Tuesday, August 5, 2025
Homeಬೆಂಗಳೂರುಕಬ್ಬನ್‌ ಪಾರ್ಕ್‌ನಲ್ಲಿ ಬ್ಲೈಂಡ್‌ ಡೇಟಿಂಗ್‌ಗೆ ಅವಕಾಶ ಇಲ್ಲ

ಕಬ್ಬನ್‌ ಪಾರ್ಕ್‌ನಲ್ಲಿ ಬ್ಲೈಂಡ್‌ ಡೇಟಿಂಗ್‌ಗೆ ಅವಕಾಶ ಇಲ್ಲ

Blind dating not allowed in Cubbon Park

ಬೆಂಗಳೂರು, ಆ.2- ನಗರದ ಹೃದಯ ಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ನಲ್ಲಿ ಬ್ಲೈಂಡ್‌ ಡೇಟಿಂಗ್‌ಗೆ ಅವಕಾಶವಿಲ್ಲ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಬ್ಬನ್‌ಪಾರ್ಕ್‌ ಅನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ಸರ್ಕಾರದ ಅಧೀನ ಸ್ಥಳದಲ್ಲಿ ಯಾವುದೇ ಪೂರ್ವಾನುಮತಿಯಿಲ್ಲದೆ ಕೆಲವು ಖಾಸಗೀ ವ್ಯಕ್ತಿಗಳು ಸ್ವಂತ ಲಾಭಕ್ಕಾಗಿ ಬ್ಲೈಂಡ್‌ ಡೇಟ್‌ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಇದರ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.

ಸಾರ್ವಜನಿಕ ಸ್ಥಳದಲ್ಲಿ ಯಾರ ಗಮನಕ್ಕೂ ತಾರದೆ ಡೇಟಿಂಗ್‌ ಚಟುವಟಿಕೆಗಳನ್ನು ನಡೆಸುತ್ತಿರುವುದು ಅಕ್ರಮವಾಗಿದೆ. ಆನ್‌ಲೈನ್‌ ಪ್ಲಾಟ್‌ಫಾರಂನಲ್ಲಿ ಇದರ ನೋಂದಣಿ ನಡೆಯುತ್ತಿದೆ. ಮಹಿಳಾ ಭಾಗಿದಾರರಿಗೆ 400 ರೂ., ಪುರುಷ ಭಾಗಿದಾರರಿಗೆ 1500 ರೂ.ವರೆಗೂ ಬೇರೆ ಬೇರೆ ರೀತಿಯ ದರಗಳನ್ನು ಆನ್‌ಲೈನ್‌ ಪ್ಲಾಟ್‌ಫಾರಂನಲ್ಲಿ ನಿಗದಿ ಮಾಡಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಈ ರೀತಿ ದಾಖಲಾತಿ ಮಾಡುತ್ತಿರುವ ವ್ಯಕ್ತಿಗಳ ಜೊತೆ ತಾವು ಚರ್ಚೆ ಮಾಡಿದ್ದು ಅವರು ಕಬ್ಬನ್‌ಪಾರ್ಕ್‌ ಸಾರ್ವಜನಿಕ ಸ್ವತ್ತು. ಇಲ್ಲಿ ಡೇಟಿಂಗ್‌ ಚಟುವಟಿಕೆಗೆ ಏಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಸೂಕ್ತ ಉತ್ತರ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಬ್ಬನ್‌ಪಾರ್ಕ್‌ನಲ್ಲಿನ ವಿಶೇಷತೆಗಳು ಅಲ್ಲಿ ಲಭ್ಯವಿರುವ ಗಿಡಗಳು ಹಾಗೂ ಪ್ರೇಕ್ಷಣೀಯ ವಾತಾವರಣದ ಬಗ್ಗೆ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆ ವಿದ್ಯುನಾನ ವ್ಯವಸ್ಥೆ ಮಾಡಿದೆ. ಅದನ್ನು ಹೊರತು ಪಡಿಸಿ ಖಾಸಗಿ ವ್ಯಕ್ತಿಗಳಿಗೆ ಈ ರೀತಿ ದುರುಪಯೋಗಕ್ಕೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

RELATED ARTICLES

Latest News