Friday, November 22, 2024
Homeರಾಜ್ಯಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ಹೋರಾಟ

ಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ಹೋರಾಟ

ಬೆಂಗಳೂರು, ಮೇ 29- ಕರ್ನಾಟಕ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧೀಕ್ಷಕ ಚಂದ್ರಶೇಖರನ್‌ ಅನುಮಾನಸ್ಪದ ಆತಹತ್ಯೆ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗುತ್ತಿದೆ.

ಆತಹತ್ಯೆ ಮಾಡಿಕೊಳ್ಳುವ ಮುನ್ನ ಚಂದ್ರಶೇಖರನ್‌ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ನನಗೆ ಸಾಕಷ್ಟು ಒತ್ತಡ ಮತ್ತು ಬೆದರಿಕೆ ಇತ್ತು ಎಂದು ಉಲ್ಲೇಖ ಮಾಡಿರುವುದನ್ನು ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಹಿಂದುಳಿದ ವರ್ಗಗಳ ಇಲಾಖೆಯ ಸಚಿವರೂ ಆಗಿರುವ ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂಬ ಹೋರಾಟಕ್ಕೆ ಅಣಿಯಾಗುತ್ತಿದೆ.

ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದೇವೆ ಎಂದು ಸಚಿವರು ಹೇಳಿಕೊಳ್ಳುತ್ತಿದ್ದಾರೆ. ಈ ತನಿಖಾ ಸಂಸ್ಥೆಯು ಸರ್ಕಾರದ ಅಡಿಯಲ್ಲೇ ಇರುವ ಕಾರಣ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಒಂದು ವೇಳೆ ಸಚಿವರ ಪಾತ್ರ ಇರುವುದು ಗೊತ್ತಾದರೆ ಮುಜುಗರದಿಂದ ತಪ್ಪಿಸಿಕೊಳ್ಳಲು ಸರ್ಕಾರ ಸಚಿವರ ರಕ್ಷಣೆಗೆ ನಿಲ್ಲಬಹುದು. ಹೀಗಾಗಿ ನಾಗೇಂದ್ರ ಮೊದಲು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬುದು ಬಿಜೆಪಿಯ ಒತ್ತಾಸೆಯಾಗಿದೆ.

ಎರಡು ದಿನಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿರುವ ಬಿಜೆಪಿ ನಂತರ ಹಂತಹಂತವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಿದೆ.ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಕೆ.ಎಸ್‌‍.ಈಶ್ವರಪ್ಪ ಅವರ ಪ್ರಕರಣದಲ್ಲಿ ಅಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್‌‍ ರಾಜೀನಾಮೆ ನೀಡುವವರೆಗೂ ಬಿಟ್ಟಿರಲಿಲ್ಲ.

ಇದೀಗ ಈ ಅಸ್ತ್ರವನ್ನೇ ಶಸಾ್ತ್ರಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ, ನಾಗೇಂದ್ರ ರಾಜೀನಾಮೆ ನೀಡಲೇಬೇಕೆಂದು ಹೋರಾಟಕ್ಕೆ ಆಗ್ರಹಿಸಿದೆ.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಹೋರಾಟಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲಾ, ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಹೋರಾಟವನ್ನು ಹಂತಹಂತವಾಗಿ ನಡೆಸಬೇಕೆಂದು ಘಟಕಗಳಿಗೆ ಸೂಚನೆ ನೀಡಲಾಗಿದೆ.

ಚಂದ್ರಶೇಖರನ್‌ ಆತಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಪ್ರಕರಣದ ತನಿಖೆ ಸಿಐಡಿಗೆ ನೀಡಿದರೂ, ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕರ ಆಗ್ರಹವಾಗಿದೆ.

ವಾಲೀಕಿ ನಿಗಮದ ಅಧಿಕಾರಿ ಆತಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಆಕೋಶ ವ್ಯಕ್ತಪಡಿಸಿದ್ದರು. ಚಂದ್ರಶೇಖರನ್‌ ಆತಹತ್ಯೆ ಪ್ರಕರಣ ಒಂದು ಸ್ಯಾಂಪಲ್‌ ಅಷ್ಟೇ. ಇಂತಹ ನೂರಾರು ಅಧಿಕಾರಿಗಳು ಒತ್ತಡದಲ್ಲಿದ್ದಾರೆ. ಪಾರದರ್ಶಕ ಆಡಳಿತ ಅಂದಿದ್ದು ಸಿದ್ದರಾಮಯ್ಯ, ಇದೇನಾ? ಅಧಿಕಾರಿಯಿಂದಲೇ ಚೆಕ್‌ ಬರೆಸಿ ಬಲಿ ಕೊಟ್ಟಿದ್ದಾರೆ ಎಂದರು.

ಅಧಿಕಾರಿಗಳು ಇಂಥ ಕೆಲಸ ಮಾಡ್ಕೋಬೇಡಿ, ಆತಹತ್ಯೆ ಕೆಲಸಕ್ಕೆ ಮುಂದಾಗಬೇಡಿ. ಅಧಿಕಾರಿಗಳ ಪರ ಬಿಜೆಪಿ ಇದೆ. ಗೂಂಡಾಗಳು ಬೀದಿಗೆ ಬಂದಿದ್ದಾರೆ. ಅಧಿಕಾರಿ ಆತಹತ್ಯೆಗೆ ಸಿಎಂ ಅವರೇ ನೇರ ಜವಾಬ್ದಾರರು ಹಾಗೂ ಇಲಾಖೆ ಸಚಿವರು ಜವಾಬ್ದಾರರು. ಪ್ರಕರಣದ ತನಿಖೆ ಸಿಬಿಐಗೆ ವಹಿಸಲಿ, ಆಗ ಸತ್ಯ ಹೊರಗೆ ಬರುತ್ತೆ ಎಂದು ಆಗ್ರಹಿಸಿದ್ದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್‌‍.ಈಶ್ವರಪ್ಪ ರಾಜೀನಾಮೆ ಕೊಡಿಸುವಲ್ಲಿ ಕಾಂಗ್ರೆಸ್‌‍ ಯಶಸ್ವಿ ಆಗಿತ್ತು. ವಿಧಾನಸೌಧದಲ್ಲಿ ಕಾಂಗ್ರೆಸ್‌‍ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮಿಕೊಂಡಿತ್ತು. ಕಾಂಗ್ರೆಸ್‌‍ ಪ್ರತಿಭಟನೆಗೆ ಮಣಿದು ಈಶ್ವರಪ್ಪ ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾಗಿ ಬಂತು. ಇದೀಗ ಇದೇ ಮಾದರಿಯಲ್ಲಿ ಬಿಜೆಪಿ ಹೋರಾಟ ರೂಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

RELATED ARTICLES

Latest News