ಬೆಂಗಳೂರು,ಡಿ.5- ನಗರದ ಶಾಲೆಗಳಿಗೆ ಇಮೇಲ್ ಮುಖಾಂತರ ಬಂದಿದ್ದ ಬೆದರಿಕೆ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 27 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಇದೇ ರೀತಿ ಆರು ಪ್ರಕರಣಗಳು ದಾಖಲಾಗಿದ್ದವು ಮತ್ತು ಈಗ 27 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಳೆದ ವರ್ಷ ರಾಜರಾಜೇಶ್ವರಿನಗರ ಮತ್ತು ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಗಳಿಗೆ ಬಂದಿದ್ದ ತಲಾ ಎರಡು ಪ್ರಕರಣಗಳನ್ನು ಬೇಧಿಸಿ ಅವು ಅಲ್ಲಿನ ವ್ಯಕ್ತಿಗಳೇ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿತ್ತು.
ಕಳೆದ ವರ್ಷ ಆರು ಪ್ರಕರಣಗಳು ಮತ್ತು ಈಗ ದಾಖಲಾಗಿರುವ 27 ಪ್ರಕರಣಗಳ ತನಿಖೆಯ ಪ್ರಗತಿ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಂದಿನ ತನಿಖೆಗಾಗಿ ಸಿಬಿಐ ಇಂಟರ್‍ಪೋಲ್ ಸೇರಿದಂತೆ ಇತರ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.
ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸರ್ಕಾರ ಕಾಲಾಹರಣ : ಬಿಜೆಪಿ ಆಕ್ರೋಶ
ಅಮೆರಿಕ, ಜರ್ಮನಿ, ಮಲೇಷ್ಯಾ ಸೇರಿ ಅನೇಕ ಕಡೆ ವಿಶ್ವಯಾದ್ಯಂತ ಇದೇ ರೀತಿಯ ಬೆದರಿಕೆ ಸಂದೇಶಗಳು ಬಂದಿವೆ. ಅವುಗಳ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ಕಳೆದ ಬಾರಿಯ ಬೆದರಿಕೆ ಸಂದೇಶಕ್ಕೂ ಈ ಬಾರಿ ಬೆದರಿಕೆ ಪತ್ರದಲ್ಲಿರುವ ಸಾರಾಂಶ ವಿಭಿನ್ನವಾಗಿದ್ದು, ಬೇರೆ ಬೇರೆ ಇಮೇಲ್ ವಿಳಾಸ ಬಳಸಿ ಬೆದರಿಕೆ ಹಾಕಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಅಸಂಘಟಿತ ಕಾರ್ಮಿಕ ವಲಯಗಳಿಗೆ ಇಎಸ್‍ಐ, ಪಿಎಫ್ ಸೌಲಭ್ಯ
ವಿಪಿಎನ್ ಮತ್ತು ಫ್ಯಾಕ್ಸೊ ಸರ್ವರ್ ಬಳಸುವುದರಿಂದ ಐಪಿ ಅಡ್ರೆಸ್ ಪತ್ತೆಹಚ್ಚಲು ಸ್ವಲ್ಪ ಕಷ್ಟವಾಗುತ್ತದೆ. ಸೈಬರ್ ತಜ್ಞರ ನೆರವು ಪಡೆದು ಪ್ರಕರಣವನ್ನು ಬೇಧಿಸುತ್ತೇವೆ ಎಂದರು. ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡದೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮತ್ತಿಬ್ಬರು ನರ್ಸ್‍ಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.