ನವದೆಹಲಿ, ಮೇ 1- ಹತ್ತು ರಾಷ್ಟ್ರಗಳ 18 ರಾಜಕೀಯ ಪಕ್ಷಗಳ ಪ್ರತಿನಿಧಿ ಗಳು ಬಿಜೆಪಿ ಪಕ್ಷದ ಆಹ್ವಾನದ ಮೇರೆಗೆ ಲೋಕಸಭಾ ಚುನಾವಣೆಗಳ ಖುದ್ದು ಅನುಭವ ಪಡೆಯುವ ಸಲುವಾಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೇರಿದಂತೆ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ.ವಿದೇಶಿ ಪ್ರತಿನಿಧಿ ಗಳಿಗೆ ಬಿಜೆಪಿ ಕಾರ್ಯತಂತ್ರಗಳು ಮತ್ತು ಒಟ್ಟಾರೆ ಚುನಾವಣಾ ಪ್ರಕ್ರಿಯೆ ಕುರಿತು ವಿವರಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ.
ವಿದೇಶಿ ಪ್ರತಿನಿಧಿ ಗಳು ಬುಧವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ.ಆಸೆ್ಟ್ರೕಲಿಯಾದ ಲಿಬರಲ್ ಪಾರ್ಟಿ, ವಿಯೆಟ್ನಾಂನ ಕಮ್ಯುನಿಸ್ಟ್ ಪಾರ್ಟಿ, ಬಾಂಗ್ಲಾದೇಶದ ಆವಾಮಿ ಲೀಗ್, ಇಸ್ರೇಲ್‌ನ ಲಿಕುಡ್ ಪಾರ್ಟಿ, ಉಗಾಂಡಾದ ನ್ಯಾಷನಲ್ ರೆಸಿಸ್ಟೆನ್‌್ಸ ಮೂವ್‌ಮೆಂಟ್, ತಾಂಜಾನಿಯಾದ ಚಮಾ ಚ ಮಪಿಂಡುಝಿ ಮತ್ತು ರಷ್ಯಾದ ಯುನೈಟೆಡ್ ರಷ್ಯಾ ಪಕ್ಷಗಳ ಪ್ರತಿನಿಧಿ ಗಳು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಶ್ರೀಲಂಕಾದಿಂದ ಶ್ರೀಲಂಕಾ ಪೊಡುಜನ ತೆರಮುನ ಮತ್ತು ಯುನೈಟೆಡ್ ನ್ಯಾಷನಲ್ ಪಾರ್ಟಿ, ಮಿಲಿಟೆಂಟ್ ಸೋಷಿಯಲಿಸ್ಟ್ ಮೂವ್‌ಮೆಂಟ್, ಮಾರಿಷಸ್ ಲೇಬರ್ ಪಾರ್ಟಿ, ಮಾರಿಷಿಯನ್ ಮಿಲಿಟೆಂಟ್ ಮೂವ್‌ಮೆಂಟ್ ಮತ್ತು ಪಾರ್ಟಿ ಮಾರಿಷಿಯನ್ ಸೋಷಿಯಲ್ ಡೆಮಾಕ್ರಾಟ್- ಮಾರಿಷ್‌ನಿಂದ, ನೇಪಾಳಿ ಕಾಂಗ್ರೆಸ್, ಜನಮತ್ ಪಾರ್ಟಿ, ಕಮ್ಯುನಿಸ್‌್ಟ ಪಾರ್ಟಿ ಆಫ್ ನೇಪಾಳ (ಯೂನಿಫೈಡ್ ಮಾರ್ಕ್ಸಿಸ್ಟ್ -ಲೆನಿನಿಸ್ಟ್), ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಮಾರ್ಕ್ಸಿಸ್ಟ್ ) ಮತ್ತು ರಾಷ್ಟ್ರೀಯ ಸ್ವತಂತ್ರ ಪಾರ್ಟಿ ನೇಪಾಳದಿಂದ ಬಿಜೆಪಿ ಆಹ್ವಾನದ ಮೇರೆಗೆ ಭಾರತಕ್ಕೆ ಪ್ರತಿನಿಧಿ ಗಳನ್ನು ಕಳುಹಿಸುತ್ತಿರುವ ಇತರ ಪಕ್ಷಗಳಾಗಿವೆ.
ಈ ಭೇಟಿಯು ಬಿಜೆಪಿ ತಿಳಿಯಿರಿ ಜಾಗತಿಕ ಪ್ರಚಾರಾಂದೋಲನದ ಭಾಗವಾಗಿದೆ ಎಂದು ಪಕ್ಷದ ವಿದೇಶಾಂಗ ವ್ಯವಹಾರಗಳ ವಿಭಾಗವ ಉಸ್ತುವಾರಿ ವಿಜಯ್ ಚೌತಾಯಿವಾಲೆ ತಿಳಿಸಿದರು.ಕಳೆದ ವರ್ಷ ಬಿಜೆಪಿ 43ನೆ ಸಂಸ್ಥಾಪನಾ ದಿನದಂದು ನಡ್ಡಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.