Sunday, September 8, 2024
Homeರಾಜಕೀಯ | Politicsಬಿಜೆಪಿಯ ಮುಸ್ಲಿಂ ದ್ವೇಷ ಭವಿಷ್ಯತ್ತಿಗೆ ಮಾರಕವಾಗಲಿದೆ : ಹರಿಪ್ರಸಾದ್‌

ಬಿಜೆಪಿಯ ಮುಸ್ಲಿಂ ದ್ವೇಷ ಭವಿಷ್ಯತ್ತಿಗೆ ಮಾರಕವಾಗಲಿದೆ : ಹರಿಪ್ರಸಾದ್‌

ಬೆಂಗಳೂರು,ಮೇ 15- ಅಣ್ಣ ತಮಂದಿರಂತೆ ಬಾಳಿ ಬದುಕುತ್ತಿದ್ದ ಅನ್ಯ ಸಮುದಾಯಗಳಲ್ಲಿ ಕೇವಲ ಅಧಿಕಾರಕ್ಕಾಗಿ ಹೆಚ್ಚಿರುವ ದ್ವೇಷದ ಜ್ವಾಲೆ ಮನೆ-ಮನಗಳನ್ನು ಸುಡುತ್ತಿದೆ. ಅದರ ಅಪಾಯವೇ ಭವಿಷ್ಯತ್ತಿಗೆ ಮಾರಕವಾಗಲಿದೆ ಎಂದು ಕಾಂಗ್ರೆಸ್‌‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಆತಂಕ ವ್ಯಕ್ತಪಡಿಸಿದ್ದಾರೆ.

ತಾವು ಎಂದೂ ಹಿಂದೂ-ಮುಸ್ಲಿಂ ಎಂದು ವಿಭಜನೆಯ ಮಾತುಗಳನ್ನಾಡುವುದಿಲ್ಲ, ಒಂದು ವೇಳೆ ಆ ರೀತಿ ಮಾತನಾಡಿದರೆ ಸಾರ್ವಜನಿಕ ಜೀವನದಲ್ಲೇ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿ.ಕೆ.ಹರಿಪ್ರಸಾದ್‌ರವರು, ಸಮುದಾಯದವರ ಮನೆಗಳಲ್ಲಿ ಬಿರಿಯಾನಿ ತಿನ್ನುವುದು ಮೋದಿಗೆ ಬಾಲ್ಯದಿಂದಲೇ ಬೆಳದು ಬಂದಿರುವ ಪಾಠ.

ಅದಕ್ಕಾಗಿಯೇ ಕರೆದರೂ, ಕರೆಯದಿದ್ದರೂ ಬಿರಿಯಾನಿ ತಿನ್ನಬೇಕೆನಿಸಿದರೆ ಪಾಕಿಸ್ತಾನದ ಪ್ರಧಾನಿಯ ಮೊಮಗಳ ಮದುವೆಯ ಬಿರಿಯಾನಿಗೂ ಮೋದಿ ಹಾಜರಾಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಬಾಲ್ಯದಲ್ಲಿ ಈದ್‌, ಮೊಹರಂ ಹಬ್ಬಗಳಲ್ಲಿ ನರೇಂದ್ರ ಮೋದಿಗೆ ಅಕ್ಕ ಪಕ್ಕದ ಮುಸ್ಲಿಂ ಮನೆಗಳಿಂದಲೇ ಊಟ ಬರುತ್ತಿತ್ತಂತೆ. ಪ್ರಧಾನಿಗಳೇ, ಇದು ಕೇವಲ ನಿಮ ಮನೆಯ ಉದಾಹರಣೆಯಲ್ಲ, ಭಾರತದ ಸಂಸ್ಕೃತಿಯೇ ಇದು. ನೆರೆ ಹೊರೆಯವರು ಜಾತಿ, ಮತ, ಭೇದ ಇಲ್ಲದೇ ಬದುಕು ಕಟ್ಟಿಕೊಂಡಿದ್ದೇ ಈ ಕೊಡು ಕೊಳ್ಳುವ ಪರಂಪರೆಯಿಂದ ಎಂದು ತಿಳಿಸಿದ್ದಾರೆ.

ಉಂಡ ಮನೆಗೆ ದ್ರೋಹ ಬಗೆಯುವುದು, ಕಟ್ಟಿಕೊಂಡ ಪತ್ನಿಯನ್ನು, ನಂಬಿಕೊಂಡ ತಂದೆ ತಾಯಿಯನ್ನು ನಡು ನೀರಿನಲ್ಲಿ ಕೈ ಬಿಡುವುದು ಭಾರತೀಯ ಸಂಸ್ಕೃತಿಯೇ ಅಲ್ಲ. ಭಾರತದ ಮೂಲ ಸಂಸ್ಕೃತಿಯನ್ನು ಉಳಿಸಿದ ಹೆಮೆ ಕಾಂಗ್ರೆಸ್‌‍ ಪಕ್ಷಕ್ಕಿದೆ ಎಂದಿದ್ದಾರೆ.

ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಜಾತಿ ಧರ್ಮಗಳ ಭಾವನೆಗಳಿಗೆ ಗೌರವ ನೀಡಿದ ಹೆಮೆಯೂ ಕಾಂಗ್ರೆಸ್‌‍ ಪಕ್ಷಕ್ಕಿದೆ. ಮಾನವೀಯತೆಯೇ ಎಲ್ಲಾ ಧರ್ಮಗಳಲ್ಲಿರುವ ತಿರುಳನ್ನು ನಾವು ಉಳಿಸಿಯೇ ಸಿದ್ಧ. ನಿಮ ಮುಖವಾಡಗಳು ಇನ್ನಷ್ಟು ಬಯಲಾಗುತ್ತಲೇ ಇರುತ್ತದೆ. ಅದಕ್ಕೆ ಕಾಲವೇ ಸಾಕ್ಷಿಯಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News