Friday, November 22, 2024
Homeರಾಷ್ಟ್ರೀಯ | NationalBJP, RSSನಿಂದ ಸಂವಿಧಾನ ನಾಶಕ್ಕೆ ಯತ್ನ : ಮಲ್ಲಿಕಾರ್ಜುನ ಖರ್ಗೆ

BJP, RSSನಿಂದ ಸಂವಿಧಾನ ನಾಶಕ್ಕೆ ಯತ್ನ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜ.26- ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಂಘಟನೆಗಳು ಸಂವಿಧಾನವನ್ನು ನಾಶ ಮಾಡಲು ಯತ್ನಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು. ಕೆಪಿಸಿಸಿ ಕಚೇರಿಯಲ್ಲಿಂದು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಕೆಲವರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಾ, ತಮ್ಮದೇ ಮಹಾನ್ ಸಾಧನೆ, ತಮ್ಮಿಂದಲೇ ಎಲ್ಲಾ ಎಂದು ಹೇಳಿಕೊಳ್ಳುತ್ತಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ, ಆರ್‍ಎಸ್‍ಎಸ್ ಸಂವಿಧಾನವನ್ನು ನಾಶ ಮಾಡಲು ಸಂಚು ರೂಪಿಸಿದೆ. ಸ್ವಾತಂತ್ರ್ಯ, ಸಂವಿಧಾನ ಉಳಿದರೆ ಮುಂದಿನ ಪಿಳಿಗೆಗೆ ಅವಕಾಶ ಇರುತ್ತದೆ. ಇಲ್ಲವಾದರೆ ಯಾರಿಗೂ ಅವಕಾಶ ಸಿಗುವುದಿಲ್ಲ. ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ಸಿಗರು ಪಣ ತೊಡಬೇಕಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟದ ಮೂಲಕ ಗೆಲ್ಲಬೇಕು ಎಂದು ಕರೆ ನೀಡಿದರು.

ಸಂವಿಧಾನವನ್ನು ಒಪ್ಪಿಸುವಾಗ ಅಂಬೇಡ್ಕರ್ ಅವರು ಸಂವಿಧಾನ ಒಳ್ಳೆಯದಾಗಿ ಅನುಷ್ಠಾನಕ್ಕೆ ತರಬೇಕು, ಅದನ್ನು ಜಾರಿ ಮಾಡುವವರು ಒಳ್ಳೆಯವರಾಗಿದ್ದರೆ ಮಾತ್ರ ಜನರಿಗೆ ಒಳ್ಳೆಯದಾಗುತ್ತದೆ. ಇಲ್ಲವಾದರೆ ಕೆಟ್ಟದಾಗುತ್ತದೆ ಎಂದು ಹೇಳಿದ್ದರು. 1949ರಲ್ಲಿ ಅಂಬೇಡ್ಕರ್ ಹೇಳಿದ ಮಾತು ಇಂದು ನಿಜವಾಗುತ್ತಿದೆ. ದೇಶದಲ್ಲಿಂದು ಸಂವಿಧಾನ ಜಾರಿ ಮಾಡುವ ಜನ ಸರಿ ಇಲ್ಲದಿದ್ದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ದೂರಿದರು.

ದೇಶದಲ್ಲಿ ಸಂವೃದ್ಧಿ ಬಂದಿದೆ ಎಂದು ಬಿಂಬಿಸಲಾಗುತ್ತಿದೆ, ಎಲ್ಲಿದೆ ಸಂವೃದ್ಧಿ. ಸ್ವಾತಂತ್ರ್ಯ ಬಂದಾಗಿನಿಂದ 2014ರವರೆಗೆ ದೇಶದ ಒಟ್ಟು ಸಾಲ 55 ಲಕ್ಷ ಕೋಟಿ ಮಾತ್ರವಿತ್ತು. ಕಳೆದ 10 ವರ್ಷದಲ್ಲಿ ಅದು ಏಕಾಏಕಿ ದುಪ್ಪಟ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದ ಇಂದಿನ ಸಾಲ 1.50 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನಕ್ಕೆ ಧಕ್ಕೆಯಿದೆ. ನಿರುದ್ಯೋಗ ಹೆಚ್ಚಳದಿಂದ ಯುವ ಸಮುದಾಯಕ್ಕೆ ಧಕ್ಕೆಯಾಗಲಿದೆ. ಹಣದುಬ್ಬರದಿಂದ ಜನ ಸಾಮಾನ್ಯರಿಗೆ ಸಂಕಷ್ಟಗಳಿವೆ ಎಂದು ವಿವರಿಸಿದರು.

ಪಕ್ಷ ನಿಷ್ಠೆ ಪರಿಶೀಲಿಸಿ:
ಹೊರಗಿನವರನ್ನು ಕಾಂಗ್ರೆಸ್‍ಗೆ ಕರೆತಂದು ಪಕ್ಷವನ್ನು ಬಲ ಪಡಿಸುವುದು ಅಗತ್ಯ. ಆದರೆ ಈ ವೇಳೆ ತತ್ವ-ಸಿದ್ಧಾಂತಗಳ ನಿಷ್ಠೆ ಬಗ್ಗೆಪರಿಶೀಲನೆ ಅಗತ್ಯವಿದೆ. ಇಂದು ಬಂದು ನಾಳೆ ಹೋದರು ಎಂಬಂತವರಿಗೆ ಅವಕಾಶ ನೀಡಬಾರದು. ಇದು ಪಕ್ಷದ ಸಿದ್ಧಾಂತಕ್ಕೆ ಹಾನಿ ಮಾಡಲಿದೆ ಎಂದು ಜಗದೀಶ್ ಶೆಟ್ಟರ್ ಪಕ್ಷಾಂತರ ಕುರಿತು ಪರೋಕ್ಷ ಅಸಮಧಾನ ವ್ಯಕ್ತಪಡಿಸಿದರು.

