ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಹೆದರಿ ದೂರು ನೀಡಿದ ಯುವಕ

Spread the love

ಬೆಂಗಳೂರು, ನ.17- ಆ್ಯಪ್‍ವೊಂದರಲ್ಲಿ ಜಾಹಿರಾತು ನೋಡಿ ಮರುಳಾದ ಯುವಕನೊಬ್ಬ , ಯುವತಿಯ ಪರಿಚಯ ಮಾಡಿಕೊಂಡು ನಂತರ ಆಕೆಯ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಹೆದರಿ ಇದೀಗ ವೈಟ್‍ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುವ ಯುವಕ ಆ್ಯಪ್‍ನಲ್ಲಿ ಜಾಹಿರಾತು ನೋಡಿ ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ.

ನಂತರ ಯುವತಿಯ ಮಾತಿಗೆ ಮರುಳಾದ ಉದ್ಯೋಗಿ 10 ಸಾವಿರ ಹಣವನ್ನು ಆಕೆಯ ಅಕೌಂಟ್‍ಗೆ ಹಾಕುತ್ತಾನೆ. ತದನಂತರ ತಾನು ಎನ್‍ಜಿಒ ಅಧಿಕಾರಿ ಎಂದು ಯುವತಿ ಪರಿಚಯಿಸಿಕೊಂಡು ಯುವಕನಿಗೆ ಹಣ ಕೊಡುವಂತೆ ಬ್ಲ್ಯಾಕ್‍ಮೇಲ್ ಮಾಡುತ್ತಾಳೆ.

ಹಣ ಕೊಡದಿದ್ದರೆ ಅತ್ಯಾಚಾರದ ದೂರು ಕೊಡುವುದಾಗಿ ಯುವಕನಿಗೆ ಹೆದರಿಸುತ್ತಾಳೆ. ಇದರಿಂದ ಯುವಕ ಆತಂಕಗೊಂಡು ಯುವತಿಯ ಮ್ಯಾನೇಜರ್‍ಅನ್ನು ಸಂಪರ್ಕ ಮಾಡುತ್ತಾರೆ. ನಿಮ್ಮಿಬ್ಬರ ಮಧ್ಯೆ ರಾಜಿ ಮಾಡಿಸಲು ಮೊದಲು 2 ಲಕ್ಷ , ನಂತರ 5 ಲಕ್ಷ ಕೊಡುವಂತೆ ಮ್ಯಾನೇಜರ್ ಹೇಳುತ್ತಾನೆ. ಯುವಕ ಮೊದಲು 20 ಸಾವಿರ, ನಂತರ 50 ಸಾವಿರ, ತದನಂತರ 17 ಸಾವಿರ ಹಣವನ್ನು ಮ್ಯಾನೇಜರ್ ಅಕೌಂಟ್‍ಗೆ ಹಾಕುತ್ತಾರೆ.

ಮತ್ತೆ ಮತ್ತೆ ಹಣಕ್ಕೆ ಪೀಡಿಸಿದಾಗ ಯುವಕ ಆತಂಕಗೊಂಡು ತನಗೆ ಮೋಸವಾಗಿರುವ ಬಗ್ಗೆ ವೈಟ್‍ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವೈಟ್‍ಫೀಲ್ಡ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಣಕ್ಕಾಗಿ ಯುವಕನಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಯುವತಿ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Facebook Comments