ಬೆಂಗಳೂರು,ಮಾ.7- ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾಯಾಗಿರುವ ಆರೋಪಿಯ ತೀವ್ರ ಶೋಧದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ದೃಶ್ಯಗಳು ವೈರಲ್ಲಾಗುತ್ತಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ರೇಖಾಚಿತ್ರಕಾರರೊಬ್ಬರು ಆರೋಪಿಯ ಹೋಲುವ ಕೆಲ ಚಿತ್ರಗಳನ್ನು ಬರೆದು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇದನ್ನು ಎನ್‍ಐಎ ಮತ್ತು ಬೆಂಗಳೂರು ನಗರ ಪೊಲೀಸ್ ಖಾತೆಗಳಿಗೂ ಟ್ಯಾಗ್ ಮಾಡಿದ್ದಾರೆ.
ಆರೋಪಿಯು ಮಾಸ್ಕ್, ಟೋಪಿ, ಕನ್ನಡಕ ಧರಿಸಿ ಹೇಗೆ ಕಾಣುತ್ತಾನೆ ಮತ್ತು ಟೋಪಿ, ಮಾಸ್ಕ್
ಇಲ್ಲದೆ ಹೇಗೆ ಕಾಣಬಹುದು ಎಂಬುದನ್ನ ತಮ್ಮದೇ ಕಲ್ಪನೆಯಲ್ಲಿ ಚಿತ್ರಕಾರ ಹರ್ಷ ಊಹಿಸಿಕೊಂಡು ಪೂರ್ತಿ ಮುಖದ ರೇಖಾಚಿತ್ರ ಬಿಡಿಸಿದ್ದಾರೆ. ಈ ಚಿತ್ರಗಳನ್ನು ತಮ್ಮ ಅಕೃತ ಜಾಲತಾಣ ಎಕ್ಸ್‍ನಲ್ಲಿ ಪೊಸ್ಟ್ ಮಾಡಿ ತನಿಖಾ ಸಂಸ್ಥೆಗಳಿಗೆ ಈ ರೇಖಾಚಿತ್ರಗಳು ಸಹಾಯವಾಗಬಹುದು ಎಂದು ಬರೆದುಕೊಂಡಿದ್ದಾರೆ.
ಆರೋಪಿಯ ಬಗ್ಗೆ ಎನ್‍ಐಎಗೆ ಮಾಹಿತಿ ನೀಡಿದರೆ 10 ಲಕ್ಷ ರೂ. ಬಹುಮಾನ ಘೋಷಿಸಿದ್ದು, ಸಾರ್ವಜನಿಕರು ಸಹ ಈ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಆರೋಪಿಯ ಪತ್ತೆ ಕಾರ್ಯಕ್ಕೆ ಸಹಾಯವಾಗಲಿದೆ.