Friday, October 18, 2024
Homeರಾಷ್ಟ್ರೀಯ | Nationalಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ವಿಜಯಪತಾಕೆ : ಅಮಿತ್‌ ಶಾ ವಿಶ್ವಾಸ

ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ವಿಜಯಪತಾಕೆ : ಅಮಿತ್‌ ಶಾ ವಿಶ್ವಾಸ

ನವದೆಹಲಿ,ಮೇ.29– ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಗಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಿಮ ನಿರೀಕ್ಷೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಶಾ ಅವರು ನಾವು ಬಂಗಾಳದಲ್ಲೂ ಗಮನಾರ್ಹ ಮುನ್ನಡೆ ಸಾಧಿಸುತ್ತೇವೆ. ನಾವು 24 ರಿಂದ 30 ಸ್ಥಾನಗಳನ್ನು (42 ರಲ್ಲಿ) ಗೆಲ್ಲಬಹುದು. ಒಡಿಶಾದಲ್ಲಿ ನಮ ಗುರಿ 17 ಲೋಕಸಭೆ. 75 ಅಸೆಂಬ್ಲಿ ಸ್ಥಾನಗಳು ಅದೇ ರೀತಿ ನಾವು ತೆಲಂಗಾಣದಲ್ಲಿ 10 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.

ಈಗಾಗಲೇ ಉತ್ತರ ಮತ್ತು ಪಶ್ಚಿಮದಲ್ಲಿ ಪ್ರಬಲ ಶಕ್ತಿಯಾಗಿರುವ ಬಿಜೆಪಿಯು ಈ ಬಾರಿ ತನ್ನ ಹೆಜ್ಜೆಗುರುತುಗಳನ್ನು ಪೂರ್ವ ಮತ್ತು ದಕ್ಷಿಣದಲ್ಲಿ ವಿಸ್ತರಿಸಲು ಶ್ರಮಿಸುತ್ತಿದೆ, ಅಲ್ಲಿ ಹಲವಾರು ರಾಜ್ಯಗಳು ವಿರೋಧ ಪಕ್ಷಗಳ ಆಳ್ವಿಕೆಯಲ್ಲಿವೆ. ಸಾರ್ವತ್ರಿಕ ಚುನಾವಣೆಯ ಜೊತೆಗೆ ಒಡಿಶಾ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಮತದಾನ ನಡೆಯುತ್ತಿದೆ.

ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ನೇತತ್ವದ ಬಿಜೆಡಿ ಸರ್ಕಾರ ಮತ್ತೊಂದು ಅವಧಿಗೆ ಪ್ರಯತ್ನಿಸುತ್ತಿದೆ. ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ, ಬಿಜೆಪಿಯು ಎನ್‌ ಚಂದ್ರಬಾಬು ನಾಯ್ಡು ನೇತತ್ವದ ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತಾರೂಢ ವೈಎಸ್‌‍ಆರ್‌ ಕಾಂಗ್ರೆಸ್‌‍ಗೆ ಕಠಿಣ ಸವಾಲೊಡ್ಡಿದ್ದೇವೆ ಎಂದಿದ್ದಾರೆ.

ಪೂರ್ವ ವಲಯದಲ್ಲಿ, ಬಂಗಾಳ, ಜಾರ್ಖಂಡ್‌, ಬಿಹಾರ, ಒಡಿಶಾ ಒಳಗೊಂಡಂತೆ ನಾವು ದೊಡ್ಡ ಪಕ್ಷವಾಗಿ ಹೊರಹೊಮುತ್ತೇವೆ. ಇದು ಖಚಿತವಾಗಿದೆ ಮತ್ತು ದಕ್ಷಿಣದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಐದು ರಾಜ್ಯಗಳಲ್ಲಿ ನಾವು ಎಲ್ಲಾ ರಾಜ್ಯಗಳಲ್ಲಿ ಅತಿ ದೊಡ್ಡ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.

ಒಟ್ಟು 57 ಲೋಕಸಭಾ ಸ್ಥಾನಗಳಿಗೆ ಶನಿವಾರ ಏಳನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಇವುಗಳಲ್ಲಿ 26 ಪೂರ್ವ ರಾಜ್ಯಗಳಾದ ಒಡಿಶಾ, ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿವೆ. ಜೂನ್‌ 4 ರಂದು ಮತ ಎಣಿಕೆ ನಡೆಯಲಿದೆ.

RELATED ARTICLES

Latest News