ಬೆಂಗಳೂರು,ಮಾ.10- ಬಿಎಂಟಿಸಿ ಸಂಸ್ಥೆಯು ಆಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕ್ಸ್ ಮೂಲಕ ಪ್ರದಾನಿಸಲಾದ ರಾಷ್ಟ್ರೀಯ ಪಬ್ಲಿಕ್ ಬಸ್ ಟ್ರಾನ್ಸ್ಪೋರ್ಟ್ ಎಕ್ಸಲ್ಸೆ್ ಪ್ರಶಸ್ತಿಯನ್ನು ಡಿಜಿಟಲ್ ಪ್ರಾಕ್ಟಿಸಸ್ ಅಡಿಯಲ್ಲಿ ಹೊಸ ಉಪಕ್ರಮಗಳ ವಿಭಾಗದಲ್ಲಿ ಪಡೆದಿದೆ.
ಈ ಪ್ರಶಸ್ತಿ ಬೆಂ.ಮ.ಸಾ.ಸಂಸ್ಥೆಯ ಮೆಟ್ರೋ ಫೀಡರ್ ಕ್ಯೂಆರ್‌ಕೋಡ್ ಸೇವೆಗಳನ್ನು ಗುರುತಿಸುತ್ತದೆ, ಇದು ಪ್ರಯಾಣಿಕರ ಅನುಕೂಲಕ್ಕೆ ತೊಡಗಿಸಿಕೊಳ್ಳುವ ಅನುಭವವನ್ನು ಹೆಚ್ಚಿಸಲು ಗುರಿ ಇಟ್ಟಿದೆ. ಈ ಸಾಧನೆ ಬೆಂ.ಮ.ಸಾ.ಸಂಸ್ಥೆ ಸಾರ್ವಜನಿಕ ಸಾರಿಗೆಯನ್ನು ಆಧುನಿಕಗೊಳಿಸಲು ಮತ್ತು ಡಿಜಿಟಲ್ ಪರಿಹಾರಗಳ ಮೂಲಕ ಸೇವಾ ಸರಬರಾಜು ಮಾಡುವ ಬದ್ಧತೆಯನ್ನು ಪ್ರತ್ಯಕ್ಷಗೊಳಿಸುತ್ತದೆ.
ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿವೆ. ಒಕ್ಕೂಟವು 13-08-1965 ರಂದು ಅಸ್ತಿತ್ವಕ್ಕೆ ಬಂದಿತು. ಇದು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವತಿಯಿಂದ ನವದೆಹಲಿಯಲ್ಲಿ ಆಯೋ ಜಿಸಿದ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್, ಅಧಿಕಾರಿ ಡಾ.ಕಿರಣ್ ಬೇಡಿ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಮಸಾಸಂಸ್ಥೆಯ ಗಣಕ ಶಾಖೆಯ ಸಹಾಯಕ ಸಂಚಾರ ಅಧೀಕ್ಷಕರಾದ ಯಶೋಧ.ಬಿ.ಎಸ್ ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಇದೇ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಮಸಾಸಂಸ್ಥೆಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸವಿತಾ, ಸಿ.ಎನ್.ಕುಸುಮ, ಮಂಜುಳಾ ರವರುಗಳಿಗೆ ಸಂಸ್ಥೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಸನಾನಿಸಲಾಯಿತು. ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕ ಮತ್ತು ಎಎಸ್‌ಆರ್ ಟಿಯು ನಿರ್ವಾಹಕ ನಿರ್ದೇಶಕ ಸೂರ್ಯಕಿರಣ್ ಇದ್ದರು.