ಜ್ಞಾನವಾಪಿ ಮಂದಿರಕ್ಕೂ ಇದೆ ಕರುನಾಡ ನಂಟು

ಗ್ರಾಮೀಣಭಾಗದಲ್ಲಿ ಸಣ್ಣ ಪ್ರಾಣಿ ಖರೀದಿ ಮಾಡುವಾಗಲೂ ತೂಕ, ಅಳತೆ ನೋಡಿ, ಹಲವು ಬಾರಿ ಯೋಜಿಸಿ ನಂತರ ಖರೀದಿ ಮಾಡುತ್ತಾರೆ. ಅದೇ ರೀತಿ ಅನ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೂ ಸರಿಯಾಗಿ ಯೋಚಿಸಬೇಕು. ಕಾಂಗ್ರೆಸ್ ಸೇರುವವರ ಗುಣ ಹಿಂದೆ ಹೇಗಿತ್ತು, ಯಾವ ಪರಿಸ್ಥಿತಿಯಲ್ಲಿದ್ದರು, ಯಾವ ತತ್ವ-ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದ್ದರು ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸಿದ್ಧಾಂತ ಹಾಗೂ ತತ್ವದ ತಳಹದಿಯ ಮೇಲೆ ನಿಂತಿದೆ. ನಮ್ಮ ನಾಯಕರು ದೇಶದ ಐಕ್ಯತೆ ಹಾಗೂ ಸಿದ್ಧಾಂತಕ್ಕಾಗಿಯೇ ತ್ಯಾಗ ಮಾಡಿದ್ದಾರೆ. ಇಂದಿರಾ ಗಾಂ 32 ಗುಂಡುಗಳನ್ನು ತಿಂದು ದೇಶದ ಐಕ್ಯತೆ ಪ್ರಾಣ ಬಿಟ್ಟರು. ರಾಜೀವ್ ಗಾಂಧಿ ತಮ್ಮ ದೇಹ ಛೀದ್ರಗೊಂಡದರು ದೇಶ ಉಳಿಸುತ್ತೇನೆ ಎಂದು ಪಣತೊಟ್ಟಿದ್ದರು ಎಂದು ಹೇಳಿದರು.

ನಮ್ಮ ಪಕ್ಷ ಬಡವರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಹೆಣ್ಣುಮಕ್ಕಳು, ಎಸ್‍ಸ್ಸಿಎಸ್ಟಿಗಳ ಬಗ್ಗೆ ಕಾಳಜಿ ಹೊಂದಿದೆ. ಸಂವಿಧಾನದೊಂದಿಗೆ ಹೆಣ್ಣುಮಕ್ಕಳಿಗೆ ಸಂವಿಧಾನದೊಂದಿಗೆ ಮತದಾನದ ಹಕ್ಕು ನೀಡಲಾಯಿತು. ಮುಂದುವರೆದ ದೇಶದಲ್ಲೇ ಮಹಿಳೆಯರಿಗೆ ಮತದಾನದ ಹಕ್ಕಿರಲಿಲ್ಲ. ಅಂತಹ ಕಾಲದಲ್ಲಿ ಅಂಬೇಡ್ಕರ್ ಮತ್ತು ನೆಹರು ಅವರು ಹೆಣ್ಣು ಮಕ್ಕಳ ಸಮಾನತೆಗೆ ವಿಶ್ವದಲ್ಲೇ ಮೊಟ್ಟಮೊದಲಿಗೆ ಆದ್ಯತೆ ನೀಡಿದರು ಎಂದರು.

ಶ್ರೀಮಂತರು, ಪ್ರಭಾವಿಗಳು, ಬಡವರು, ಕಾರ್ಮಿಕರು ಎಂಬ ಬೇಧವಿಲ್ಲದೆ ಸಂವಿಧಾಣ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕು ನೀಡಿದೆ. ಟಾಟಾ-ಬಿರ್ಲಾ, ಅಂಬಾನಿ-ಅದಾನಿಯವರ ಮತಕ್ಕೆ ಇರುವಷ್ಟೆ ಮೌಲ್ಯ, ಜನಸಾಮಾನ್ಯರ ಮತಕ್ಕೂ ಇದೆ. ಬಹಳಷ್ಟು ಮಂದಿಗೆ ಇತಿಹಾಸವೇ ಗೊತ್ತಿಲ್ಲ. ಅನಗತ್ಯವಾಗಿ ಟೀಕೆ ಮಾಡುತ್ತಾರೆ. ಯುವಕರಿಗೂ ಕೂಡ ಯಾರು ಸ್ವಾತಂತ್ರ್ಯ ತಂದು ಕೊಟ್ಟರು, ಹೋರಾಟ ಮಾಡಿದ್ಯಾರು ಎಂಬ ಮಾಹಿತಿ ತಿಳಿದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬಂಧನಿ ಪೇಟ ಧರಿಸಿ ಗಮನ ಸೆಳೆದ ಮೋದಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷರು ದೆಹಲಿಯ ಕೇಂದ್ರ ಕಚೇರಿ ಬಿಟ್ಟು ಬೆಂಗಳೂರಿಗೆ ಬಂದು ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್‍ನ ಶಕ್ತಿ ದೇಶದ ಶಕ್ತಿ. ದೇಶದ ಐಕ್ಯತೆ, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ತ್ಯಾಗದ ಹೋರಾಟಕ್ಕೆ ನಾವೆಲ್ಲಾ ಸಿದ್ಧರಾಗೋಣ ಎಂದು ಕರೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾಯಾಧ್ಯಕ್ಷರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News