ಮುಂಬೈ, ಡಿ.11- ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿ ಸ್ತ್ರೀ 2 ಚಿತ್ರದ ನಟ ಮುಷ್ತಾಖ್ ಖಾನ್ ಅವರನ್ನು ಅಪಹರಿಸಿ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿರುವ ಘಟನೆ ಮೀರತ್ನಲ್ಲಿ ನಡೆದಿದೆ.ಆದರೆ, ಸೇಮ್ ಸಿನಿಮಾ ಹೀರೋಗಳಂತೆ ಖಾನ್ ಕೂಡ ಅಪಹರಣಕಾರರಿಂದ ಸಿನಿಮಿಯ ರೀತಿಯಲ್ಲಿ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಜನಪ್ರಿಯತೆ ಪಡೆಯಲು, ಟಿವಿ-ಪೇಪರ್ಗಳಲ್ಲಿ ಹೆಸರು ಬರಬೇಕು ಎಂಬ ಕಾರಣಕ್ಕೆ ಅವಾರ್ಡ್ ಫಂಕ್ಷನ್ಗಳನ್ನು ಮಾಡಿ, ದೊಡ್ಡ ದೊಡ್ಡ ಕಲಾವಿದರನ್ನು ಕರೆಸಿ, ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಕೊಡುವುದನ್ನು ನೀವು ಕೇಳಿರುತ್ತೀರಿ. ಆದರೆ, ಇಲ್ಲಿ ಅವಾರ್ಡ್ ಕಾರ್ಯಕ್ರಮದ ಹೆಸರಲ್ಲಿ ನಟನನ್ನೇ ಕಿಡ್ನ್ಯಾಪ್ ಮಾಡಲಾಗಿದೆ. ಇದಕ್ಕಾಗಿ ಆ ನಟನಿಗೆ ಅಡ್ವಾನ್ಸ್ ಹಣ ಕೊಟ್ಟು ಅವರನ್ನು ತಮ ಬಳಿ ಕರೆಸಿಕೊಂಡಿದ್ದಾರೆ.
ವೆಲ್ಕಮ್, ಸ್ತ್ರೀ 2 ಚಿತ್ರಗಳಲ್ಲಿ ನಟಿಸಿರೋ ಮುಷ್ತಖ್ ಖಾನ್ ಅವರನ್ನು ಮೀರತ್ನಲ್ಲಿ ಅವಾರ್ಡ್ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ, ಅದಕ್ಕೆ ನೀವು ಬರಬೇಕು ಎಂದು ಮುಷ್ತಖ್ ಅವರಿಗೆ ಆಮಂತ್ರಣ ಬಂದಿತ್ತು. ಇಷ್ಟೇ ಆಗಿದ್ದರೆ ಅವರು ಅವಾರ್ಡ್ ಕಾರ್ಯಕ್ರಮಕ್ಕೆ ತೆರಳುವುದು ಹಾಗಿರಲಿ ಅದನ್ನು ನಂಬುತ್ತಲೂ ಇರಲಿಲ್ಲ. ಆದರೆ, ನಟನಿಗೆ ನಂಬಿಕೆ ಬರಬೇಕು ಎಂಬ ಕಾರಣಕ್ಕೆ ಫ್ಲೈಟ್ ಟಿಕೆಟ್ ಅರೇಂಜ್ ಮಾಡಿ, ಅಡ್ವಾನ್ಸ್ ಹಣವನ್ನು ಕೂಡ ಹಾಕಿದ್ದರು.
ಹೀಗಾಗಿ ಮುಷ್ತಖ್ ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ದೆಹಲಿ ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ಅವರನ್ನು ಪಿಕ್ ಮಾಡಲು ಕಾರು ಕೂಡ ಬಂತು. ಆದರೆ, ನಂತರ ಅವರನ್ನು ಅಪಹರಿಸಲಾಯಿತು.
ಅಪಹರಣ ಮಾಡಿದ ವ್ಯಕ್ತಿಗಳು ಮುಷ್ತಖ್ ಅವರಿಂದ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅವರು ಅಷ್ಟು ಹಣವಿಲ್ಲ ಎಂದಾಗ ಅವರಿಂದ 2 ಲಕ್ಷ ರೂಪಾಯಿ ಮಾತ್ರ ಕಿತ್ತುಕೊಂಡರು. ನಂತರ ಅವರು ಮುಂಜಾನೆ ಅಪಹರಣಕಾರರು ಪ್ರಾರ್ಥನೆ ಮಾಡುತ್ತಿದ್ದಾರೆ ಅವರು ಸಿನಿಮಿಯ ಮಾದರಿಯಲ್ಲಿ ತಪ್ಪಿಸಿ ಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.