ಎಸ್‌‍ಡಿಎಫ್‌ ಅಭ್ಯರ್ಥಿ ಬೈಚುಂಗ್‌ ಭುಟಿಯಾ ಅವರು ಬಾರ್‌ಫಂಗ್‌ ಅಸೆಂಬ್ಲಿ ಸ್ಥಾನದಲ್ಲಿ ಎಸ್‌‍ಕೆಎಂ ಪ್ರತಿಸ್ಪರ್ಧಿ ರಿಕ್ಸಲ್‌ ದೋರ್ಜಿ ಭುಟಿಯಾ ಅವರಿಗಿಂತ 4,346 ಮತಗಳಿಂದ ಹಿಂದುಳಿದಿದ್ದಾರೆ,

ಸಿಕ್ಕಿಂ ಬಿಜೆಪಿ ಘಟಕದ ಅಧ್ಯಕ್ಷ ದಿಲ್ಲಿ ರಾಮ್‌ ಥಾಪಾ ಅಪ್ಪರ್‌ ಬರ್ತುಕ್‌ ಅಸೆಂಬ್ಲಿ ಕ್ಷೇತ್ರದಲ್ಲಿ ತಮ ಎಸ್‌‍ಕೆಎಂ ಪ್ರತಿಸ್ಪರ್ಧಿ ಕಲಾ ರೈಗಿಂತ 2,312 ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

RELATED ARTICLES

Latest News