ಕನಕಪುರ,ಅ.26- ಪ್ರೀತಿಸಿದ ಯುವತಿಯೊಬ್ಬಳು ಬೇರೆಯವರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಕುಪಿತಗೊಂಡ ಪ್ರೇಮಿಯೊಬ್ಬ ಯುವತಿಯೊಂದಿಗಿರುವ ಏಕಾಂತದ ವಿಡಿಯೋ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಹಿನ್ನಲೆಯಲ್ಲಿ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಸದುರ್ಗ ಗ್ರಾಮದ ಯುವಕ ಹಾಗೂ ಕಸಬಾ ಹೋಬಳಿಯ ಯುವತಿ ಪರಸ್ಪರ ಪ್ರೇಮಿಸಿ ಕೆಲದಿನಗಳ ಕಾಲ ನಿಕಟವಾಗಿ ಓಡಾಡಿದ್ದರು, ಇತ್ತೀಚೆಗೆ ಯುವತಿ ಮದುವೆ ನಿಶ್ಚಿಯವಾಗಿದೆ ಎಂದು ಕುಪಿತಗೊಂಡ ಯುವಕ ಯುವತಿಯೊಂದಿಗೆ ಇದ್ದ ಕೆಲವಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಇದರಿಂದ ಬೇಸರಗೊಂಡ ಯುವತಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ ವಿಡಿಯೋ ವೈರಲ್ ಆಗಿರುವ ಬಗ್ಗೆ ಈ ದೃಶ್ಯ ನನ್ನದಲ್ಲ, ನನ್ನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಲು ಉದ್ದೇಶಪೂರ್ವಕವಾಗಿ ನಕಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಯುವಕ ಆತನ ತಂದೆ ಹಾಗೂ ಮನೆಯ ಮತ್ತೊಬ್ಬ ಕುಟುಂಬ ಸದಸ್ಯರು ಮೂವರ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.