Saturday, December 14, 2024
Homeಬೆಂಗಳೂರುಜ.17ರಂದು ಟಿ-20 ಕ್ರಿಕೆಟ್ : ಬಿಎಂಟಿಸಿಯಿಂದ ಹೆಚ್ಚುವರಿ ಬಸ್

ಜ.17ರಂದು ಟಿ-20 ಕ್ರಿಕೆಟ್ : ಬಿಎಂಟಿಸಿಯಿಂದ ಹೆಚ್ಚುವರಿ ಬಸ್

ಬೆಂಗಳೂರು,ಜ.12- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಜನವರಿ 17ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ-20 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆಗೆ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೇವೆಯನ್ನು ಒದಗಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ ಕಾಡುಗೋಡಿ ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕೆಂಗೇರಿ ಕೆಎಚ್‍ಬಿ ವಸತಿ ಗೃಹಗಳು ಜನಪ್ರಿಯ ಟೌನ್‍ಶಿಪ್ ನೆಲಮಂಗಲ, ಯಲಹಂಕ 5ನೇ ಹಂತ, ಆರ್‍ಕೆ ಹೆಗಡೆನಗರ-ಯಲಹಂಕ, ಬಾಗಲೂರು, ಹೊಸಕೋಟೆಗೆ ಅಂದು ಹೆಚ್ಚುವರಿ ಬಸ್ ಸೌಲಭ್ಯವನ್ನು ಬಿಎಂಟಿಸಿ ಕಲ್ಪಿಸಲಿವೆ.

ಮಾರ್ಗಸಂಖ್ಯೆ ಎಸ್‍ಬಿಎಸ್ -1ಕೆ ಬಸ್ ಎಚ್‍ಎಎಲ್ ಮಾರ್ಗವಾಗಿ ಕಾಡುಕೋಡಿ ತಲುಪಲಿದೆ. ಎಸ್‍ಬಿಎಸ್-13ಕೆ ನಂಬರಿನ ಬಸ್ ಹೂಡಿ ಮಾರ್ಗವಾಗಿ ಕಾಡುಗೋಡಿ ಬಸ್ ನಿಲ್ದಾಣ ತಲುಪಲಿದೆ. ಜಿ-2 ಬಸ್ ಅಗರ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ, ಜಿ-3ಬಸ್ ಹೊಸೂರು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ, ಜಿ-4 ಜಯದೇವ ಆಸ್ಪತ್ರೆ ಮಾರ್ಗವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ತಲುಪಲಿದೆ.

ರಾಮಮಂದಿರ ಉದ್ಘಾಟನೆಗೆ ಯೋಗಿ ಬಿಟ್ಟರೆ ಬೇರೆ ಯಾವ ಸಿಎಂಗೂ ಇಲ್ಲ ಆಹ್ವಾನ

ಜಿ-6 ಬಸ್ ಮೈಸೂರು ರಸ್ತೆ, ನಾಯಂಡಹಳ್ಳಿ ಮಾರ್ಗವಾಗಿ ಕೆಂಗೇರಿ ಕೆಎಚ್‍ಬಿ ಕ್ವಾಟ್ರಸ್ ತಲುಪಿದರೆ ಜಿ-7 ಬಸ್ ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‍ಶಿಪ್ ಹಾಗೂ ಜಿ-8 ಬಸ್ ಯಶವಂತಪುರ ಮಾರ್ಗವಾಗಿ ನೆಲಮಂಗಲ ಸಂಚರಿಸಲಿದೆ. ಜಿ-9 ಬಸ್ ಹೆಬ್ಬಾಳ ಮಾರ್ಗವಾಗಿ ಯಲಹಂಕ 5ನೇ ಹಂತ, ಜಿ-10ರ ಬಸ್ ನಾಗವಾರ, ಟಾನರಿ ರಸ್ತೆ ಮೂಲಕ ಹೆಗಡೆನಗರ, ಯಲಹಂಕ ತಲುಪಲಿದೆ.

ಜಿ-11ರ ಬಸ್ ಹೆಣ್ಣೂರು ರಸ್ತೆ ಮೂಲಕ ಬಾಗಲೂರುವರೆಗೆ ಸಂಚರಿಸಲಿದ್ದು, ಕೆಎಚ್‍ಬಿ-12 ಎಚ್‍ಕೆ ಬಸ್ ಟಿನ್ ಫ್ಯಾಕ್ಟ್ರಿ ಮೂಲಕ ಹೊಸಕೋಟೆವರೆಗೂ ಸಂಚರಿಸಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

RELATED ARTICLES

Latest News