Sunday, November 24, 2024
Homeರಾಜ್ಯಕೇರಳದಲ್ಲಿ ಬಾಂಬ್ ಸ್ಪೋಟದ ದೇಶದಾದ್ಯಂತ ಹೈಅಲರ್ಟ್

ಕೇರಳದಲ್ಲಿ ಬಾಂಬ್ ಸ್ಪೋಟದ ದೇಶದಾದ್ಯಂತ ಹೈಅಲರ್ಟ್

ನವದೆಹಲಿ, ಅ.29- ಕೇರಳದಲ್ಲಿ ಬಾಂಬ್ ಸ್ಪೋಟ ಬಳಿಕ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಕೇರಳದ ಎರ್ನಾಕುಲಂನಲ್ಲಿರುವ ಕಲಮಸರಿಯಲ್ಲಿರುವ ಬೃಹತ್ ಸಮಾವೇಶ ಭವನದಲ್ಲಿ ಬಾಂಬ್ ಸ್ಪೋಟಗೊಂಡು ಒಬ್ಬ ಮಹಿಳೆ ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ.

ಹುಲಿ ಉಗುರು ಪೆಂಡೆಂಟ್ ವಿಚಾರದಲ್ಲಿ ಸಿಎಂ ಮಧ್ಯಪ್ರವೇಶಕ್ಕೆ ಶರವಣ ಆಗ್ರಹ

ಧಾರ್ಮಿಕ ಸಮಾವೇಶದ ಮೇಲೆ ನಡೆದಿರುವ ವ್ಯವಸ್ಥಿತ ದಾಳಿಯ ಹೊಣೆಯನ್ನು ಈವೆರೆಗೂ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಅಂತರಾಷ್ಟ್ರೀಯ ವಿದ್ಯಮಾನಗಳಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ನಡೆಯುತ್ತಿದೆ. ಇದರ ಹಿನ್ನೆಲೆಯಲ್ಲಿ ದಾಳಿಗಳಾಗುವ ಅಂದಾಜಿದ್ದು, ಕಾಕತಾಳೀಯ ಎಂಬಂತೆ ಕೇರಳದಲ್ಲಿ ಬಾಂಬ್ ಸ್ಪೋಟವಾಗಿದೆ. ಅದರ ಬೆನ್ನಲೇ ದೇಶಾದ್ಯಂತ ಸೂಕ್ಷ್ಮ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದೆ.

ರಾಜ್ಯ ಪೊಲೀಸ್ ಘಟಕಗಳಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ತಾಕೀತು ಮಾಡಿದೆ. ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು, ಪ್ರಚಾರ ಕಾರ್ಯಕ್ರಮಗಳಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಎಚ್ಚರಿಕೆ ನೀಡಲಾಗಿದೆ.

RELATED ARTICLES

Latest News