ಕಹುಲುಯಿ (ಹವಾಯಿ),ಡಿ.26– ಯುನೈಟೆಡ್ ಏರ್‌ಲೈನ್ಸ್ ನ ವಿಮಾನ ಚಕ್ರದ ರಂದ್ರದಲ್ಲಿ ಮೃತದೇಹ ಪತ್ತೆಯಾಗಿದೆ.ಕಾಗೋದಿಂದ ಕಹುಲುಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೋಯಿಂಗ್ 787-10 ಫ್ಲೈಟ್ 202 ರಲ್ಲಿ ಮುಖ್ಯ ಲ್ಯಾಂಡಿಂಗ್ ಗೇರ್‌ಗಳ ಚಕ್ರದ ರಂದ್ರದಲ್ಲಿ ಶವ ಪತ್ತೆಯಾಗಿದೆ.
ವಿಮಾನ ಚಕ್ರಗಳು ಸುರಕ್ಷತೆಗಾಗಿ ವಿಶಾಲ ರಂದ್ರವಿರುತ್ತದೆ ಅಲ್ಲಿ ಹೇಗೆ ಮೃತ ದೇಹ ಬಂತು ಎಂಬ ಬಗ್ಗೆ ಮಾಯಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಹೊರಗಿನಿಂದ ವ್ಯಕ್ತಿ ಮಾತ್ರ ಇದರೊಳಗೆ ಪ್ರವೇಶಿಸಬಹುದು ಮತು ಯಾವಾಗ ಪ್ರವೇಶಿಸಿದ ಎಂಬುದು ಅಸ್ಪಷ್ಟವಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಯುನೈಟೆಡ್ ಏರ್‌ಲೈನ್‌್ಸ ಅಥವಾ ಮಾಯಿ ಪೊಲೀಸ್ ಇಲಾಖೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ಆದರೆ ಇದು ವಿಚಿತ್ರವಾದ ಪ್ರಕರಣವಾಗಿದ್ದು ತನಿಖೆ ಕುತೂಹಲ ಕೆರಳಿಸಿದೆ.