Saturday, July 27, 2024
Homeರಾಷ್ಟ್ರೀಯಉತ್ತರ ಪ್ರದೇಶದಲ್ಲಿ ಬಿಸಿಲಿನ ತಾಪಕ್ಕೆ 33 ಚುನಾವಣಾ ಸಿಬ್ಬಂದಿಗಳ ಸಾವು

ಉತ್ತರ ಪ್ರದೇಶದಲ್ಲಿ ಬಿಸಿಲಿನ ತಾಪಕ್ಕೆ 33 ಚುನಾವಣಾ ಸಿಬ್ಬಂದಿಗಳ ಸಾವು

ಲಕ್ನೋ,ಜೂ.2- ರಾಜ್ಯದ 13 ಕ್ಷೇತ್ರಗಳಲ್ಲಿ ಶನಿವಾರ ನಡೆದ ಏಳನೇ ಹಂತದ ಲೋಕಸಭೆ ಚುನಾವಣೆ ವೇಳೆ ಬಿಸಿಲಿನ ತಾಪದಿಂದ 33 ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್‌ ರಿನ್ವಾ ತಿಳಿಸಿದ್ದಾರೆ.

ಈ ಸಂಖ್ಯೆಯಲ್ಲಿ ಗಹರಕ್ಷಕರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರ ಚುನಾವಣಾ ಸಿಬ್ಬಂದಿ ಸೇರಿದ್ದಾರೆ. ಬಲಿಯಾ ಲೋಕಸಭಾ ಕ್ಷೇತ್ರದ ಸಿಕಂದರ್‌ಪುರ ಪ್ರದೇಶದ ಮತಗಟ್ಟೆಯೊಂದರಲ್ಲಿ ಮತದಾರ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದರು.
ಮತಗಟ್ಟೆಯಲ್ಲಿ ನಿಂತಿದ್ದ ರಾಮ್‌ ಬದನ್‌ ಚೌಹಾಣ್‌ ಎಂಬ ಮತದಾರರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಆಯಾ ಕ್ಷೇತ್ರಗಳಲ್ಲಿ ಚುನಾವಣಾ ಸಿಬ್ಬಂದಿ ಸಾವಿನ ಬಗ್ಗೆ ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಇಒ ರಿನ್ವಾ ತಿಳಿಸಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಸಿಬ್ಬಂದಿಯ ಶವಪರೀಕ್ಷೆ ವರದಿಯನ್ನೂ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ಆದೇಶದಂತೆ ಚುನಾವಣಾ ಸಿಬ್ಬಂದಿ ಕುಟುಂಬ ಸದಸ್ಯರಿಗೆ 15 ಲಕ್ಷ ಪರಿಹಾರ ನೀಡಲಾಗುವುದು ಎಂದರು.

ಜೆಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಉಪೇಂದ್ರ ಅಗರ್ವಾಲ್‌ ಅವರು ಕಾನ್ಸ್ ಟೇಬಲ್‌ ಸಾವನ್ನು ಖಚಿತಪಡಿಸಿದ್ದು, ಸ್ಥಳದಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಕೂಲರ್‌ಗಳು ಮತ್ತು ಇತರ ಸೌಲಭ್ಯಗಳು ಲಭ್ಯವಿದೆ ಎಂದು ಹೇಳಿದರು.

ಏಳನೇ ಹಂತದಲ್ಲಿ, ಉತ್ತರ ಪ್ರದೇಶದ ಮಹಾರಾಜ್‌ಗಂಜ್‌‍, ಗೋರಖ್‌ಪುರ, ಕುಶಿನಗರ, ಡಿಯೋರಿಯಾ, ಬನ್‌್ಸಗಾಂವ್‌ (ಎಸ್‌‍ಸಿ), ಘೋಸಿ, ಸೇಲಂಪುರ, ಬಲ್ಲಿಯಾ, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ ಮತ್ತು ರಾಬರ್ಟ್‌್ಸಗಂಜ್‌ (ಎಸ್‌‍ಸಿ) ನಲ್ಲಿ ಮತದಾನ ನಡೆದಿತ್ತು.

ಚುನಾವಣಾ ಆಯೋಗವು ಈ ಹಂತದಲ್ಲಿ 1,08,349 ಚುನಾವಣಾ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿತ್ತು. ಸಿಬ್ಬಂದಿಗಳ ಸಾವಿನ ನಿಖರ ಕಾರಣ ಮರಣೊತ್ತರ ಪರೀಕ್ಷೆಯ ನಂತರ ಹೊರ ಬೀಳಲಿದೆ.

RELATED ARTICLES

Latest News