Monday, December 30, 2024
Homeರಾಜ್ಯಅಧಿವೇಶನ ಆರಂಭವಾದರೂ ಬಿಜೆಪಿ-ಜೆಡಿಎಸ್‌‍ ಇನ್ನೂ 'ಸಮನ್ವಯ'ದ ಕೊರತೆ

ಅಧಿವೇಶನ ಆರಂಭವಾದರೂ ಬಿಜೆಪಿ-ಜೆಡಿಎಸ್‌‍ ಇನ್ನೂ ‘ಸಮನ್ವಯ’ದ ಕೊರತೆ

BJP-JDS still lack 'coordination' even after the session begins

ಬೆಳಗಾವಿ,ಡಿ.9-ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿದ್ದರೂ ಬಿಜೆಪಿ- ಜೆಡಿಎಸ್‌‍ ಸಮನ್ವಯ ದೋಸ್ತಿ ನಾಯಕರು ಸಮಿತಿ ಸಭೆ ನಡೆಸದೇ ಇರುವುದು ಅಚ್ಚರಿ ಮೂಡಿಸಿದೆ.

ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆಯಾಗಲಿರುವ ಈ ಅಧಿವೇಶನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.ಬಿಜೆಪಿ ಹಾಗೂ ಜೆಡಿಎಸ್‌‍ ನಡುವೆ ನಡೆಯ ಬೇಕಾಗಿದ್ದ ಸಮನ್ವಯ ಸಮಿತಿ ಸಭೆ ಈವರೆಗೂ ನಡೆಸಿಲ್ಲ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸುವ ಬಗ್ಗೆ ಎನ್ಡಿಎ ಮೈತ್ರಿಕೂಟ ಚರ್ಚೆ ನಡೆಸಿಲ್ಲ. ಸದನದಲ್ಲಿನ ಹೋರಾಟದ ರೂಪುರೇಷಗಳ ಬಗ್ಗೆಯೂ ಸಿದ್ದತೆ ನಡೆಸಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಸಮನ್ವಯ ಸಮಿತಿ ಸಭೆ ನಡೆಸುವ ಬಗ್ಗೆ ದೋಸ್ತಿ ನಾಯಕರು ಆಸಕ್ತಿ ತೋರಿಸಿಲ್ಲ.

ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಹೋರಾಡಲು ವಕ್ಫ್ ವಿವಾದ, ಮುಡಾ ಹಗರಣ, ಬಳ್ಳಾರಿ ಬಾಣಂತಿಯರ ಸಾವು, ಅಬಕಾರಿ ಅಕ್ರಮ ಆರೋಪ ಹೀಗೆ ಸಾಲು ಸಾಲು ವಿಚಾರಗಳಿವೆ ಆದರೆ, ಸರ್ಕಾರದ ವಿರುದ್ಧ ಹೋರಾಡಲು ಪ್ರತಿಪಕ್ಷಗಳಾದ ಮೈತ್ರಿ ಪಕ್ಷಗಳು ಸಮನ್ವಯ ಸಭೆ ನಡೆಸದಿರುವುದು ಆಶ್ಚರ್ಯ ಮೂಡಿಸಿದೆ.

ವಕ್‌್ಫ ವಂಚನೆ ಪ್ರಕರಣವನ್ನು ಮುಂದಿಟ್ಟು ಬಿಜೆಪಿಯು ಕಾಂಗ್ರೆಸ್‌‍ ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿದೆ. ವಕ್‌್ಫ ನೋಟಿಸ್‌‍ ಹಾಗೂ ಪಹಣಿಯಲ್ಲಿ ವವಕ್ಫ್ ಹೆಸರು ನೋಂದಣಿ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ನಡೆಸಿದೆ. ಇದರೊಂದಿಗೆ ಸಚಿವ ಜಮೀರ್‌ ಅಹಮದ್‌ ರಾಜೀನಾಮೆಗೂ ಮೈತ್ರಿ ಕೂಟ ಒತ್ತಾಯಿಸಲು ಸಜ್ಜಾಗಿದೆ.

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಗಳನ್ನು ಮುಂದಿಟ್ಟು ಸರ್ಕಾರದ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಲು ದೋಸ್ತಿಗಳು ಸಜ್ಜಾಗಿದ್ದಾರೆ. ಬಳ್ಳಾರಿ ಬಿಮ್ಸೌ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು, ಸರ್ಕಾರದ ವೈಫಲ್ಯ, ನಿರ್ಲಕ್ಷ್ಯದ ಮೂಲಕ ಸಚಿವ ದಿನೇಶ್‌ ಗುಂಡೂರಾವ್‌ ರಾಜೀನಾಮೆ ಹಾಗೂ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಲು ಪ್ರತಿಪಕ್ಷ ಮುಂದಾಗಿದೆ. ಉಳಿದಂತೆ ಅಬಕಾರಿ ಇಲಾಖೆಯಲ್ಲಿನ ವಸೂಲಿ ಆರೋಪ ಪ್ರಕರಣವನ್ನು ಸದನದಲ್ಲಿ ಪ್ರಸ್ತಾಪಿಸಿ ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಲು ನಿರ್ಧರಿಸಿದೆ.

