ಮುಂಬೈ, ಫೆ.10- ಬಾಲಿವುಡ್‌ನ ಖ್ಯಾತ ನಟಿ ಕಾಜೋಲ್ ಜೊತೆ ದಿ ಟ್ರೈಲ್ ವೆಬ್‌ಸೀರಿಸ್‌ನಲ್ಲಿ ನಟಿಸಿದ್ದ ನಟಿ ನೂರ್ ಮಬಾಲಿಕಾ ಅವರು ತಮ ಮನೆಯಲ್ಲೇ ಆತಹತ್ಯೆಗೆ ಶರಣಾಗಿದ್ದಾರೆ. ಜೂನ್ 6 ರಂದೇ ಮಬಾಲಿಕಾ ಅವರು ತಾವು ವಾಸಿಸುತ್ತಿದ್ದ ಮನೆಯಲ್ಲಿ ಆತಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೂರ್ ಮಬಾಲಿಕಾ ಅವರು ವಾಸವಿದ್ದ ಮನೆಯಲ್ಲಿ ಏನೋ ಕೊಳೆತ ವಾಸನೆ ಬರುತ್ತಿದ್ದು, ಒಳಗಡೆಯಿಂದ ಡೋರ್ ಲಾಕ್ ಹಾಕಿದ್ದರಿಂದ ಅನುಮಾನ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಜೂನ್ 6 ರಂದೇ ನಟಿಯು ಆತಹತ್ಯೆಗೆ ಶರಣಾಗಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ ಆಕೆ ಯಾಕೆ ಆತಹತ್ಯೆ ಮಾಡಿಕೊಂಡಿರುವ ವಿಷಯ ಸದ್ಯಕ್ಕೆ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಮೂಲತಃ ಅಸ್ಸಾಮ್ ಮೂಲದ ನೂರ್ ಮಬಾಲಿಕಾ ಅವರು ಆರಂಭದಲ್ಲಿ ಕಾತರ್ ಏರ್‌ವೇಸ್‌ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸಿದ್ದು ಬಣ್ಣದ ಲೋಕದ ಸೆಳೆತದಿಂದಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಮಬಾಲಿಕಾ ಅವರು ಶಿಕ್ಷಣ್',
ವಾಲ್ಕಾಮನ್’,ಟೆಕ್ಕಿ ಚಟ್ನಿ',
ಜಗನಯಾ ಉಪಾಯ’, ಚರ್ಮಸುಖ್',
ದೇಖಿ ಅಂಧಿಕಿ’ ಎಂಬ ಸಿನಿಮಾ ಹಾಗೂ ವೆಬ್‌ಸೀರೀಸ್‌ನಲ್ಲಿ ನಟಿಸಿದ್ದು, ಇವರು ಹಾಗೂ ಕಾಜೋಲ್ ನಟಿಸಿದ್ದ `ದಿ ಟ್ರೈಲ್’ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಿತ್ತು.