Wednesday, January 8, 2025
Homeರಾಜ್ಯತಿಪಟೂರು ಕಾಂಗ್ರೆಸ್ ಶಾಸಕರ ಕುರಿತು ಸಿಎಂಗೆ ಚಾಡಿ ಹೇಳಿದ ಬಿಜೆಪಿ ನಾಯಕ

ತಿಪಟೂರು ಕಾಂಗ್ರೆಸ್ ಶಾಸಕರ ಕುರಿತು ಸಿಎಂಗೆ ಚಾಡಿ ಹೇಳಿದ ಬಿಜೆಪಿ ನಾಯಕ

BJP leader slanders CM about Tiptur Congress MLAs

ಬೆಂಗಳೂರು,ಜ.6- ತಿಪಟೂರಿನಲ್ಲಿ ಕಾಂಗ್ರೆಸ್ ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮನಸ್ಸಿನಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಕ್ಷೇತ್ರದ ಪ್ರಮುಖ ಮುಖಂಡರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಛಾಡಿ ಹೇಳಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಲೋಕೇಶ್ವರ್ ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡುವ ವೇಳೆ ತಿಪಟೂರಿನ ಶಾಸಕ ಷಡಾಕ್ಷರಿ ವಿರುದ್ಧ ಛಾಡಿ ಹೇಳಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಯತ್ನಗಳ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೌದಾ! ಎಂದು ಪ್ರತಿಕ್ರಿಯಿಸಿದ್ದು, ತಕ್ಷಣವೇ ಬೇರೆ ವಿಚಾರಗಳತ್ತ ಗಮನ ಹರಿಸಿದ್ದಾರೆ.

ಜನವರಿ 13 ರಿಂದ 19 ರವರೆಗೆ ದೆಹಲಿಯಲ್ಲಿ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಭಾರತೀಯ ಖೋ ಖೋ ಒಕ್ಕೂಟದ ಉಪಾಧ್ಯಕ್ಷರು ಹಾಗೂ ರಾಜ್ಯ ಸಂಘಟನೆಯ ಅಧ್ಯಕ್ಷರಾಗಿರುವ ಲೋಕೇಶ್ ವರ್ಲ್‌್ಡಕಪ್ ಕ್ರೀಡಾಕೂಟ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನಿಸಲು ಆಗಮಿಸಿದ್ದರು.
ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ಸಿಕ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನೀ ರಜನೀಶ್ ಅವರಿಗೆ ಆಹ್ವಾನ ಪತ್ರವನ್ನು ಲೋಕೇಶ್ವರ್ ನೀಡಿದರು.

ಈ ವೇಳೆ ಸಿದ್ದರಾಮಯ್ಯನವರ ಕಿವಿಯಲ್ಲಿ ಪಿಸುಗುಟ್ಟಿದ ಲೋಕೇಶ್ವರ್ ಅವರು, ಒಳ್ಳೆಯ ಶಾಸಕರನ್ನು ಗೆಲ್ಲಿಸಿಕೊಂಡು ಹಿಂಸೆ ಅನುಭವಿಸುವಂತಾಗಿದೆ, ನಾವು ಹೈರಾಣಾಗಿದ್ದೇವೆ, ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಏನನ್ನೂ ಕೊಡುತ್ತಿಲ್ಲ-ಮಾಡುತ್ತಿಲ್ಲ, ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದೇ ತಿರುಗಾಡುತ್ತಿದ್ದಾರೆ.

ದೇವರಾಣೆ ಅವರ ಮನಸ್ಸಿನಲ್ಲಿರುವುದೇ ಅದು. ಈಗಾಗಲೇ ಶಾಸಕರು ಆಚೆ ಹೋಗಿ ಆಗಿದೆ ಎಂದು ಹೇಳಿದ್ದಾರೆ.ಇದಕ್ಕೆ ಹೌದಾ! ಎಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಹೆಚ್ಚು ಚರ್ಚಿಸದೆ
ಬೇರೆ ವಿಚಾರಗಳತ್ತ ಗಮನ ಹರಿಸಿದ್ದಾರೆ.

RELATED ARTICLES

Latest News