ಮುಡಾ ನಿವೇಶನಪ್ರಕರಣ, ಇ.ಡಿ. ಲೋಕಾಯಕ್ತಕ್ಕೆ ಬರೆದ ಪತ್ರ, ಹೊಸ ಮುಡಾ ಅಕ್ರಮಗಳು ಬಯಲಾಗುತ್ತಿರುವುದನ್ನು ಉಲ್ಲೇಖಿಸಿ ಸಿಎಂ ಹಾಗೂ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲಾನ್‌ ರೂಪಿಸಿದೆ. ಇವುಗಳೊಂದಿಗೆ ರೇಷನ್‌ ಕಾರ್ಡ್‌ ರದ್ದು, ಬ್ರ್ಯಾಂಡ್‌ ಬೆಂಗಳೂರು, ಅಭಿವೃದ್ಧಿ ಶೂನ್ಯ, ಲಾ ಅಂಡ್ ಆರ್ಡರ್, ಭ್ರಷ್ಟಾಚಾರ, ಅನುದಾನ, ಉತ್ತರ ಕರ್ನಾಟಕ ಕಡೆಗಣನೆ, ಅಭಿವೃದ್ಧಿ ಯೋಜನೆಗಳ ಕುಂಠಿತ, ಅನುದಾನ ಸ್ಥಗಿತ ಸೇರಿ ಇನ್ನೂ ಅನೇಕ ಅಸ್ತ್ರಗಳಿಂದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ದೋಸ್ತಿಗಳು ಸಜ್ಜಾಗಿದ್ದಾರೆ. ಉಭಯ ಸದನಗಳಲ್ಲೂ ಒಗ್ಗಟ್ಟಿನ ಹೋರಾಟದ ಮೂಲಕ ಸರ್ಕಾರದ ಮೇಲೆ ಮುಗಿಬೀಳಲು ನಿರ್ಧರಿಸಿವೆ.

ಪ್ರತಿತಂತ್ರ:ಇತ್ತ ಕಾಂಗ್ರೆಸ್‌‍ ಸರ್ಕಾರವೂ ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ, ಬಲವಾದ ಕೌಂಟರ್‌ ಕೊಡಲು ಸಿದ್ಧವಾಗಿದೆ. ದೋಸ್ತಿಗಳ ಟೀಕಾಸ್ತ್ರಗಳಿಗೆ ಪ್ರಬಲವಾಗಿ ಪ್ರತ್ಯಾಸ್ತ್ರವನ್ನು ಸಿದ್ಧಗೊಳಿಸಿದೆ. ಈಗಾಗಲೇ ಮೂರೂ ಕ್ಷೇತ್ರಗಳ ಉಪಸಮರದಲ್ಲಿ ಗೆದ್ದು ಬೀಗುತ್ತಿರುವ ಸರ್ಕಾರ ದೋಸ್ತಿ ಪಕ್ಷಗಳ ಜಂಟಿ ಸದನ ಹೋರಾಟವನ್ನು ವಿಫಲಗೊಳಿಸಲು ತಯಾರಿ ನಡೆಸಿದೆ. ದೋಸ್ತಿಗಳ ವಾಗ್ದಾಳಿ, ಆರೋಪಕ್ಕೆ ಬಲವಾಗಿ ನಿಂತು ಪ್ರತ್ಯುತ್ತರ ನೀಡಲು ಸಚಿವರುಗಳಿಗೆ ಸೂಚನೆ ನೀಡಲಾಗಿದೆ. ಇತ್ತ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ, ಒಡಕನ್ನೇ ಬಂಡವಾಳವಾಗಿಸಿ ಪ್ರತಿಪಕ್ಷದ ಕಾಲೆಳೆಯಲು ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷ ಸಜ್ಜಾಗಿದೆ.

ಸರ್ಕಾರ ವಿಪಕ್ಷಗಳ ಹೋರಾಟಕ್ಕೆ ಕೌಂಟರ್‌ ಆಗಿ ಕೋವಿಡ್‌ ಮೇಲಿನ ಮೈಕೆಲ್‌ ಡಿಕುನ್ಹಾ ವರದಿಯನ್ನು ಮುಂದಿಡಲಿದೆ. ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಮೇಲಿನ ಅವ್‌ಯವಹಾರ ಆರೋಪವನ್ನು ಪ್ರಸ್ತಾಪಿಸಿ ಬಿಜೆಪಿ ಭ್ರಷ್ಟಾಚಾರ ಆರೋಪಕ್ಕೆ ತಿರುಗೇಟು ನೀಡಲಿದೆ. ಇನ್ನು ವವಕ್ಫ್ ವಿಚಾರವಾಗಿ ಬಿಜೆಪಿ ಸರ್ಕಾರದ ಅವಧಿಯ ಅತೀ ಹೆಚ್ಚು ನೋಟಿಸ್‌‍ ನೀಡಿರುವುದನ್ನೇ ಉಲ್ಲೇಖಿಸಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಯತ್ನ ಮಾಡಲಿದೆ.

ಇದರ ಜೊತೆಗೆ ಯಡಿಯೂರಪ್ಪ ಹಾಗೂ ಬಿ. ವೈ. ವಿಜಯೇಂದ್ರ ಮೇಲಿನ ಬಿಡಿಎ ಹಗರಣ ಆರೋಪ, ಗಣಿ ಅಕ್ರಮ, ಕೇಂದ್ರದ ಅನುದಾನ ತಾರತಮ್ಯ, ಮುನಿರತ್ನ ಪ್ರಕರಣವನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಸರ್ಕಾರವೂ ಸರ್ವ ಸಿದ್ಧತೆ ನಡೆಸಿದೆ. ಪ್ರತಿಪಕ್ಷಗಳು ಪ್ರಸ್ತಾಪಿಸುವ ಆರೋಪಗಳ ಬಗ್ಗೆ ಯಾರೆಲ್ಲ ಸಚಿವರು ಉತ್ತರಿಸಬೇಕು. ಅದಕ್ಕೆ ಯಾರೆಲ್ಲ ಶಾಸಕರು ಸಾಥ್‌ ನೀಡಬೇಕು ಎಂಬ ಹೊಣೆಗಾರಿಕೆಯನ್ನೂ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Latest News