Thursday, March 13, 2025
Homeರಾಷ್ಟ್ರೀಯ | Nationalಈಗ ಲೋಕಸಭೆ ಚುನಾವಣಾ ನಡೆದ ಪೂರ್ಣಬಹುಮತದಲ್ಲಿ ಬಿಜೆಪಿಗೆ ಅಧಿಕಾರ ಗ್ಯಾರಂಟಿ: ಸಮೀಕ್ಷೆ

ಈಗ ಲೋಕಸಭೆ ಚುನಾವಣಾ ನಡೆದ ಪೂರ್ಣಬಹುಮತದಲ್ಲಿ ಬಿಜೆಪಿಗೆ ಅಧಿಕಾರ ಗ್ಯಾರಂಟಿ: ಸಮೀಕ್ಷೆ

BJP to win majority in Lok Sabha elections : Survey

ನವದಹಲಿ,ಫೆ.13-ಒಂದು ವೇಳೆ ದೇಶದಲ್ಲಿ ಈಗಲೇ ಲೋಕಸಭೆ ಚುನಾವಣೆ ಎದುರಾದರೆ ವಿರೋಧಿ ಅಲೆಯನ್ನು ಮೆಟ್ಟಿ ಪುನಃ ಬಿಜೆಪಿ ‘ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಮತದಾರರ ನಾಡಿಮಿಡಿತದಿಂದ ಗೊತ್ತಾಗಿದೆ.

ಸಿ-ವೋಟರ್ಸ್ ಹಾಗೂ ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ನಡೆಸಿರುವ ದೇಶಾದ್ಯಂತ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 343 ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 182 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿಯೇ ಈ ಬಾರಿ 281 ಸ್ಥಾನಗಳನ್ನು ಪಡೆದು ಸ್ವಂತ ಬಲದ ಮೇಲೇ 4ನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಲಿದೆ. ಕಾಂಗ್ರೆಸ್ 224ರಲ್ಲಿ ಪಡೆದ 99 ಸ್ಥಾನಗಳ ಪೈಕಿ 78 ಸ್ಥಾನಗಳಿಗೆ ಕುಸಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತೆ ಏರಿಕೆಯಾಗಿದೆ. ಶೇ.51ರಷ್ಟು ಜನರು ಈಗಲೂ ಮೋದಿಯೇ ದೇಶದ ಪ್ರಧಾನಿಯಾಗಲಿ ಎಂದು ಬಯಸಿದ್ದಾರೆ.

ಉತ್ತರಭಾರತದ ಹಿಂದಿ ರಾಜ್ಯಗಳಲ್ಲಿ ಎಂದಿನಂತೆ ನಾಗಾಲೋಟವನ್ನು ಮುಂದುವರೆಸಲಿದೆ ಉತ್ತರಪ್ರದೇಶ, ರಾಜಸ್ಥಾನ, ಭಸ್‌ಫಡ, ಜಾರ್ಖಂಡ್, ದೆಹಲಿ, ಉತ್ತರಖಂಡ್, ಮಧ್ಯಪ್ರದೇಶ ಮತ್ತಿತರ ಕಡೆ ಬಿಜೆಪಿಯನ್ನು ಹಿಡಿದಿಡಲು ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೂ ಸಾಧ್ಯವಾಗುವುದಿಲ್ಲ, ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ತನ್ನ ಹಿಂದಿನ ಖದರ್ ಉಳಿಸಿಕೊಂಡರೆ ಆಸ್ಸಾಂನಲ್ಲಿ ಕಾಂಗ್ರೆಸ್‌ನ್ನು ಹಿಂದಿಕ್ಕಿ ಕಮಲ ಪಕ್ಷ ಮುನ್ನುಗ್ಗಲಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲೂ ಈ ಬಾರಿಯೂ ಮಮತ ಬ್ಯಾನರ್ಜಿ ನೇತೃತ್ವದ ಟಿಎಂಸಿ, ದಕ್ಷಿಣ ಭಾರತದ ಪೈಕಿ ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಯುಪಿಎ, ಆಂಧ್ರದಲ್ಲಿ ಎನ್‌ಡಿಎ, ಕೆಲಂಗಾಣ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಗಳಿಸಲಿದೆ.

ಮೂಡ್ ಆಫ್ ದಿ ನೇಶನ್ ಸಮೀಕ್ಷಾ ವರದಿಯ ಪ್ರಕಾರ, ಒಂದು ವೇಳೆ ಈಗ ಚುನಾವಣೆ ನಡೆದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟ, ಕಳೆದ ಚುನಾವಣೆಗಿಂತ ಹೆಚ್ಚಿನ ಮತವನ್ನು ಪಡೆದು, ಮತ್ತೆ ಗದ್ದುಗೇರಲಿದೆ. ಅದೇ ವೇಳೆ, ಕಾಂಗ್ರೆ ಸ್ಸಿನ ವೋಟ್ ಶೇರ್ ಕಮ್ಮಿಯಾಗಲಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೆ, 343 ಸೀಟ್ ಅನ್ನು ಎನ್‌ಡಿಎ ಮೈತ್ರಿಕೂಟ ಪಡೆಯಲಿದೆ. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸ್ಥಾನದ ಅವಶ್ಯಕತೆಯಿದೆ ಮತ್ತು ಈ ನಂಬರ್ ಅನ್ನು ಬಿಜೆಪಿ ಮಾತ್ರ ದಾಟಲಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.

