ಇಸ್ಲಾಮಾಬಾದ್,ಏ.26– ಬಲೂಚಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಬಲೂಚ್ ಲಿಬರೇಶನ್ ಆರ್ಮಿ ದಾಳಿ ನಡೆಸಿದ್ದು, ಪಾಕ್ ಸೇನೆಯ 10 ಸಿಬ್ಬಂದಿಯನ್ನು ಹತ್ಯೆ ಮಾಡಿದೆ. ಬಲೂಚ್ ಲಿಬರೇಶನ್ ಆರ್ಮಿ ಈ ದಾಳಿಯ ಜವಾಬ್ದಾರಿ ಹೊತ್ತುಕೊಂಡಿದೆ.
ದಿಬಲೂಚ್ ಲಿಬರೇಶನ್ ಆರ್ಮಿ(ಬಿಎಲ್‌ಎ) ಪಾಕಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್‌ನಲ್ಲಿ ಪಾಕಿಸ್ತಾನಿ ಸೇನಾ ಸಿಬ್ಬಂದಿಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ರಿಮೋಟ್ ಕಂಟ್ರೋಲ್‌್ಡ ಐಇಡಿ ದಾಳಿ ನಡೆಸಲಾಗಿದೆ.
ಬಲೂಚ್ ದಂಗೆಕೋರರಿಂದ ಪಾಕ್ ಸೇನೆಯ ಸುಬೇದಾರ್ ಶೆಹಜಾದ್ ಅಮೀನ್, ನಯಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಂ ಮತ್ತು ಇತರರು ಹತ್ಯೆಗೀಡಾಗಿದ್ದಾರೆ. ಕ್ವೆಟ್ಟಾದ ಹೊರವಲಯದಲ್ಲಿರುವ ಮಾರ್ಗಾಟ್‌ನಲ್ಲಿ ಸೇನೆಯ ವಾಹನಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.
ರಿಮೋಟ್ ಕಂಟ್ರೋಲ್ ಬಳಸಿ ಈ ದಾಳಿ ಮಾಡಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದ್ದು, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗೆ ಇದು ಮತ್ತೊಂದು ಉದಾಹರಣೆಯಾಗಿದೆ.ನಮ ಹೋರಾಟಗಾರರು ಸೇನೆಯ ವಾಹನವನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ಬಿಎಲ್‌ಎ ಹೇಳಿದ್ದು, ಸ್ಫೋಟದಲ್ಲಿ ವಾಹನವು ಸಂಪೂರ್ಣವಾಗಿ ನಾಶವಾಗಿದೆ.
ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧದ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಎಚ್ಚರಿಕೆ ನೀಡಿದೆ. ನಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಿಲ್ಲುವುದಿಲ್ಲ. ನಾವು ನಮೆಲ್ಲಾ ಶಕ್ತಿಯಿಂದ ಶತ್ರುಗಳನ್ನು ಗುರಿಯಾಗಿಸುತ್ತೇವೆ, ಎಂದು ಘೋಷಿಸಿದೆ. ಗುರುವಾರ ಕೂಡ ಬಿಎಲ್‌ಎ ಬಲೂಚಿಸ್ತಾನದ ವಿವಿಧೆಡೆ ಏಳು ಜನ ಪಾಕಿಸ್ತಾನ ಸೈನಿಕರನ್ನು ಕೊಂದಿತ್ತು. ಈ ಘಟನೆಗಳಲ್ಲಿ ನಾಲ್ಕು ಜನರಿಗೆ ಗಾಯಗಳಾಗಿತ್ತು. ಜಮುರಾನ್, ಕೊಲ್ವಾ ಮತ್ತು ಕಲತ್ ಜಿಲ್ಲೆಗಳಲ್ಲಿ ಈ ದಾಳಿಗಳು ನಡೆದಿದ್ದವು. ಕೆಲವು ಕಡೆಗಳಲ್ಲಿ ಭದ್ರತಾ ಠಾಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ.
ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಪ್ರತ್ಯೇಕಗೊಳಿಸುವ ಗುರಿಯೊಂದಿಗೆ ಬಲೂಚ್ ಲಿಬರೇಶನ್ ಆರ್ಮಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಹೋರಾಟವನ್ನು ಬಿಎಲ್‌ಎ ಹೆಚ್ಚಿಸಿದ್ದು, ಪಾಕಿಸ್ತಾನ ಸೇನೆ ಮತ್ತು ಬಲೂಚ್ ಪ್ರತ್ಯೇಕತಾವಾದಿಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಇದರಿಂದ ಈ ಭಾಗದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇತ್ತೀಚೆಗೆ ಬಿಎಲ್‌ಎ ರೈಲೊಂದನ್ನು ಅಪಹರಿಸಿದ್ದನ್ನೂ ಇಲ್ಲಿ ಸರಿಸಬಹುದು. ಈ ದಾಳಿ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ನಿರಂತರ ಉದ್ವಿಗ್ನತೆಯ ಪ್ರತೀಕವಾಗಿದೆ. ಕಳೆದ ಗುರುವಾರ ಬಲೂಚಿಸ್ತಾನದಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲೂ ಏಳು ಸೇನಾ ಸಿಬ್ಬಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು.
ಈ ದಾಳಿಗಳು ಝಮುರಾನ್, ಕೊಲ್ವಾ ಹಾಗೂ ಕಲಾತ್ ಜಿಲ್ಲೆಗಳಲ್ಲಿ ನಡೆದಿದ್ದವು. ಇದೇ ವೇಳೆ, ಕೆಲವು ಪ್ರದೇಶಗಳಲ್ಲಿ ಭದ್ರತಾ ಠಾಣೆಗಳನ್ನು ವಶಪಡಿಸಿಕೊಂಡಿರುವುದಾಗಿ ಬಿಎಲ್‌ಎ ತಿಳಿಸಿದೆ. ಈ ಘಟನೆಗಳು ಪಾಕಿಸ್ತಾನಿ ಸೇನೆಯ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.ಪಾಕಿಸ್ತಾನದ ಬೋಲಾನ್‌ನಲ್ಲಿ ಬಿಎಲ್‌ಎ ಜಾಫರ್ ಎಕ್ಸ್ ಪ್ರೆಸ್ ಅನ್ನು ಅಪಹರಿಸಿದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ.
ರೈಲು ಹೈಜಾಕ್ ನಲ್ಲಿ ಸುಮಾರು 339 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು ಮತ್ತು ಈ ಘಟನೆಯಲ್ಲಿ ಒಟ್ಟು 25 ಜನರು ಪ್ರಾಣ ಕಳೆದುಕೊಂಡಿದ್ದರು. ರೈಲು ಕ್ವೆಟ್ಟಾದಿಂದ ಉತ್ತರ ನಗರವಾದ ಪೇಶಾವರಕ್ಕೆ ಹೋಗುತ್ತಿದ್ದಾಗ ಬಿಎಲ್‌ಎ ಹಳಿಯನ್ನು ಸ್ಫೋಟಿಸಲಾಯಿತು. ಇದರಿಂದಾಗಿ ಒಂಬತ್ತು ಬೋಗಿಗಳು ಮತ್ತು ಜಾಫರ್ ಎಕ್‌್ಸಪ್ರೆಸ್ ರೈಲಿನ ಎಂಜಿನ್ ಸುರಂಗದೊಳಗೆ ಭಾಗಶಃ ನಿಂತಿತ್ತು, ಬಳಿಕ ಕಾರ್ಯಾಚರಣೆ ನಡೆಸಿ ಒತ್ತೆಯಾಳುಗಳನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಕಡೆಯಿಂದ ಬಿಡಿಸಿಕೊಳ್ಳಲಾಯ್ತು.