ಬೆಂಗಳೂರು, ಡಿ.29– ವೇತನ ಪರಿಷ್ಕರಣೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದ್ದ ಬೆನ್ನಲ್ಲೆ ಇದೀಗ ಬಿಎಂಟಿಸಿ ನೌಕರರ ಮೇಲೆ ಬಿಎಂಟಿಸಿ ಆಡಳಿತ ಮಂಡಳಿ ಬ್ರಹಾಸ್ತ್ರ ಬಳಸಿದೆ.
ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿ ಅಧಿಸೂಚನೆ ಹೊರಡಿಸಿದ್ದು, ಅತ್ಯವಶ್ಯಕ ಸೇವೆಗಳ ಅಧಿನಿಯಮ-2013ರನ್ವಯ ಬಿಎಂಟಿಸಿ ಸೇವೆಯನ್ನು ಅತ್ಯವಶ್ಯಕ ಸೇವೆ ಎಂದು ಪರಿಗಣನೆ ಮಾಡಲಾಗಿದೆ. ಮುಂದಿನ ಆರು ತಿಂಗಳು ನೌಕರರು ಮುಷ್ಕರ ಮಾಡುವಂತಿಲ್ಲ.
ಜನವರಿ 1 ರಿಂದ ಅನ್ವಯವಾಗುವಂತೆ ಆರು ತಿಂಗಳು ಬಿಎಂಟಿಸಿ ನೌಕರರ ಮುಷ್ಕರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಬಿಎಂಟಿಸಿ ಭದ್ರತಾ ಮತ್ತು ಜಾಗೃತ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ನೌಕರರ ಮೂಲ ವೇತನವನ್ನು 25 ಪ್ರತಿಶತ ಹೆಚ್ಚಳ ಮಾಡಬೇಕು, ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಇನ್ನೂ 5010 ಕೋಟಿ ರೂ. ನೀಡಬೇಕಿದೆ. ಶಕ್ತಿ ಯೋಜನೆಯ 2000 ಕೋಟಿ ರೂ.ಬಿಡುಗಡೆ ಮಾಡಬೇಕು ಎಂದು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಉಮೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
2020ರಲ್ಲಿ ವೇತನ ಹೆಚ್ಚಳ ಘೋಷಿಸಿದ್ದರೂ 1750 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. 2024ರ ಜನವರಿಯಲ್ಲಿ ವೇತನ ಹೆಚ್ಚಳ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದಾಗಿ ನೌಕರರು ಪ್ರತಿಭಟನೆ ಮಾಡಲು ನಿರ್ಧರಿಸಿವೆ. ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಪದೇ ಪದೇ ನಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೂ ಏನೂ ಮಾಡಿಲ್ಲ. ಇದರಿಂದ ನೌಕರರು ಬೇಸತ್ತಿದ್ದು, ಮುಷ್ಕರ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಜನವರಿ 2020 ಮತ್ತು ಫೆಬ್ರವರಿ 2023ರ ವರೆಗೆ ಬಾಕಿ ಉಳಿದಿರುವ ಸರಿಸುಮಾರು 1785 ಕೋಟಿ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಪಾವತಿ ಮಾಡದ 2900 ಕೋಟಿ ರೂ. ಭವಿಷ್ಯ ನಿಧಿ ಇತ್ಯರ್ಥಗೊಳಿಸಲು ಬೇಡಿಕೆ ಇಡಲಾಗಿದೆ. ನಿವೃತ್ತ ನೌಕರರಿಗೆ 325 ಕೋಟಿ ರೂ. ತುಟ್ಟಿಭತ್ಯೆ ನೀಡಬೇಕಾಗಿದ್ದು, ಅದನ್ನು ಕೂಡಲೇ ಪಾವತಿ ಮಾಡಲು ಆಗ್ರಹಿಸಲಾಗಿದೆ. ಶಕ್ತಿ ಯೋಜನೆ ಜಾರಿ ಮಾಡಿದ ಬಳಿಕ ಯೋಜನೆಗೆ ಸಂಬಂಧಟ್ಟಂತೆ 2000 ಕೋಟಿ ರೂ. ಬಾಕಿ ನೀಡಬೇಕಿದ್ದು, ಕೂಡಲೇ ಪಾವತಿಸುವಂತೆ ಒತ್ತಾಯಿಸಲಾಗಿದೆ.