ಇಂಡಿಯಾ ಟುಡೇ – ಸಿವೋಟರ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಒಟ್ಟಾರೆಯಾಗಿ ಏನು 231 ಸ್ನಾನವನ್ನು ಪಡೆದಿತ್ತೋ, ಆ ನಂಬರ್ ಅನ್ನು ಉಳಿಸಿಕೊಳ್ಳಲು ಒಕ್ಕೂಟಕ್ಕೆ ಸಾಧ್ಯವಾಗುವುದಿಲ್ಲ, ಆಮ್ ಆದ್ದಿ ಪಾರ್ಟಿ, ಎನ್ ಸಿಪಿ, ಎಡಪಕ್ಷಗಳು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಕೆಲವು ಕಡೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಆಗಿತ್ತು. ಕಾಂಗ್ರೆಸ್, ಒಂದೂ ಸೀಟ್ ಗೆಲ್ಲಲಾಗದೇ ಮುಖಭಂಗ ಅನುಭವಿಸಿತ್ತು.

2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 232 ಸೀಟ್ ಗೆದ್ದಿತ್ತು. ಈಗ, ಒಂದು ವೇಳೆ ಚುನಾವಣೆ ನಡೆದರೆ ಅದು 188ಕ್ಕೆ ಅಳಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ಜನವರಿ 2-9ರ ಅವಧಿಯಲ್ಲಿ ನಡೆಸಲಾದ ಸಮೀಕ್ಷೆ ಇದಾಗಿದೆ. 1,25,123 ಜನರನ್ನು ಸಂಪರ್ಕಿಸಿ ಈ ಸಮೀಕ್ಷೆ ಸಿದ್ಧಪಡಿಸಲಾಗಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತ ಶೇ.3ರಷ್ಟು ಹೆಚ್ಚಿನ ಮತವನ್ನು ಬಿಜೆಪಿ ಮೈತ್ರಿಕೂಟ ಪಡೆದುಕೊಳ್ಳಲಿದೆ. ಶೇ.47ರಷ್ಟು ಮತವನ್ನು ಎನ್ನಿಎ ಮೈತ್ರಿಕೂಟ ಪಡೆದುಕೊಂಡರೆ, ಇಂಡಿಯಾ ಬ್ಲಾಕ್ ಒಂದು ಪರ್ಸಂಟೇಜ್ ಮಾತ್ರ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಿದೆ. ಇದಕ್ಕೆ ಕಾರಣ ಮೈತ್ರಿಕೂಟದೊಳಗಿನ ಗೊಂದಲ.

ಈಗ ಚುನಾವಣೆ ನಡೆದರೆ ಬಿಜೆಪಿ 281 ಸ್ಥಾನವನ್ನು ಗೆಲ್ಲಲಿದೆ. ಕಾಂಗ್ರೆಸ್ ತನ್ನ ಸಂಖ್ಯೆಯನ್ನು 99ರಿಂದ 18 ಇಳಿಸಿಕೊಳ್ಳಲಿದೆ. ಬಿಜೆಪಿಗೆ ಶೇ.41, ಕಾಂಗ್ರೆಸ್ಸಿಗೆ ಶೇ.20ರಷ್ಟು ಮತ ಚಲಾವಣೆಯಾಗಲಿದೆ. ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳದೇ ಹೋದಲ್ಲಿ, ಮತ್ತೆ ಅಧಿಕಾರಕ್ಕೇರುವುದು ಕಷ್ಟ ಎನ್ನುವುದು ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.

ಅಬ್ ಕೀ ಬಾರ್ ಬಾರ್ ಸೋ ಪಾರ್ ಎನ್ನುವ ಘೋಷವಾಕ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಳಸಿದ್ದರು. ಇದು ವಿಪಕ್ಷದ ನಾಯಕರ ಟೀಕೆಗೆ ಗುರಿಯಾಗಿತ್ತು. ಯಾಕೆಂದರೆ 400 ಬಿಟ್ಟು, ಸರಳ ಬಹುಮತದ ಸಂಖ್ಯೆಯನ್ನೂ ಗಳಿಸಲು ಬಿಜೆಪಿಗೆ ಆಗಿರಲಿಲ್ಲ, ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಸಹಕಾರದಿಂದ, ಬಿಜೆಪಿ ಅಧಿಕಾರಕ್ಕೇರಿತ್ತು.

ಮತಗಟ್ಟೆ ಸಮೀಕ್ಷೆಗಳು ದೆಹಲಿ ಚುನಾವಣೆಯಲ್ಲಿ ನುಡಿದ ಭವಿಷ್ಯ ಬಹುತೇಕ ನಿಜವಾಗಿತ್ತು. ಅದೇ ರೀತಿ, ಕಳೆದ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ದಯನೀಯವಾಗಿ ವೈಫಲ್ಯದಾಗಿದ್ದವು. ಬಿಜೆಪಿ ನೇತೃತ್ವದ ಎನ್ನಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ಎಂದಿದ್ದವು. ಆದರೆ, ಬಿಜೆಪಿ ಮೈತ್ರಿಕೂಟದ ಪ್ರಯಾಸದ ಗೆಲುವನ್ನು ಸಾಧಿಸಿತ್ತು.

RELATED ARTICLES

Latest News