Thursday, April 10, 2025
Homeರಾಜಕೀಯ | Politics"ಮಜವಾದಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಉತ್ತರ ಕೊಡಿ"

“ಮಜವಾದಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಉತ್ತರ ಕೊಡಿ”

ಬೆಂಗಳೂರು,ಡಿ.30- ರಾಜ್ಯದ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಿಂದ ಬೇಸತ್ತು ಎಲ್ಲಾ ವರ್ಗದ ಜನರು ಇಡುತ್ತಿರುವ ಬೇಡಿಕೆಗಳನ್ನ ಬಿಜೆಪಿ ಟ್ವೀಟ್ ಮೂಲಕ ತಿಳಿಸಿದ್ದು, ಮಜವಾದಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳೇ ಉತ್ತರ ಕೊಡಿ ಎಂದು ಬಿಜೆಪಿ ಆಗ್ರಹಿಸಿದೆ.

ಈ ಕುರಿತು ಸಾಲು ಸಾಲು ಪೋಸ್ಟ್ ಮಾಡಿರುವ ಬಿಜೆಪಿ ,
ನಾನು ನಿರುದ್ಯೋಗಿ ಉದ್ಯೋಗ ಕೊಡಿ
ನಾನು ಗೃಹಿಣಿ ಗೃಹ ಲಕ್ಷ್ಮಿ ಹಣ ಕೊಡಿ
ನಾನು ರೈತ ಬರ ಪರಿಹಾರ ಕೊಡಿ
ನಾನು ಬಡವ ಅನ್ನಭಾಗ್ಯ ಅಕ್ಕಿ ಕೊಡಿ
ನಾನು ಅತಿಥಿ ಉಪನ್ಯಾಸಕ ಸಂಬಳ ಕೊಡಿ
ನಾನು ನೇಕಾರ ವಿದ್ಯುತ್ ಕೊಡಿ
ನಾನು ದಲಿತ ಅವಕಾಶ ಕೊಡಿ
ನಾನು ವಿದ್ಯಾರ್ಥಿ ಟಾಯ್ಲೆಟ್‍ನಿಂದ ಮುಕ್ತಿ ಕೊಡಿ ಎಂದು ಆಗ್ರಹಿಸಿದೆ.

ಭಯೋತ್ಪಾದಕ ಪಟ್ಟಿಗೆ ಲಖ್‍ಬೀರ್ ಸಿಂಗ್ ಲಾಂಡಾ ಸೇರ್ಪಡೆ

ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, ಸ್ವಯಂಘೋಷಿತ ಸರಳ ಸಜ್ಜನಿಕೆಯ ಸಚಿವ ಸತೀಶ್ ಜಾರಕಿಹೊಳಿ ಅವರು, ತಮ್ಮ ಕಚೇರಿ ನವೀಕರಣಕ್ಕೆ ಕನ್ನಡಿಗರ ಶ್ರಮದ ತೆರಿಗೆ ಹಣವನ್ನು ಕೋಟಿಗಟ್ಟಲೆ ಪೋಲು ಮಾಡುತ್ತಿದ್ದಾರೆ. ದುರ್ಭಿಕ್ಷದಲ್ಲಿ ಮಗ ಊಟ ಮಾಡುವುದನ್ನು ಕಲಿತ ಅನ್ನುವ ಹಾಗೆ, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಭೀಕರ ಬರಗಾಲದಲ್ಲಿಯೇ ಅವರ ಕಚೇರಿಗಳು ಫಳ ಫಳ ಹೊಳೆಯಬೇಕಂತೆ! ಎಂದು ವ್ಯಂಗ್ಯವಾಡಿದೆ.

RELATED ARTICLES

Latest News