Friday, November 22, 2024
Homeರಾಜ್ಯವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ : ಹಾಡು, ನೃತ್ಯ, ಭಜನೆ ಮಾಡಿ ರಾತ್ರಿಕಳೆದ ಶಾಸಕರು

ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ : ಹಾಡು, ನೃತ್ಯ, ಭಜನೆ ಮಾಡಿ ರಾತ್ರಿಕಳೆದ ಶಾಸಕರು

ಬೆಂಗಳೂರು,ಜು.25- ಮೈಸೂರಿನ ಮೂಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ-ಜೆಡಿಎಸ್‌ ಶಾಸಕರು ಕಳೆದ ರಾತ್ರಿ ಹಾಡು, ಭಜನೆ, ನೃತ್ಯ ಮಾಡಿದ್ದಾರೆ. ನಿನ್ನೆ ಸಂಜೆ ಆರಂಭಿಸಿದ ಧರಣಿಯನ್ನು ರಾತ್ರಿ ಕೂಡಾ ಮುಂದುವರೆಸಿದ್ದರು. ರಾತ್ರಿ ವೇಳೆ ಶಾಸಕರು ಹಾಡು, ನೃತ್ಯ, ಭಜನೆ ಮೂಲಕ ಸಮಯ ಕಳೆದಿದ್ದಾರೆ.

ವಿರೋಧಪಕ್ಷದ ಮೊಗಸಾಲೆಯಲ್ಲಿ ತಡರಾತ್ರಿ ಸುಮಾರು 1 ಗಂಟೆವರೆಗೂ ಹಾಡು ಹೇಳಿ ರಂಜಿಸುವುದು, ಭಜನೆ ಮಾಡುವುದು ಹಾಗೂ ಶಾಸಕ ಪ್ರಭು ಚೌವ್ಹಾಣ್‌ ಅವರು ಹಾಡು ಮತ್ತು ನೃತ್ಯ ಮಾಡುವ ಮೂಲಕ ಶಾಸಕರನ್ನು ರಂಜಿಸಿದ್ದಾರೆ.

ಹೊಸದಾಗಿ ಆಯ್ಕೆಯಾದ ಶಾಸಕರು ಉತ್ಸಾಹದಿಂದ ಮನರಂಜನೆಯಲ್ಲಿ ಪಾಲ್ಗೊಂಡಿದ್ದಾರೆ. ಗುರ್ಮೇ ಸುರೇಶ್‌ ಶೆಟ್ಟಿ ಯವರು ಹಾಡು ಹೇಳುವ ಮೂಲಕ ರಂಜಿಸಿದ್ದಾರೆ. ಇದೇ ರೀತಿ ಶಾಸಕರು ಒಬ್ಬರಾದ ಮೇಲೆ ಒಬ್ಬರು ಹಾಡು ಹೇಳುವುದು, ಭಜನೆ ಮಾಡುವುದು, ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ. ಭಜನೆ, ಹಾಡು ಹೇಳುವುದರಿಂದ ನಿದ್ರೆ ಮಾಡಲು ಯತ್ನಿಸಿದ ಶಾಸಕರಿಗೂ ಅಡಚಣೆಯಾಗಿದೆ. ಕೆಲ ಶಾಸಕರು ನಿದ್ರೆ ಮಾಡಲಾಗಲಿಲ್ಲ ಎಂದು ಹೇಳಿದ್ದಾರೆ.

ರಾತ್ರಿ ಊಟ, ಬೆಳಗಿನ ತಿಂಡಿಯನ್ನು ಮೊಗಸಾಲೆಯಲ್ಲಿ ಸೇವಿಸಿದ್ದಾರೆ. ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿ ವಾಕಿಂಗ್‌ ಮಾಡಿದ್ದಾರೆ. ಬಳಿಕ ಕೆಲವರು ಶಾಸಕರ ಭವನಕ್ಕೆ ಹೋಗಿ ತಮ್ಮ ತಮ್ಮ ಕೊಠಡಿಗಳಲ್ಲಿ ನಿತ್ಯಕರ್ಮಗಳನ್ನು ಮುಗಿಸಿ ಮರಳಿ ಧರಣಿಗೆ ಸೇರಿಕೊಂಡಿದ್ದಾರೆ.
ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಧರಣಿಯನ್ನ ಮುಂದುವರೆಸಿದ್ದಾರೆ.

RELATED ARTICLES

Latest News