Sunday, September 8, 2024
Homeರಾಜ್ಯ"ಬೆಲೆ ಏರಿಕೆ ಗ್ಯಾರಂಟಿ" ಸರ್ಕಾರದ ವಿರುದ್ಧ ಪ್ರೀಡಂಪಾರ್ಕ್‌ನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ

“ಬೆಲೆ ಏರಿಕೆ ಗ್ಯಾರಂಟಿ” ಸರ್ಕಾರದ ವಿರುದ್ಧ ಪ್ರೀಡಂಪಾರ್ಕ್‌ನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ

ಬೆಂಗಳೂರು,ಜೂ.29- ಹಾಲಿನ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಇಂದು ನಗರದ ಪ್ರೀಡಂಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದುರ.ಬಿಜೆಪಿ ರೈತಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್‌‍.ನಡಹಳ್ಳಿ, ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿದ್ದರು.

ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರು ಹಾಲಿನ ಪಾಕೆಟ್‌ ಪ್ರದರ್ಶಿಸಿದ್ದಲ್ಲದೆ ಹಸು ಹಿಡಿದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾನಿರತರು ಹಾಲಿನ ದರ, ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಬರ ಭಾಗ್ಯ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್‌‍.ನಡಹಳ್ಳಿ ಅವರು, ಲೀಟರ್‌ಗೆ 50 ಎಮ್‌ಎಲ್‌ ಹೆಚ್ಚಿಗೆ ಕೊಡಿ ಎಂದು ಯಾರದರೂ ಒತ್ತಾಯ ಮಾಡಿದ್ದರಾ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮರ್ಥನೆ ಮಾಡುವಂತಹ ಮೊಂಡು ವಾದ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2008ರಲ್ಲಿ ಯಡಿಯೂರಪ್ಪ ಹಾಲು ಉತ್ಪಾದಕ ರೈತರಿಗೆ ಪ್ರೊತ್ಸಾಹ ಧನ ಕೊಟ್ಟಿದ್ದರು. ಈ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ. ರೈತರಿಗೆ 5 ರೂ. ನೇರವಾಗಿ ಖಾತೆಗೆ ಹಾಕಬೇಕು. ನಮ ಸರ್ಕಾರ ಬಂದರೆ 7 ರೂ. ಕೊಡುತ್ತೇವೆ ಅಂದಿದ್ದರು. ಆದರೆ ಈ ಸರ್ಕಾರ 5 ರೂ. ಸಹ ಕೊಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಅವರ ಖಾತೆಗಳಿಗೆ ಹಾಕಬೇಕು. ಬೆಲೆ ಹೆಚ್ಚಿಸುವ ಬದಲು ಪ್ರೋತ್ಸಾಹ ಧನ ಕೊಡಬೇಕು ಎಂದು ಅವರು ಆಗ್ರಹಿಸಿದರು. ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಸರ್ಕಾರ ತನ್ನ ಉದ್ದಟತನ ತೋರಿಸುತ್ತಿದೆ. ಹಾಲಿನ ಬೆಲೆ ಏರಿಸಿ ರೈತರಿಗೆ ಬೆಂಬಲ ನೀಡದೆ ಅವರ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ರೈತರಿಗೆ ಬರೆ ಹಾಕುವ ಸರ್ಕಾರದ ನೀತಿ ನಿರ್ಧಾರಗಳನ್ನು ಸರ್ಕಾರ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಬೀಜ ಗೊಬ್ಬರದ ಬೆಲೆ ಗಗನಕ್ಕೇರಿದೆ. ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ಹಾಲಿನಬೆಲೆ ಏರಿಸಿ ಗ್ರಾಹಕರಿಗೆ ಬರೆ ಹಾಕಿದೆ. ಡೀಸೆಲ್‌ ಪೆಟ್ರೋಲ್‌ ಬೆಲೆ ಜಾಸ್ತಿಯಾಗಿದೆ. ರೈತ, ಮಹಿಳಾ,ಯುವಕರ ವಿರೋಧಿ ಸರ್ಕಾರ ಇದು ಸಿಎಂ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

RELATED ARTICLES

Latest News