ಬೆಂಗಳೂರು,ಏ.6- ರಾಜ್ಯ ಸರ್ಕಾರದ ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಕುಸಿತ, ಹೆಚ್ಚುತ್ತಿ ರುವ ದೌರ್ಜನ್ಯ ಪ್ರಕರಣ ಸೇರಿದಂತೆ ಆಡಳಿತ ವೈಫಲ್ಯವನ್ನು ಖಂಡಿಸಿ ಕಾಂಗ್ರೆಸ್ ವಿರುದ್ಧ ನಾಳೆಯಿಂದ ಜನಾಕ್ರೋಶ ಯಾತ್ರೆಗೆ ಚಾಲನೆ ದೊರಕಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಾಡದೇವತೆ ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನದಿಂದ ಹೋರಾಟವನ್ನು ಪ್ರಾರಂಭಿಸಲಾಗುವುದು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಹಮಿಕೊಂಡಿದ್ದ ಬಿಜೆಪಿಯ 45ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ನಾವು ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವವರೆಗೂ ಸುಮನಿರುವುದಿಲ್ಲ ಎಂದು ಅವರು ಗುಡುಗಿದರು.
ಪಕ್ಷದ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತಹತ್ಯೆ ಮಾಡಿಕೊಂಡಿಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ ಪ್ರಕರಣ. ಸರ್ಕಾರ ತಿಪ್ಪೇ ಸಾರುವ ಕೆಲಸ ಮಾಡುತ್ತಿದೆ. ಕೂಡಲೇ ತಪ್ಪಿತಸ್ಥರನ್ನು ಎಫ್‌ಐಆರ್‌ನಲ್ಲಿ ಸೇರ್ಪಡಿಸಬೇಕು. ಮುಕ್ತ ಮತ್ತು ನ್ಯಾಯಸಮತ ತನಿಖೆ ನಡೆಯಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರದ ಮದ ಏರಿ, ಪಿತ್ತ ನೆತ್ತಿಗೇರಿದರೆ ಏನಾಗಬಹುದು ಎಂಬುದನ್ನು ಮುಖ್ಯಮಂತ್ರಿಗಳ ಸಲಹೆಗಾರರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಎಫ್‌ಐಆರ್‌ನಲ್ಲಿ ಅವರ ಹೆಸರು ಸೇರ್ಪಡೆಯಾದರೆ ಕಾನೂನಿನ ಸಂಕಷ್ಟ ಎದುರಾಗಬಹುದು ಎಂಬ ಕಾರಣಕ್ಕಾಗಿಯೇ ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಕಾನೂನಾತವಾಗಿ ಹೋರಾಟ ಮಾಡುತ್ತೇವೆ. ಪ್ರಕರಣವನ್ನು ಸಿಬಿಐಗೆ ವಹಿಸುವವರೆಗೂ ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಿನಯ್ ಸೋಮಯ್ಯ ಪ್ರಕರಣದಲ್ಲಿ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು. ಅಧಿಕಾರದ ದರ್ಪದಿಂದ ಕಾಂಗ್ರೆಸ್‌ನವರು ಹೇಳಿಕೆ ಕೊಡುತ್ತಿದ್ದಾರೆ. ಇದರ ಹಿಂದೆ ಯಾರೆಲ್ಲ ದುಷ್ಟ ಶಕ್ತಿಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಕಾನೂನು ಹೋರಾಟ ಮಾಡುತ್ತೇವೆ. ಇಂದು ಕಾನೂನು ತಜ್ಞರ ಜತೆ ಮುಂದಿನ ಹೋರಾಟ ಬಗ್ಗೆ ಚರ್ಚೆಮಾಡುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರ್ಚಿ ಅಲುಗಾಡುತ್ತದೆ ಅನ್ನೋವಾಗ ಅವರಿಗೆ ಒಳ ಮೀಸಲಾತಿ ನೆನಪಿಗೆ ಬರುತ್ತದೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಾಗ ಕಾಂಗ್ರೆಸ್‌ನವರಿಗೆ ಕೋವಿಡ್‌ನಂತಹ ವರದಿಗಳು ನೆನಪಿಗೆ ಬರುತ್ತವೆ. ಸರ್ಕಾರದ ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.
ನಾನು ಯಡಿಯೂರಪ್ಪ ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಬಿಎಸ್‌ವೈ ಮಗ ಎನ್ನುವುದು ನನಗೆ ಹೆಮೆಯ ವಿಚಾರ. ಅದಕ್ಕಿಂತಲೂ ಇಷ್ಟು ದೊಡ್ಡ ಪಕ್ಷದ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂಬ ಹೆಮೆಯಿದೆ ಎಂದು ನುಡಿದರು.
ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಸಾಯಿಸಿ ರಾಜಕಾರಣ ಮಾಡುವುದು ಕಾಂಗ್ರೆಸ್ ನೀತಿ. ಸಂತೋಷ್ ಪಾಟೀಲ್, ರೋಹಿತ್ ವೇಮುಲು ಸತ್ತಾಗ ರಾಜಕಾರಣ ಮಾಡಿದ್ದರಲ್ಲವೇ? ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದರೂ ಇಂದಿಗೂ ಆರೋಪ ಮಾಡುತ್ತಿದ್ದಾರೆ. ಇದು ಯಾವ ನೀತಿ? ಎಂದು ಪ್ರಶ್ನಿಸಿದರು.
ವಿನಯ್ ಸೋಮಯ್ಯ ಡೆತ್‌ನೋಟ್ ಬರೆದಿದ್ದು ಸುಳ್ಳಾ? ಬಿಜೆಪಿ ಸರ್ಕಾರ ಇದ್ದು ಬಿಜೆಪಿ ಶಾಸಕನ ಹೆಸರು ಬರೆದು ಇಟ್ಟು ಸತ್ತಿದ್ದರೆ ಆಕಾಶ ಭೂಮಿ ಒಂದು ಮಾಡುತ್ತಾರೆ? ಸುಳ್ಳು ದೂರು ಕೊಟ್ಟು ನನ್ನ ಅರೆಸ್ಟ್ ಮಾಡಿಸಿದರು. ಕಾಂಗ್ರೆಸ್‌ನವರು ಎಷ್ಟು ದಿನ ಸೊಕ್ಕಿನ ರಾಜಕೀಯ ಮಾಡುತ್ತೀರಿ ಎಂದು ಗುಡುಗಿದರು.
ಡಿ.ಕೆ.ರವಿ, ಗಣಪತಿ ಆತಹತ್ಯೆ ಪ್ರಕರಣದಲ್ಲಿ ಬಚಾವ್ ಆಗಿರಬಹುದು. ಕರ್ಮ ನಿಮನ್ನು ಕಾಡೇ ಕಾಡುತ್ತದೆ. ಅವರ ಪಕ್ಷ ಮಾಡಿದರೆ ಎಲ್ಲದೂ ಮಾಫಿ. ಇವರು ಮಾಡಿದ್ಲೆಲ್ಲ ಸರಿ ಎಂದು ತರಾಟೆಗೆ ತೆಗೆದುಕೊಂಡರು.
ಕೋವಿಡ್ ಅಕ್ರಮದ ವರದಿ ವಿಚಾರವಾಗಿ ವಾಗ್ದಾಳಿ ನಡೆಸಿದ ರವಿ,ಸರ್ಕಾರ ಬಂದು ಎರಡು ವರ್ಷ ಆಯಿತು. ಎಷ್ಟು ಜನರ ಮೇಲೆ ಕೇಸ್ ಹಾಕಿದ್ದೀರಿ?ಎಷ್ಟು ಜನರನ್ನು ಬಂಧಿಸಿದ್ದೀರಿ? ಅಧಿಕಾರಕ್ಕೆ ಬಂದರೆ ಬಿಜೆಪಿಯ ಶೇ.40ರಷ್ಟು ಹಣ ಸೇರಿಸಿ ಕೊಡುತ್ತೇನೆ ಎಂದು ಹೇಳಿದ್ದರು. ನೀವು ಹಣವನ್ನು ಕ್ರೋಡೀಕರಿಸಿದ್ದು ಎಲ್ಲಿದೆ? ಯಾವ ಕಾಂಗ್ರೆಸ್ ಶಾಸಕರು ಅಂಗಡಿ ತೆಗೆದು ಕುಳಿತಿಲ್ಲ ಹೇಳಿ? ಎಂದು ಪ್ರಶ್ನೆ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಗಣಿ ಅಕ್ರಮ ಆರೋಪವಾಗಿ ಒಬ್ಬರು ಕೇಂದ್ರ ಸಚಿವರು, ಇನ್ನೊಬ್ಬರು ಡಿಸಿಎಂ ಆಪಾದನೆ ಮಾಡಿದವರು ಪರೀಕ್ಷೆಗೆ ಒಳಪಡಬೇಕು. ಮತ್ತೊಬ್ಬರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ನಾನು ರೈತರ ಮಗ. ಕಾಫಿ ತೋಟ ಇದೆ. ಆಲೂಗೆಡ್ಡೆ ಹಾಕಿ ಚಿನ್ನ ಬೆಳೆಯಲು ಹೇಳಿಕೊಟ್ಟಿದ್ದೇನೆಯೇ? ಅಧಿಕಾರ ಇದ್ದಾಗ ಆಲೂಗೆಡ್ಡೆ ಬದಲು ಚಿನ್ನ ಬೆಳೆಯುತ್ತಾರೆ. ಅದು ಹೇಗೆ ಎಂದು ರಾಜ್ಯದ ಜನರಿಗೆ ತಿಳಿಸಲಿ ಎಂದು ವ್ಯಂಗವಾಡಿದರು.