ಬೆಂಗಳೂರು,ಮಾ.6- ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಸೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ತಪಾಸಣೆಯನ್ನು ಚುರುಕುಗೊಳಿಸಿದೆ. ಲಗೇಜ್ ಬ್ಯಾಗ್ಗಳನ್ನು ಪೊಲೀಸರು ಖುದ್ದು ಪರಿಶೀಲನೆಗೊಳಪಡಿಸುತ್ತಿದ್ದು, ಸೋಟಕ ಪತ್ತೆ ಯಂತ್ರಗಳ ಮೂಲಕ ತಪಾಸಣೆ ನಡೆಸುತ್ತಿದ್ದಾರೆ.
ಅನುಮಾನ ಬಂದ ಕಡೆ ಬ್ಯಾಗ್ಗಳನ್ನು ಇಂಚಿಂಚೂ ಪರಿಶೀಲನೆಗೊಳಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪೊಲೀಸ್ ಆಯುಕ್ತರು, ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಇ-ಮೇಲ್ ಬಂದಿದ್ದು, ಅದರಲ್ಲಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಒಂದು ವೇಳೆ ಹಣ ನೀಡದೇ ನಿರ್ಲಕ್ಷಿಸಿದರೆ ಮುಂದಿನ ಹಂತದಲ್ಲಿ ಅಂಬಾರಿ ಉತ್ಸವ ಬಸ್ಗಳಲ್ಲಿ ಬಾಂಬ್ ಸೋಟ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ಜನನಿಬಿಡ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮುಂಜಾಗ್ರತಾ ಕ್ರಮ ವಹಿಸಲು ಪೊಲೀಸರಿಗೆ ಸೂಚನೆ ನೀಡಿದೆ.ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಪ್ರತಿಯೊಂದು ಲಗೇಜ್ ಬ್ಯಾಗ್ಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಬಸ್ಗಳಲ್ಲೂ ಕೂಡ ಅನಾಮಧೇಯ ಬ್ಯಾಗ್ಗಳನ್ನು ಪರಿಶೀಲಿಸಲಾಗುತ್ತಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನಗರದಲ್ಲಿ ಮಾ.1 ರಂದು ರಾಮೇಶ್ವರಂ ಕೆಫೆ ಸೋಟದ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿದೆ.ಸೋಟಗೊಳಿಸಿದ ದುಷ್ಕøತ್ಯವೆಸಗಿದ ಆರೋಪಿಯನ್ನು ಪತ್ತೆ ಹಚ್ಚಲು 5 ದಿನ ಕಳೆದರೂ ಬಂಸಲಾಗಿಲ್ಲ. ಅತ್ಯಂತ ವ್ಯವಸ್ಥಿತವಾಗಿ ನಡೆದಿರುವ ಸೋಟ ಪ್ರಕರಣ ಪೊಲೀಸರಿಗಷ್ಟೇ ಅಲ್ಲ, ರಾಷ್ಟ್ರೀಯ ತನಿಖಾ ದಳಕ್ಕೂ ಸವಾಲಾಗಿದೆ.ಈ ನಡುವೆ ಕಳೆದ ನಾಲ್ಕು ದಿನಗಳ ಹಿಂದೆ ಪ್ರಮುಖರ ಕಚೇರಿಗಳಿಗೆ ಬಂದಿದ್ದ ಇ-ಮೇಲ್ ಬೆದರಿಕೆ ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ.