ಬೆಂಗಳೂರು, ಮೇ 30- ವಾಲ್ಮೀಕಿ ಅಭಿವೃದ್ಧಿ ನಿಗಮದ ನಿದೇರ್ಶಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ನಾಗೇಂದ್ರ ಅವರ ನೇರ ಪಾತ್ರ ಇರುವ ಹಿನ್ನಲೆಯಲ್ಲಿ ಜೂನ್ ತಿಂಗಳ 6 ರೊಳಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಸರ್ಕಾರಕ್ಕೆ ಗಡವು ನೀಡಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಆಶೋಕ್, ಮಾಜಿ ಸಚಿವರಾದ ಸಿಟಿ ರವಿ, ಗೋವಿಂದ ಕಾರಜೋಳ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಶಾಸಕರಾದ ಸಿಕೆ ರಾಮಮೂರ್ತಿ ಅವರುಗಳು ಸಚಿವ ನಾಗೇಂದ್ರ ಜೂನ್ 6 ರೊಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ರಾಜ್ಯದ್ಯಾಂತ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಪ್ರರಕಣದಲ್ಲಿ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೈತಿಕ ಹೊಣೆಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಮೇಲೆ ಸಚಿವ ನಾಗೇಂದ್ರ ರಾಜೀನಾಮೆ ಕೊಡಲೇಬೇಕು. ಜೂನ್ 6 ರೊಳಗೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಇಡೀ ರಾಜ್ಯಾದ್ಯಂತ ದಲಿತರ ಹಣವನ್ನು ನುಂಗಿದ ಕಾಂಗ್ರೆಸ್ ಎಂದು ಹೋರಾಟ ಮಾಡುತ್ತೇವೆ. ಈ ವಿಷಯ ವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವ ತನಕ ಬಿಡುವುದಿಲ್ಲ.ಎಂದು ಎಚ್ಚರಿಕೆ ಕೊಟ್ಟರು.
ಅಧಿಕಾರಿಯ ಸಾವಿಗೆ ಬೆಲೆ ಇಲ್ಲವಾ…? ಈ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇದೆ, ಇದು ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಹೋಗಿದೆ.ಅದಕ್ಕಾಗಿ ಇದನ್ನು ಸಿಬಿಐ ಗೆ ವಹಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ವಿಷಯ ವನ್ನು ಸುಮ್ಮನೆ ಬಿಡಬಾರದು ಎಂದು ಪಕ್ಷದಲ್ಲಿ ತೀರ್ಮಾನ ಆಗಿದೆ.ದಲಿತರ ಹಣವನ್ನು ಲೂಟಿ ಆಗಿರುವುದನ್ನು ಸುಮನೆ ಬಿಡುವುದಿಲ್ಲ ಎಂದು ಗುಡುಗಿದರು.
ಡೆತ್ ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಿಂದ ಹಣ ವರ್ಗಾವಣೆ ಬಗ್ಗೆ ಅವರು ಬರೆದಿದ್ದಾರೆ. ಇಷ್ಟು ಸ್ಪಷ್ಟವಾಗಿ ಆಗಿ ಡೆತ್ ನೋಟ್ ಬರೆದಿರುವ ಅಧಿಕಾರಿಯನ್ನು ನಾನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಅವರು ಸಂಪೂರ್ಣವಾಗಿ ವಿವರವುಳ್ಳ ಮಾಹಿತಿಯನ್ನು ಡೀಟೈಲ್‌್ಸ ಬರೆದಿದ್ದಾರೆ.ಲೂಟಿ ಮಾಡಿರುವುದು ಕಂಡು ಬಂದಿದೆ, ಇದರಲ್ಲಿ ನನ್ನ ತಪ್ಪೇನು ಇಲ್ಲ, ಮತ್ತೊಮ್ಮೆ ನನ್ನ ಪರಿಸ್ಥಿತಿ ಕಾರಣ ಎಂದರೆ, ಮತ್ತೊಮ್ಮೆ ಎಲ್ಲರೂ ಕಾರಣ. ಈ ನಿಗಮಕ್ಕೆ ನಾನು ಏನು ವಂಚನೆ ಮಾಡಿರುವುದಿಲ್ಲ ಎಂದು ಬರೆದಿದ್ದಾರೆ. ಇದಕ್ಕೀಂತ ಬೇರೆ ದಾಖಲೆ ಇನ್ನೇನು ಬೇಕು ಎಂದು ಪ್ರಶ್ನೆಸಿದರು.
ಎಫ್‌ಐಆರ್ ನಲ್ಲಿ ಸಚಿವರ ಹೆಸರು ಯಾಕಿಲ್ಲ..? ಹಣ ಗುಳುಮ್ ಮಾಡಿದ್ದ ಅಧಿಕಾರಿಗಳನ್ನು ಇದುವರೆಗೂ ಏಕೆ ಬಂಧಿಸಿಲ್ಲ.? ಅವರನ್ನು ಬಂಧಿಸಿದರೆ, ನಿಮ್ಮ ಬಂಡವಾಳ ಬಯಲಿಗೆ ಬರುತ್ತದೆಯೇ ಎಂಬ ಭಯ ಕಾಡುತ್ತಿದಿಯೇ? ಪ್ರಕರಣವನ್ನು ಸಿಐಡಿಗೆ ಯಾಕೆ ಕೊಟ್ಟಿದ್ದಾರೆ ಎಂದರೆ, ಇದು ಕಾಂಗ್ರೆಸ್ ಇನ್ವಿಸ್ಡೇಷನ್ ಟೀಮ್ ಎಂದು ಟೀಕಾ ಪ್ರಹಾರ ನಡೆಸಿದರು.
ನಾನು ವರ್ಗಾವಣೆ ಯಲ್ಲಿ ಹಣ ಹೊಡೆದರೆ, ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯನವರೇ ಅನೇಕ ಬಾರಿ ಹೇಳಿದ್ದಾರೆ. ನುಡಿದಂತೆ ನಡೆದುಕೊಳ್ಳುವುದಾದರೆ, ಇವಾಗ ತಾವು ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ.?ಮೃತನ ಮನೆಯಲ್ಲಿದ್ದ ಪೆನ್ ಡ್ರೈವ್ ಅನ್ನು ಏಕೆ ತೆಗೆದುಕೊಂಡು ಹೋದರು. ಅದನ್ನು ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.
ಅಂದು ನಮ್ಮ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಪ್ರಕರಣದಲ್ಲಿ ಕಾಂಗ್ರೆಸ್ ಉಸ್ತುವಾಗಿ ರಣಜಿತ್ ಸಿಂಗ್ ಸುರ್ಜೇವಾಲ ಅವರು , ಕರ್ನಾಟಕಕ್ಕೆ ಕೆಟ್ಟ ದಿನ ಅಂದಿದ್ದರು.ಅಂದು ಕಾಂಗ್ರೆಸ್ ಲೂಟಿ ಯನ್ನು ಸಹಿಸೋದಿಲ್ಲ, ಈಶ್ವರಪ್ಪ ರನ್ನು ಬಂಧಿಸಿ ಎಂದು ಒತ್ತಾಯ ಮಾಡಿದ್ದರು. ನಮ್ಮ ದಲಿತ ಉದ್ಧಾರ ನಾಯಕ ಸಿದ್ದರಾಮಯ್ಯ ನವರನ್ನು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಅಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿಗೆ ನಾಚಿಕೆ ಆಗಬೇಕು ಅಂದಿದ್ದರು. ಇವಾಗ ನಾಚಿಗೆ ನಿಮಗೆ ಆಗಬೇಕಾ..? ಅವರಿಗೆ ಆಗಬೇಕಾ..? ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ..? ಪರಿಶಿಷ್ಟ ವರ್ಗಗಕ್ಕೆ ಸೇರಿದ 187 ಕೋಟಿ ಹಣ ಗುಳುಂ ಸರ್ಕಾರದ ಸಾಧನೆ ಎಂದು ಕುಹಕವಾಡಿದ ಆಶೋಕ್ ಅಧಿಕಾರ ಸಿಕ್ಕಿದ ಮೇಲೆ ದಲಿತರ ಉದ್ದಾರ ಅಗಿಲ್ಲ. ಕಾಂಗ್ರೆಸ್‌ಗೆ ರಾಮ ಕಂಡರೆ ಆಗಲ್ಲ ಗೊತ್ತಿದೆ. ಆದರೆ ವಾಲೀಕಿ ಮಹರ್ಷಿಗಳ ಕಂಡರೆ ಆಗಲ್ಲ ಎಂಬುದು ಇವಾಗ ಗೊತ್ತಾಯಿತು.