ಮುಷ್ಕರ ನಡೆಸುವ ಬಗ್ಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಡಿ.9ರಂದು ಬೆಳಗಾವಿ ಅಧಿವೇಶನದಲ್ಲಿಸರಕಾರದ ಗಮನಕ್ಕೆ ತಂದಿದೆ. ಕಾರ್ಮಿಕ ಇಲಾಖೆಯ ನಿಯಮಗಳ ಪ್ರಕಾರ, ಮುಷ್ಕರ ಮಾಡುವ ಮುನ್ನಾ 21 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ನೋಟಿಸ್ ನೀಡಿ ಗಮನಕ್ಕೆ ತಂದರೂ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರ 2900 ಕೋಟಿಯನ್ನು ಪಿಎಫ್ ರೂಪದಲ್ಲಿ ರಾಜ್ಯ ಸರ್ಕಾರವು ಸಂಬಳದಲ್ಲಿ ಕಡಿತ ಮಾಡಿದೆ. ನಾವು ಪಾವತಿಸಿದ ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಕೇಳಿದರೂ ನೀಡುತ್ತಿಲ್ಲವೆಂದು ಸರ್ಕಾರದ ವಿರುದ್ಧ ಆಕೋಶ ಹೊರಹಾಕಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಆದರೆ, ನಮ ಹೊಟ್ಟೆಗೆ ಇಲ್ಲವೆಂದ ಮೇಲೆ ಏನು ಮಾಡುವುದು? ಕುಟುಂಬದ ಪಾಡೇನು ಎಂದು ಪ್ರಶ್ನಿಸಿ, ಈ ಬಾರಿ ಎಸಾ ಜಾರಿ ಮಾಡಿದರೂ ಪರವಾಗಿಲ್ಲ. ನಾವು ಸಂಕಷ್ಟಕ್ಕೆ ಸಿಲುಕಿದ್ದು, ನ್ಯಾಯಬೇಕಿದೆ ಎಂಬುದು ಹೋರಾಟಗಾರರ ಒತ್ತಾಯವಾಗಿದೆ.
ಸಾರಿಗೆ ನೌಕರರ ಮೂಲ ವೇತನವನ್ನು 25 ಪ್ರತಿಶತ ಹೆಚ್ಚಳ ಮಾಡಬೇಕು. ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಇನ್ನೂ 5010 ಕೋಟಿ ರೂ. ನೀಡಬೇಕಿದೆ. ಶಕ್ತಿ ಯೋಜನೆಯ 2000 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಉಮೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
2020ರಲ್ಲಿ ವೇತನ ಹೆಚ್ಚಳ ಘೋಷಿಸಿದ್ದರೂ 1750 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. 2024ರ ಜನವರಿಯಲ್ಲಿ ವೇತನ ಹೆಚ್ಚಳ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದಾಗಿ ನೌಕರರು ಪ್ರತಿಭಟನೆ ಮಾಡಲು ನಿರ್ಧರಿಸಿವೆ.
ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಪದೇ ಪದೇ ನಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೂ ಏನೂ ಮಾಡಿಲ್ಲ. ಇದರಿಂದ ನೌಕರರು ಬೇಸತ್ತಿದ್ದು, ಮುಷ್ಕರ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ.
ಜನವರಿ 2020 ಮತ್ತು ಫೆಬ್ರವರಿ 2023ರ ವರೆಗೆ ಬಾಕಿ ಉಳಿದಿರುವ ಸರಿಸುಮಾರು 1,785 ಕೋಟಿ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಪಾವತಿ ಮಾಡದ 2,900 ಕೋಟಿ ರೂ.ಭವಿಷ್ಯ ನಿಧಿ ಇತ್ಯರ್ಥಗೊಳಿಸಲು ಬೇಡಿಕೆ ಇಡಲಾಗಿದೆ. ನಿವೃತ್ತ ನೌಕರರಿಗೆ 325 ಕೋಟಿ ರೂ.ತುಟ್ಟಿಭತ್ಯೆ ನೀಡಬೇಕಾಗಿದ್ದು, ಅದನ್ನು ಕೂಡಲೇ ಪಾವತಿ ಮಾಡಲು ಆಗ್ರಹಿಸಲಾಗಿದೆ. ಶಕ್ತಿ ಯೋಜನೆ ಜಾರಿ ಮಾಡಿದ ಬಳಿಕ ಯೋಜನೆಗೆ ಸಂಬಂಧಟ್ಟಂತೆ 2000 ಕೋಟಿ ರೂ.ಬಾಕಿ ನೀಡಬೇಕಿದ್ದು, ಕೂಡಲೇ ಪಾವತಿಸುವಂತೆ ಒತ್ತಾಯಿಸಲಾಗಿದೆ.