Sunday, January 19, 2025
Homeಬೆಂಗಳೂರುಬ್ರೇಕ್ ಫೇಲ್ ಅಂಗಡಿಗಳಿಗೆ ನುಗ್ಗಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್

ಬ್ರೇಕ್ ಫೇಲ್ ಅಂಗಡಿಗಳಿಗೆ ನುಗ್ಗಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್

BMTC electric bus crashes into shops due to brake failure

ಬೆಂಗಳೂರು, ಜ.19-ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಬ್ರೇಕ್ ವಿಫಲಗೊಂಡು ರಸ್ತೆ ಬದಿ ಅಂಗಡಿಗಳಿಗೆ ನುಗ್ಗಿದ ಘಟನೆ ಇಂದು ಬೆಳಗ್ಗೆ ನಾಗದೇವನಹಳ್ಳಿಯಲ್ಲಿ ನಡೆದಿದೆ. ಬೆಳಿಗ್ಗೆ 6.30ರ ಸಂದರ್ಭದಲ್ಲಿ ಶಿರ್ಕೆ ವೃತ್ತದಿಂದ ನಾಗರಬಾವಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬ್ರೇಕ್ ವಿಫಲಗೊಂಡು ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಯ ಅಂಗಡಿ ಕಡೆಗೆ ನುಗ್ಗಿದೆ.

ಅಪಘಾತದಿಂದ ಬಸ್ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಾಳಾಗಿ ಅಪಾಯದಿಂದ ಪಾರಾಗಿದ್ದಾರೆ. ಅಂಗಡಿ ಬಳಿಯಿದ್ದ ಸಾರ್ವಜನಿಕರು ಕೂಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಸ್ನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.

RELATED ARTICLES

Latest News