ಈ ಸರ್ಕಾರ ಕೊಲೆಗಡುಕರ ಸರ್ಕಾರ ಎಂದು ಸಾಬೀತಾಗಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಗ್ಯಾರಂಟಿ ಇರಲಿಲ್ಲ ಇವಾಗ ಅಧಿಕಾರಿಗಳಿಗೂ ಗ್ಯಾರಂಟಿ ಇಲ್ಲ. ಮಹಿಳಾ ಬ್ಯಾಂಕ್ ಅಕೌಂಟ್ ಗೆ ನಮ್ಮ ಸರ್ಕಾರ ಬಂದರೆ ಟಕಾ ಟಕಾ ಅಂತಾ ಹಣ ಹಾಕ್ತೀವಿ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಅದೇ ರೀತಿ ಸರ್ಕಾರದಿಂದ ಈ ಹಣವನ್ನು ಕಾಂಗ್ರೆಸ್ ನ ಲೂಟಿ ಅಕೌಂಟ್ ವೆ ಟಕಾ ಟಕಾ ಎಂದು ವರ್ಗಾವಣೆ ಮಾಡಿದ್ದಾರೆ.180 ಕೋಟಿ ನುಂಗಬೇಕು ಅಂದರೆ ಒಬ್ಬ ಮಂತ್ರಿ ಭಾಗಿಯಾಗಿರುವುದಿಲ್ಲ. ಇಡೀ ಸಚಿವ ಸಂಪುಟದ ಸಚಿವರು ಸೇರಿ ಸರ್ಕಾರವೇ ಭಾಗಿಯಾಗಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಸಿ ಟಿ ರವಿ ಮಾತನಾಡಿ, ಡೆಡ್ ನೋಟ್ ನಲ್ಲಿ ನಾಗರಾಜ್ ಎಂಬವವರು ಹೆಸರು ಇದೆ.ನಾಗರಾಜ್ ಅವರು ನಾಗೇಂದ್ರ ಅವರ ಬಿಜೆನೆಸ್ ಪಾರ್ಟರ್. ಸಿಎಂ, ಡಿಸಿಎಂ ,ನಾಗೇಂದ್ರ ಜೊತೆ ವಿಶೇಷ ವಿಮಾನದಲ್ಲಿ ನವದೆಹಲಿಗೆ ಹೋಗಿದ್ದಾರೆ. ಇಂತಹವರು ಹೋಗಲು ಸಾಧ್ಯವೇ..?ಬೇರೆಯವರ ಜೊತೆ ಸ್ಪೆಷಲ್ ಫ್ಲೈಟ್ ನಲ್ಲಿ ಹೋಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.ಇದು ದೊಡ್ಡ ಹಗರಣವಾಗಿದ್ದು, ನಾಗೇಂದ್ರ ಸಚಿವರ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು.ಸರ್ಕಾರ ವಜಾ ಆಗೋವರೆಗೂ ನಮ್ಮ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ಮನೆಗೆ ಬಿಜೆಪಿ ಎಸ್‌ಟಿ ಮೋರ್ಚಾ ಮುತ್ತಿಗೆ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ 187 ಕೋಟಿ ರೂ. ಅವ್ಯವಹಾರದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಇಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಧಿಕ್ಕಾರ ಧಿಕ್ಕಾರ, ಸಚಿವರಿಗೆ ಧಿ ಕ್ಕಾರ, ಸರಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಲಾಯಿತು. ಪೊಲೀಸರು ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬಂಧಿಸಿದರು. ಅಕ್ರಮವಾಗಿ ಅಮಾಯಕರಾದ ತಮ್ಮನ್ನು ಬಂಧಿಸಲಾಗುತ್ತಿದೆ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿ ಕ್ಕಾರೞ ಕೂಗಿದ ಕಾರ್ಯಕರ್ತರು, ಅಯ್ಯಯ್ಯೋ ಅನ್ಯಾಯ, ಅನ್ಯಾಯೞ ಎಂದು ಘೋಷಣೆ ಕೂಗಿದರು. ಸುಮಾರು 187 ಕೋಟಿ ರೂ. ಅವ್ಯವಹಾರದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿ ಕಾರಿ ಚಂದ್ರಶೇಖರ್ ಅವರು ಡೆತ್ ನೋಟ್‌ನಲ್ಲಿ ಸಚಿವರ ಹೆಸರನ್ನು ಉಲ್ಲೇಖಿಸಿದ್ದು, ಸಚಿವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.